ರಾಜ್ಯದ ಅನೇಕ ಭಾಗಗಳಲ್ಲಿ ಇನ್‌ಫ್ಲುಯೆಂಜಾ ಮಾದರಿಯ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದು, ಹೊಸ ಆತಂಕಕ್ಕೆ ಕಾರಣವಾಗಿದೆ. ದೀರ್ಘಕಾಲದ ಅನಾರೋಗ್ಯ ಮತ್ತು ಬಿಟ್ಟೂಬಿಡದೆ ಕಾಡುವ ಕೆಮ್ಮಿ, ನೆಗಡಿ, ಜ್ವರದಿಂದ ಜನರು ನರಳುತ್ತಿದ್ದಾರೆ...
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದ ಅನೇಕ ಭಾಗಗಳಲ್ಲಿ ಇನ್‌ಫ್ಲುಯೆಂಜಾ ಮಾದರಿಯ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದು, ಹೊಸ ಆತಂಕಕ್ಕೆ ಕಾರಣವಾಗಿದೆ. ದೀರ್ಘಕಾಲದ ಅನಾರೋಗ್ಯ ಮತ್ತು ಬಿಟ್ಟೂಬಿಡದೆ ಕಾಡುವ ಕೆಮ್ಮಿ, ನೆಗಡಿ, ಜ್ವರದಿಂದ ಜನರು ನರಳುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ 2 ವರ್ಷಗಳ ಹೋರಾಟದ ಬಳಿಕ ಈಗಷ್ಟೇ ಚೇತರಿಸಿಕೊಂಡಿದ್ದ ಜನರಲ್ಲಿ ಇದೀಗ ಅನಾರೋಗ್ಯದ ಪ್ರಕರಣಗಳಲ್ಲಿನ ಹೆಚ್ಚಳ ಆತಂಕವನ್ನು ಹೆಚ್ಚಿಸಿದೆ.
ರಾಜ್ಯದಲ್ಲಿ ಜ್ವರ ಹಾಗೂ ಫ್ಲೂ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಕೋವಿಡ್ 19 ಸೋಂಕನ್ನೇ ಹೋಲುವ ಲಕ್ಷಣಗಳು ಜನರ ನಿದ್ದೆಗೆಡಿಸಿವೆ. ಇನ್‌ಫ್ಲೂಯೆಂಜಾ ಎ ಉಪವಿಧದ ಎಚ್3ಎನ್2 ವೈರಸ್ ಈ ಸಮಸ್ಯೆಗೆ ಕಾರಣ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್3ಎನ್2 ಇನ್ಫ್ಲುಯೆಂಜಾ ಹರಡುವುದನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ರಾಜ್ಯ ಆರೋಗ್ಯ ಇಲಾಖೆಯು ಮಾರ್ಗಸೂಚಿಯೊಂದನ್ನು ಹೊರಡಿಸಿದೆ.
- ILI/SARI ಕೇಸ್ ಗಳ ಮೇಲೆ ಸೂಕ್ತ ನಿಗಾವಹಿಸಬೇಕು, IDSP-IHIP ಪೋರ್ಟಲ್‌ನಲ್ಲಿ ಸಾರಿ ಕೇಸ್ ಗಳ ಬಗ್ಗೆ ಮಾದರಿ ಸಂಗ್ರಹಣೆಯ ಮಾಹಿತಿ ದಾಖಲು ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಅಧಇಕಾರಿಗಳಿಗೆ ಸೂಚನೆ ನೀಡಿದೆ.
- ಅಗತ್ಯವಿರುವ ಪ್ರಮಾಣದಲ್ಲಿ ಔಷಧಿಗಳನ್ನು ಸಂಗ್ರಹಿಸಿ ಇಟ್ಟಿಕೊಳ್ಳುವಂತೆ ಹಾಗೂ ILI/SARI ಕೇಸ್ ಗಳ ಚಿಕಿತ್ಸೆ ವೇಳೆ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಹಾಗೂ ಪಿಪಿಇ ಕಿಟ್ ಧರಿಸಬೇಕೆಂದು ಸೂಚಿಸಿದೆ.
- ಐಸಿಯು ಮತ್ತು ಆಸ್ಪತ್ರೆಯ ಚಿಕಿತ್ಸಾ ವಾರ್ಡ್ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರು ಫ್ಲೂ ಲಸಿಕೆ ಪಡೆಯಬೇಕು, ಹೆಲ್ತ್ ಕೇರ್ ಫೆಸಿಲಿಟಿಗಳಲ್ಲಿ ಎಲ್ಲಾ ಆರೋಗ್ಯ ಕಾರ್ಯಕರ್ತರು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು.
- ಸಾರಿ ಕೇಸ್ ಗಳಿಂದ ಮೃತಪಟ್ಟವರ ಸ್ವಾಬ್ ವರದಿಯನ್ನ ಹತ್ತಿರದ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯದ ಪ್ರಯೋಗಾಲಯದಲ್ಲಿ (VRDL) ಪರೀಕ್ಷೆಗೆ ಒಳಪಡಿಸಬೇಕು. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಕಾಲೋಚಿತ ಜ್ವರದ ರೋಗಲಕ್ಷಣದ ನಿರ್ವಹಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಸ್ವಯಂ-ಔಷಧಿ ಮತ್ತು ಪ್ರತಿಜೀವಕಗಳ ಅನಗತ್ಯ ಬಳಕೆಯನ್ನು ತಪ್ಪಿಸಬೇಕು.
- ಜನರಲ್ಲಿ ಜಾಗೃತಿ ಮೂಡಿಸಲು ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತು ಆಸ್ಪತ್ರೆಯ ಆವರಣದಲ್ಲಿ ಲಗತ್ತಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
- ಜನರು ಸ್ವಯಂ ಔಷಧಿ ಮತ್ತು ಆಂಟಿಡೋಸ್‌ಗಳನ್ನು ಬಳಸುವುದನ್ನು ತಪ್ಪಿಸಬೇಕು ಎಂದು ಹೇಳಿದೆ.
Post a Comment