ಶಿವಮೊಗ್ಗ: ಗೂಂಡಾಗಿರಿ ಮಾಡುತ್ತಿದ್ದ ಶಮಂತ ಮತ್ತು ಸಂದೀಪ್ ಕುಮಾರ್ ಇಬ್ಬರನ್ನು 1 ವರ್ಷದ ವರೆಗೆ ಗೂಂಡಾ ಕಾಯ್ದೆಯಡಿ ಬಂಧನ.

 ಶಮಂತ@ ಶಮಂತನಾಯ್ಕ, 30 ವರ್ಷ,  ಆಶ್ರಯ ಬಡಾವಣೆ, ಶಿವಮೊಗ್ಗ ಟೌನ್ ಮತ್ತು ಸಂದೀಪ್@ ಸಂದೀಪ್ ಕುಮಾರ್ ನಾಯ್ಕ್, 27 ವರ್ಷ, ಬೊಮ್ಮನಕಟ್ಟೆ, ಶಿವಮೊಗ್ಗ ರವರುಗಳು ಕೊಲೆ, ಕೊಲ್ರ್ಗೆ ಯತ್ನ, ದರೋಡೆ ಹಲ್ಲೆ, ದೊಂಬಿ, ಕೋಮುಗಲಭೆ ಮತ್ತು ಗಾಂಜಾ ಮಾರಾಟದಂತಹ ಅಪರಾದ ಕೃತ್ಯಗಳಲ್ಲಿ ಭಾಗಿಯಾಗಿ, ತಮ್ಮ ಸಹಚರರೊಂದಿಗೆ ಅಕ್ರಮ ಕೂಟ ಕಟ್ಟಿಕೊಂಡು, ಸಾರ್ವಜನಿಕರಿಗೆ ಬೆದರಿಕೆ ಹಾಕಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ದಕ್ಕೆಯನ್ನುಂಟು ಮಾಡುತ್ತಾ, ಜಾಮೀನು ಷರತ್ತುಗಳನ್ನು ಉಲ್ಲಂಘಿಸುವ ಕೃತ್ಯಗಳಿಂದ ಸಾರ್ವಜನಿಕ ಶಾಂತಿ ನೆಮ್ಮದಿಗೆ ಕಂಟಕ ಪ್ರಾಯರಾಗಿದ್ದು, ಇವರು ಭಾಗಿಯಾಗಿರುವ ಅಪರಾದ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಂಡಿರುವುದನ್ನು ಸಹ ಲೆಕ್ಕಿಸದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬಂದಿರುತ್ತಾರೆ.

ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸದರಿಯವರನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡುವಂತೆ ಕೋರಿ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಶಿವಮೊಗ್ಗ ರವರಿಗೆ ಪ್ರಸ್ಥಾವನೆ ಸಲ್ಲಿಸಿದ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಗಳು ಗೂಂಡಾ ಕಾಯ್ದೆಯಡಿಯಲ್ಲಿ ಶಮಂತ@ ಶಮಂತನಾಯ್ಕ ನನ್ನು ಕೇಂದ್ರ ಕಾರಾಗೃಹ ಕಲಬುರಗಿಯಲ್ಲಿ ಮತ್ತು ಸಂದೀಪ್@ಸಂದೀಪ್ ಕುಮಾರ್ ನಾಯ್ಕ್ ನನ್ನು ಕೇಂದ್ರ ಕಾರಾಗೃಹ ಬಳ್ಳಾರಿಯಲ್ಲಿ ಬಂಧನದಲ್ಲಿಡಲು ಆದೇಶಿಸಿರುತ್ತಾರೆ.

ನಂತರ ದಿನಾಂಕ 25-02-2023 ರಂದು ಗೂಂಡಾ ಕಾಯ್ದೆ ನಿಯಮದಡಿ ರಚಿತವಾದ ಸಲಹಾ ಮಂಡಳಿಯು ಶಮಂತ@ಶಮಂತನಾಯ್ಕ್ ಮತ್ತು ಸಂದೀಪ್ ಕುಮಾರ್ ಇಬ್ಬರನ್ನು ಬಂಧನದಲ್ಲಿಡಲು ಸಾಕಷ್ಟು ಕಾರಣಗಳಿವೆ ಎಂದು ಅಭಿಪ್ರಾಯಪಟ್ಟು ವರದಿ ನೀಡಿದ ಮೇರೆಗೆ, ದಿನಾಂಕ 03-03-2023 ರಂದು ಘನ ಕರ್ನಾಟಕ ಸರ್ಕಾರವು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಶಿವಮೊಗ್ಗರವರ ಆದೇಶವನ್ನು ಸ್ವೀಕರಿಸಿ ಶಮಂತನಾಯ್ಕ ಮತ್ತು ಸಂದೀಪ್ @ ಸಂದೀಪ್ ಕುಮಾರ್ ನಾಯ್ಕ್ ಇವರುಗಳನ್ನು ದಿನಾಂಕ ನಾಯ್ಕ್ ಇವರುಗಳನ್ನು ದಿನಾಂಕ 03-03-2023 ರಿಂದ 1 ವರ್ಷದ ಅವಧಿಯವರೆಗೆ ಗೂಂಡಾ ಕಾಯ್ದೆಯಡಿ ಬಂಧನದಲ್ಲಿಡಲು ಆದೇಶಿಸಿರುತ್ತಾರೆ.


Post a Comment

Previous Post Next Post