ಶಿವಮೊಗ್ಗ: ಗ್ರಾಮಪಂಚಾಯಿತಿ ಚುನಾವಣಾ ವಿಚಾರವಾಗಿ ಘರ್ಷಣೆ; ಗಲಾಟೆಯ ವಿಚಾರವಾಗಿ ಆಯುಧದಿಂದ ಇರಿದು ಕೊಲೆ; ಆರೋಪಿಗಳಿಗೆ ಜೀವಾವಧಿ ಶಿಕ್ಷೆ

 ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳೆಬೆನವಳಿ ಗ್ರಾಮದ ವಾಸಿ ಮಹೇಶ್ ನಾಯ್ಕ್, 40 ವರ್ಷ ಈತನಿಗೂ  ಮತ್ತು ಪರಿಚಯಸ್ಥರಾದ ಕುಮಾರ ನಾಯ್ಕ್, ಫೀರ್ಯಾನಾಯ್ಕ್, ಚಿನ್ನಾ ನಾಯ್ಕ್ ಮತ್ತು ಮಧು @ ಮಧುಕುಮಾರ್ ರವರುಗಳಿಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ಆದ ಗಲಾಟೆಯ ವಿಚಾರವನ್ನು  ಮನಸ್ಸಿನಲ್ಲಿ ಇಟ್ಟುಕೊಂಡು ದಿನಾಂಕ 5-05-2017 ರಂದು ಮದ್ಯಾಹ್ನ ತಮ್ಮ ಬೈಕ್ ನಲ್ಲಿ ಹೊಳೆಬೆನವಳಿ ಸಣ್ಣ ತಾಂಡಾದ ಚಾನೆಲ್ ಮೇಲೆ ಹೋಗುತ್ತಿದ್ದಾಗ ಆರೋಪಿತರೆಲ್ಲರೂ ಸೇರಿ ಮಹೇಶ ನಾಯ್ಕ್  ನನ್ನು ಅಡ್ಡಗಟ್ಟಿ ಹರಿತವಾದ ಆಯುಧದಿಂದ ಕುತ್ತಿಗೆ ಮತ್ತು ಮೈ ಕೈಗೆ ಹಲ್ಲೆ ಮಾಡ ಕೊಲೆ ಮಾಡಿರುತ್ತಾರೆಂದು ಮೃತನ ಪತ್ನಿ ನೀಡಿದ ಮೇರೆಗೆ ಗುನ್ನೆ ಸಂಖ್ಯೆ 0175/2017 ಕಲಂ 143,302 ಸಹಿತ 149 ಐಪಿಸಿ ರೀತ್ಯಾ ಪ್ರಕರಣದ ದಾಖಲಿಸಿಕೊಳಲಾಗಿರುತ್ತದೆ.



  ಆಗಿನ ತನಿಖಾಧಿಕಾರಿಗಳಾದ ಶ್ರೀ ಗಂಗಾದರಪ್ಪ ಆರ್.ವಿ ಸಿಪಿಐ ಶಿವಮೊಗ್ಗ ಗ್ರಾಮಾಂತರ ವೃತ್ತರವರು ಪ್ರಕರಣದ ತನಿಖೆ ಕೈಕೊಂಡು ಆರೋಪಿತರ ವಿರುದ್ದ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ. 

ಶ್ರೀಮತಿ ಪುಷ್ಪ, ಸರ್ಕಾರಿ ಅಭಿಯೋಜಕರವರು ಪ್ರಕರಣದ ವಾದ ಮಂಡಿಸಿದ್ದು, 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಶ್ರೀಮತಿ ಬಿ.ಆರ್ ಪಲ್ಲವಿ  ರವರು ದಿನಾಂಕ 10-03-2023 ರಂದು ಆರೋಪಿತರಾದ ಕುಮಾರ್ ನಾಯ್ಕ್, 36 ವರ್ಷ, ಹೊಳೆಬೆನವಳಿ ಶಿವಮೊಗ್ಗ, ಫೀರ್ಯಾ ನಾಯ್ಕ, 38 ವರ್ಷ, ಹೊಳೆಬೆನವಳಿ, ಶಿವಮೊಗ್ಗ, ಚಿನ್ನಾನಾಯ್ಕ್, 32 ವರ್ಷ, ಹೊಳೆಬೆನವಳಿ, ಶಿವಮೊಗ್ಗ, ಮತ್ತು ಮಧುಕುಮಾರ್ @  ಮಧು, 19 ವರ್ಷ, ಮುಸ್ಸೆನಾಳ್ ಗ್ರಾಮ ಶಿವಮೊಗ್ಗ ರವರುಗಳ ವಿರುದ್ದ ಕಲಂ 143,302 ಸಹಿತ 149 ಐಪಿಸಿ ಕಾಯ್ದೆ ಅಡಿಯಲ್ಲಿ ಆರೋಪ ದೃಡಪಟ್ಟ ಹಿನ್ನಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು 23.500/- ರೂ ದಂಡ , ದಂದ ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 03 ವರ್ಷ ಸಾದಾ ಶಿಕ್ಷೆ ನೀಡಿ ಆದೇಶ ನೀಡಿರುತ್ತಾರೆ.


Post a Comment

Previous Post Next Post