ಶಿವಮೊಗ್ಗ: ವಿಮಾನ ನಿಲ್ದಾಣದಲ್ಲಿ ಉದ್ಯೋಗದ ಆಮಿಷವೊಡ್ಡಿ ಯುವಕನೊಬ್ಬನಿಗೆ 72,000 ರೂ ವಂಚಿಸಲಾಗಿದೆ.ಈ ಸಂಬಂಧ ಶಿವಮೊಗ್ಗದಲ್ಲಿ ಮೊದಲ ಪ್ರಕರಣ ದಾಖಲಾಗಿದೆ.
ಹೊಳಲೂರಿನ ಯುವಕನೊಬ್ಬ ವಂಚನೆಗೊಳಗಾಗಿದ್ದಾನೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಸಾಫ್ಟ್ ಆಗಿ ನೇಮಕವಾಗಿದ್ದಿರಿ ಎಂದು ತಿಳಿಸಿ ಹಣ ಪಡೆಯಲಾಗಿದೆ.
ವಂಚನೆ ಆಗಿದ್ದು ಹೇಗೆ?
ಮೊಬೈಲ್ ನಲ್ಲಿ ಏರ್ ಪೋರ್ಟ್ ಅಥಾರಿಟಿ ಅಪ್ಲಿಕೇಶನ್ ಓಪನ್ ಮಾಡಿ ಹೊಳಲೂರಿನ ಯುವಕ ತನ್ನ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಹೆಸರು ದಾಖಲಿಸಿದ್ದರು. ಫೆ.12 ರಂದು ಮಧ್ಯಾಹ್ನ ಅಪರಿಚಿತ ಮೊಬೈಲ್ ನಂಬರ್ ನಿಂದ ಮಹಿಳೆಯೊಬ್ಬರು ಕೆರೆ ಮಾಡಿ ತನ್ನನ್ನು ಮೋನಿಕಾ ಎಂದು ಪರಿಚಯಿಸಿಕೊಂಡಿದ್ದಾಳೆ ತಾನು ಶಿವಮೊಗ್ಗ ಏರ್ ಪೋರ್ಟ್ ಅಥಾರಿಟಿಯ ಹೆಚ್. ಆರ್ ಎಂದು ಹೇಳಿಕೊಂಡು ಯುವಕನನ್ನು ನಂಬಿಸಿದ್ದಾಳೆ.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೀವು ಗ್ರೌಂಡ್ ಸಾಫ್ಟ್ ಆಗಿ ನೇಮಕವಾಗಿದ್ದಿರಿ ಇದರ ರಿಜಿಸ್ಟ್ರೇಷನ್ ಗೆ ಹಣ ಪಾವತಿಸಬೇಕು ತಿಳಿಸಿದ್ದಾಳೆ. ಹಂತ ಹಂತವಾಗಿ ಫೋನೆಪೆ ಮೂಲಕ 72 ,900 ರೂ ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾಳೆ. ಆ ಬಳಿಕ ಯುವಕನಿಗೆ ತಾನು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ನೇಮಕಾತಿ ಆದೇಶ ಆಗಿಲ್ಲ:
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶದ ಬಗ್ಗೆ ಯಾವುದೇ ನೇಮಕಾತಿ ಆದೇಶ ಹೊರಬಿದ್ದಿಲ್ಲ. ಒಂದು ವೇಳೆ ನೇಮಕಾತಿ ಮಾಡಿಕೊಳ್ಳಬೇಕಿದ್ದರೆ ಸರ್ಕಾರ, ಜಿಲ್ಲಾಡಳಿತ ಅಥವಾ ವಿಮಾನ ನಿಲ್ದಾಣ ಪ್ರಾಧಿಕಾರವೇ ಅಧಿಕೃತವಾಗಿ ಸರ್ಕಾರೀ ವೆಬ್ಸೈಟ್ ಅಥವಾ ಪತ್ರಿಕೆಗಳಲ್ಲಿ ನೇಮಕಾತಿ ಆದೇಶ ಹೊರಡಿಸಲಿವೆ. ಆದ್ದರಿಂದ ವಾಟ್ಸಾಪ್ , ಫೇಸ್ಬುಕ್ ಗಳಲ್ಲಿ ಬರುವ ಯಾವುದೇ ಇಮೈಲ್ , ಮೊಬೈಲ್ ನಂಬರ್ ಗೆ ಮಾಹಿತಿ ಕಳುಹಿಸುವುದು ಸೂಕ್ತವಲ್ಲ.
Post a Comment