ಬೇಂಗಳೂರು: ಕೆ ಎಸ್ ಡಿ ಎಲ್ ಅಧ್ಯಕ್ಷ, ಬಿಜೆಪಿ ಶಾಸಕ ಮಾಡಳು ವಿರೂಪಾಕ್ಷ ಅವ್ರ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ಅವರ ಪುತ್ರ ಲೋಕಾಯಿಕ್ತ ಬಲೆಗೆ ಬಿದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಲೋಕಾಯುಕ್ತ ಪೊಲೀಸರ ಬಿಗ್ ಟ್ರ್ಯಾಪ್ ಇದಾಗಿದೆ, ಬಿ ಡಬ್ಲ್ಯೂ ಎಸ್ ಎಸ್ ಬಿ ಚೀಫ್ ಅಕೌಂಟೆಂಡ್ ಪ್ರಶಾಂತ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದು, 40 ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, 80 ಲಕ್ಷ ರೂಪಾಯಿ ಹಣ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಚ್ಚಾವಸ್ತುಗಳ ಟೆಂಡರ್ ಡೀಲ್ ಗಾಗಿ ಲಂಚದ ಬೇಡಿಕೆ ಇಟ್ಟಿದ್ದ ಅಕೌಂಟೆಂಟ್ ಪ್ರಶಾಂತ್ ಲೋಕಾಯುಕ್ತದ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಎಸ್ ಪಿ ಅಶೋಕ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿತ್ತು. ಕುಮಾರ ಕೃಪ ಸಮೀಪದ ನಿವಾಸವೊಂದರಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಪ್ರಶಾಂತ್ ಸಿಕ್ಕಿಬಿದ್ದಿದ್ದು ಟೆಂಡರ್ ಕೊಡಿಸುವ ವಿಚಾರದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಲೋಕಾಯಿಕ್ತ ದಾಳಿಯ ವೇಳೆ ಒಂದು ಕೋಟಿ 62 ಲಕ್ಷ ರೂಪಾಯಿ ಸಿಕ್ಕಿದೆ. ವ್ಯಕ್ತಿಯೊಬ್ಬರಿಂದ 40 ಲಕ್ಷ ರೂಪಾಯಿ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದರು, ಟ್ರಾಫ್ ಮಾಡಿದ ಬಳಿ 40 ಲಕ್ಷ ಹಣ ಸೇರಿ ಒಟ್ಟು ಒಂದು ಕೋಟಿ 62 ಲಕ್ಷ ಪತ್ತೆ ಮನೆಯಲ್ಲಿ ಸಿಕ್ಕಿದೆ.
ಹಲವು ಸ್ಥಳಗಳಲ್ಲಿ ಏಕ ಕಾಲಕ್ಕೆ ದಾಳಿ ಮಾಡಲಾಗುತ್ತಿದೆ, ಸದ್ಯ ಕಛೇರಿಯಲ್ಲಿ ಸಿಕ್ಕಿರೋ ಹಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯಿಕ್ತ ಐಜಿಪಿ ಸುಬ್ರಮಣ್ಯರಾವ್ ತಿಳಿಸಿದ್ದಾರೆ.
Post a Comment