ದೆಹಲಿಯ ಪ್ರಧಾನಮಂತ್ರಿಗಳ ಮ್ಯೂಸಿಯಂ ರೀತಿ ರಾಜ್ಯದಲ್ಲಿ ಮುಖ್ಯಮಂತ್ರಿಗಳ ವಸ್ತುಸಂಗ್ರಹಾಲಯ ಸ್ಥಾಪಿಸಬೇಕು: ಬಸವರಾಜ ಬೊಮ್ಮಾಯಿ

 ದೆಹಲಿಯ ಪ್ರಧಾನ ಮಂತ್ರಿಗಳ ಮ್ಯೂಸಿಯಂ ಮಾದರಿಯಲ್ಲಿ ರಾಜ್ಯದ ಏಕೀಕರಣದ ಹೋರಾಟ ಮತ್ತು ಎಲ್ಲಾ ಮುಖ್ಯಮಂತ್ರಿಗಳು ನೀಡಿದ ಪ್ರಮುಖ ಕೊಡುಗೆಗಳನ್ನು ಪ್ರತಿನಿಧಿಸುವ ಒಂದು ಸಂಸ್ಥೆಯನ್ನು ತೆರೆಯುವ ಅಗತ್ಯವಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದ್ದಾರೆ.

                                                               ಬಸವರಾಜ ಬೊಮ್ಮಾಯಿ

By : Rekha.M
Online Desk

ಬೆಂಗಳೂರು: ದೆಹಲಿಯ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯದ (ಮ್ಯೂಸಿಯಂ) ಮಾದರಿಯಲ್ಲಿ ರಾಜ್ಯದ ಏಕೀಕರಣದ ಹೋರಾಟ ಮತ್ತು ಎಲ್ಲಾ ಮುಖ್ಯಮಂತ್ರಿಗಳು ನೀಡಿದ ಪ್ರಮುಖ ಕೊಡುಗೆಗಳನ್ನು ಪ್ರತಿನಿಧಿಸುವ ಒಂದು ಸಂಸ್ಥೆಯನ್ನು ತೆರೆಯುವ ಅಗತ್ಯವಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮೈಸೂರು ರಾಜ್ಯದ (ಈಗಿನ ಕರ್ನಾಟಕ) ಮೊದಲ ಮುಖ್ಯಮಂತ್ರಿ ಕೆಸಿ ರೆಡ್ಡಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಮಾತನಾಡಿದ ಅವರು, ಸದ್ಯಕ್ಕೆ ಇದು ಕೇವಲ ಕಲ್ಪನೆಯಾಗಿದ್ದು, ಸಂಬಂಧಪಟ್ಟ ಎಲ್ಲರೊಂದಿಗೆ ಚರ್ಚಿಸಿದ ನಂತರ ಈ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಸಿದ್ಧಪಡಿಸಬಹುದು ಎಂದು ಅವರು ಸೂಚಿಸಿದರು.

ರೆಡ್ಡಿ ಅವರು ಶ್ರೀಮಂತ ಪರಂಪರೆಯನ್ನು ತೊರೆದಿದ್ದಾರೆ ಮತ್ತು ಕೋಲಾರದಲ್ಲಿ ರೆಡ್ಡಿ ಅವರ ಸ್ಮಾರಕವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಎಲ್ಲಾ ಸಹಕಾರ ನೀಡಲು ಸಿದ್ಧವಾಗಿದೆ ಎಂದು ಹೇಳಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ರೆಡ್ಡಿ ಅವರು ರೈತ ಕುಟುಂಬದಿಂದ ಬಂದವರು ಮತ್ತು ವಕೀಲರಾಗಿ ಮತ್ತು ಪತ್ರಕರ್ತರಾಗಿ ಕೆಲಸ ಮಾಡುವುದರ ಜೊತೆಗೆ ‘ಪ್ರಜಾಪ್ರತಿನಿಧಿ’ ಪಕ್ಷವನ್ನು ಕಟ್ಟಿದವರು. ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ರಾಜ್ಯದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕಾನೂನು, ಮತ್ತು ಸರ್ಕಾರಿ ಯಂತ್ರವನ್ನು ರೂಪಿಸಲು ಸಹಾಯ ಮಾಡಿದರು ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಮ್ಮ ಮುಂದಿನ ಪೀಳಿಗೆ ಕರ್ನಾಟಕವನ್ನು ಕಟ್ಟಿದವರನ್ನು ಮರೆಯಬಾರದು. ಅವರ ತ್ಯಾಗ, ದೂರದೃಷ್ಟಿ, ಆದರ್ಶಗಳು ಮತ್ತು ತತ್ವಗಳು ರಾಜ್ಯವು ಭದ್ರವಾಗಿ ನಿಲ್ಲುವಂತೆ ಮಾಡಿದೆ. ಹಾಗಾಗಿ ಅವರನ್ನು ಮತ್ತು ಅವರ ಕಾರ್ಯಗಳನ್ನು ಸ್ಮರಿಸಿ ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಕೊಡುಗೆಗಳ ಬಗ್ಗೆ ಸಾಕಷ್ಟು ಸಾಹಿತ್ಯ ಈಗಾಗಲೇ ಲಭ್ಯವಿದ್ದು, ಎಲ್ಲ ಮುಖ್ಯಮಂತ್ರಿಗಳ ಬಗ್ಗೆಯೂ ಇದೇ ರೀತಿ ಸಿದ್ಧಪಡಿಸಿ, ಇಂದಿನ ಯುವಕರಲ್ಲಿ ಪ್ರಚಾರ ಮಾಡಬೇಕು. ಕರ್ನಾಟಕ ರಾಜ್ಯವಾದಾಗ ಇದ್ದ ಜನರ ಮನಸ್ಥಿತಿ ಮತ್ತು ಪರಿಸ್ಥಿತಿ, ವಿವಿಧ ಪ್ರದೇಶಗಳ ಜನರ ಮನಸ್ಸುಗಳು ಹೇಗೆ ಒಗ್ಗೂಡಿತು, ಅದು ಹೇಗೆ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟಕ್ಕೆ ಕಾರಣವಾಯಿತು ಎಂಬುದನ್ನು ಪ್ರತಿನಿಧಿಸಲು ವಸ್ತುಸಂಗ್ರಹಾಲಯದ ಅಗತ್ಯವಿದೆ ಎಂದು ನನಗನಿಸುತ್ತದೆ ಎಂದು ಬೊಮ್ಮಾಯಿ ಹೇಳಿದರು.

ಅಲ್ಲದೆ, ರಾಜ್ಯದ ಹಿತದೃಷ್ಟಿಯಿಂದ ನಡೆದ ವಿವಿಧ ಆಂದೋಲನಗಳು ಅಥವಾ ಚಳವಳಿಗಳು ಒಳಗೊಂಡಂತೆ ದೆಹಲಿಯ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯದ ಮಾದರಿಯಲ್ಲಿ ಎಲ್ಲಾ ಮುಖ್ಯಮಂತ್ರಿಗಳು ತೆಗೆದುಕೊಂಡ ಪ್ರಮುಖ ನಿರ್ಧಾರಗಳನ್ನು ಪ್ರದರ್ಶಿಸಬೇಕು ಎಂದು ಅವರು ಹೇಳಿದರು.


Post a Comment

Previous Post Next Post