ಸರ್ಕಾರೀ ಯೋಜನೆಗಳಲ್ಲಿ ಅನುದಾನ ನೀಡಿದ ಎಂ ಪಿ, ಎಂ ಎಲ್ ಎ ಸಹಿತ ಜನಪ್ರತಿನಿಧಿಗಳ ಪ್ಲೆಕ್ಸ್ ಹಾಕುವುದು ರೂಢಿ ಆದರೆ ಇದಕ್ಕೆ ಈಗ ಬ್ರೇಕ್ ಬಿದ್ದಿದೆ.
ಸರ್ಕಾರೀ ವೆಚ್ಚದಲ್ಲಿ ಅಥವಾ ಸರ್ಕಾರದ ನೆರವಿನಿಂದ ಕೈಗೊಳ್ಳುವ ಯಾವುದೇ ಯೋಜನೆಗಳಲ್ಲಿ ಜನಪ್ರತಿನಿಧಿಗಳ ಫೋಟೋ ಹಾಕಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ಹೈ ಕೋರ್ಟ್ ಸೂಚನೆ ನೀಡಿದೆ.
ಒಂದು ವೇಳೆ ಇಂತಹ ಪ್ಲೆಕ್ಸ್ ಗಳನ್ನೂ ಈಗಾಗಲೇ ಅಳವಡಿಸಿದ್ದರೆ ತಕ್ಷಣ ತೆರವುಗೊಳಿಸಿ ಎಂದು ಸೂಚಿಸಿರುವ ನ್ಯಾಯಪೀಠ, ಇಂತಹ ಪ್ಲೆಕ್ಸ್ ಗಳು, ಅಭಿನಂದನಾ ಫೋಟೋಗಳು,ಕಂಡು ಬಂದರೆ ಅಂಥವರ ವಿರುದ್ಧ ಎಫ್ ಐ ಆರ್ ದಾಖಲಿಸುವಂತೆ ಪೊಲೀಸರಿಗೆ ಖಡಕ್ ಸೂಚನೆ ನೀಡಿದೆ.
ಸಾರ್ವಜನಿಕರು ನೀಡಿದ ತೆರಿಗೆ ಹಣದಿಂದ ಸರ್ಕಾರೀ ಕಾಮಗಾರಿಗಳು ನಡೆಯುತ್ತವೆ ಅದನ್ನು ಈ ರಾಜಕಾರಣಿಗಳು ತಾವೇ ತಮ್ಮ ಕೈಯಿಂದ ಖರ್ಚು ಮಾಡಿದವರಂತೆ ಕಾಮಗಾರಿಯನ್ನು ನಡೆಸಿದವರಂತೆ ದೊಡ್ಡ ದೊಡ್ಡ ಪ್ಲೆಕ್ಸ್ ಗಲ್ಲಿ ಫೋಸ್ ಕೊಡುತ್ತಾರೆ. ಕರ್ನಾಟಕ ಹೈ ಕೋರ್ಟ್ ನ ಈ ತೀರ್ಪು ಅಭಿನಂದನಾರ್ಹವಾಗಿದೆ
Post a Comment