ಶಿವಮೊಗ್ಗ: ರೌಡಿ ಚಟುವಟಿಕೆಗಳನ್ನು ನಡೆಸುತ್ತಾ ಸಮಾಜಕ್ಕೆ ಹಾನಿಮಾಡುತ್ತಿದ್ದ 3 ವ್ಯಕ್ತಿಗಳನ್ನು ಒಂದು ವರ್ಷ ಚಿಕ್ಕಮಗಳೂರು ಜಿಲ್ಲೆಗೆ ಗಡಿಪಾರು.

ಶೇಕ್ ಹುಸೇನ್, 39 ವರ್ಷ, ಸೀಗೆಬಾಗಿ, ಭಧ್ರಾವತಿ ಟೌನ್ ಮತ್ತು ತನ್ವಿ ಪಾಷಾ, 33 ವರ್ಷ, ಸೀಗೆಬಾಗಿ, ಭದ್ರಾವತಿ ಟೌನ್ ಇವರುಗಳು ಸಮಾಜಕ್ಕೆ ಧಕ್ಕೆಯಾಗುವಂತಹ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಕೃತ್ಯಗಳಾದ ಓಸಿ/ಮಟಕಾ ಜೂಜಾಟ ಆಡುವ ಮತ್ತು ಆಡಿಸುವ ಪ್ರವೃತ್ತಿ ಇದ್ದು, ರೌಡಿ ಚಟುವಟಿಕೆಯಲ್ಲೂ ಸಹ ಭಾಗಿಯಾಗಿರುತ್ತಾರೆ ಹಾಗೂ ಧನುಶ್@ ಧನು, 23 ವರ್ಷ, ಬಂಡಾರಳಿ, ಭದ್ರಾವತಿ ಈತನು ಸಾರ್ವಜನಿಕ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನ ಮಾಡುವುದು ಮತ್ತು ಸಾರ್ವಜನಿಕವಾಗಿ ಅಪಾಯಕಾರಿ ಆಯುಧಗಳನ್ನು ತೋರಿಸುತ್ತಾ ಜನರಲ್ಲಿ ಭೀತಿಯನ್ನುಂಟು ಮಾಡುವ ಮೂಲಕ ಸಾರ್ವಜನಿಕರ ಆಸ್ತಿ ಮತ್ತು ಜೀವ ಹಾನಿಪಡಿಸುವ ಅಪಾಯವಿದ್ದು, ಸದರಿ ಕೃತ್ಯಗಳನ್ನು ಯಾವುದೇ ಕಾನೂನಿನ ಭಯವಿಲ್ಲದೇ ಮುಂದುವರೆಸಿಕೊಂಡು ಬಂದಿರುತ್ತಾರೆ. 

 ಶೇಕ್ ಹುಸೇನ್, ಈತನ ವಿರುದ್ದ ಒಟ್ಟು 08 ಪ್ರಕರಣಗಳು ದಾಖಲಾಗಿದ್ದು, ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆಯನ್ನು ತೆರೆಯಲಾಗಿರುತ್ತದೆ ಮತ್ತು ತನ್ವೀರ್ ಪಾಷಾ ಈತನ ವಿರುದ್ದ ಒಟ್ಟು 16 ಪ್ರಕರಣಗಳು ದಾಖಲಾಗಿದ್ದು, ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆಯನ್ನು ತೆರೆಯಲಾಗಿರುತ್ತದೆ ಮತ್ತು ಧನುಶ್@ ಧನು ಈತನ ವಿರುದ್ದ ಒಟ್ಟು 03 ಪ್ರಕರನಗಳು ದಾಖಲಾಗಿದ್ದು, ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆಯನ್ನು ತೆರೆಯಲಾಗಿರುತ್ತದೆ.

ಆದರೂ ಸಹಾ ಇವರುಗಳು ತಮ್ಮ ನಡವಳಿಕೆಯಲ್ಲಿ ಸುಧಾರಣೆ ಮಾಡಿಕೊಳ್ಳದೇ ತಮ್ಮ ಚಟುವಟಿಕೆಯನ್ನು ತಡೆಯುವ ಸಲುವಾಗಿ ಶೇಕ್ ಹುಸೇನ್, ತನ್ವೀರ್ ಪಾಷಾ ಮತ್ತು ಧನುಷ್ @ಧನು ರವರುಗಳನ್ನು ಗಡಿಪಾರು ಮಾಡುವಂತೆ ಪೊಲೀಸ್ ವೃತ್ತ ರವರು ನೀಡಿದ ವರದಿಯ ಮೇರೆಗೆ ಉಪ ವಿಭಾಗೀಯ ದಂಡಾಧಿಕಾರಿ ಮತ್ತು ಉಪ ವಿಭಾಗ ರವರು ಸದರಿ ಮೂರು ಜನರನ್ನು ದಿನಾಂಕ 13-03-2023 ರಿಂದ ದಿನಾಂಕ 13-03-2024 ರ ವರೆಗೆ ಒಂದು ವರ್ಷದ ಅವಧಿಗೆ ಚಿಕ್ಕ ಮಗಳೂರು ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿಸಿರುತ್ತಾರೆ.




Post a Comment

Previous Post Next Post