ದಿನಾಂಕಃ- 23-01-2017ರಂದು ರಾಜು, 36 ವರ್ಷ, ಬಾಪೂಜಿ ನಗರ ಶಿವಮೊಗ್ಗ ಈತನಿಗೆ ಅವನ ಪರಿಚಯಸ್ಥರಾದ ಜಯ್ಯಣ್ಣ ಮತ್ತು ವಾಸು ರವರು ಕುಡಿಯಲು ಮತ್ತು ಖರ್ಚಿಗೆ ಹಣ ಕೊಡು ಎಂದು ಕೇಳಿದ್ದು, ರಾಜುವು ಕೊಡುವುದಿಲ್ಲ ಎಂದು ಹೇಳಿದ್ದರಿಂದ ಜಗಳವಾಗಿದ್ದು, ಈ ದ್ವೇಶದ ಹಿನ್ನೆಲೆಯಲ್ಲಿ ಆರೋಪಿತರಾದ ಜಯ್ಯಣ್ಣ ಮತ್ತು ವಾಸು ರವರು ಸೇರಿಕೊಂಡು ತುಂಗಾನಗರ ಠಾಣಾ ವ್ಯಾಪ್ತಿಯ ಹೆವನ್ ಇನ್ ಬಾರ್ ಮುಂಭಾಗ, ವಾಸದ ಶೆಡ್ ನಲ್ಲಿ ರಾಜುವಿನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುತ್ತಾರೆಂದು ಮೃತನ ಮಾವ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0617/2017 ಕಲಂ 302 ಸಹಿತ 34 ಐಪಿಸಿ, ರೀತ್ಯಾ ಪ್ರಕಣ ದಾಖಲಿಸಿಕೊಳ್ಳಲಾಗಿರುತ್ತದೆ.
ಆಗಿನ ತನಿಖಾಧಿಕಾರಿಗಳಾದ ಶ್ರೀ ಮಹಾಂತೇಶ್ ಬಿ ಹೋಳಿ, ಸಿಪಿಐ, ಶಿವಮೊಗ್ಗ ಗ್ರಾಮಾಂತರ ವೃತ್ತರವರು ಪ್ರಕರಣದ ತನಿಖೆ ಕೈಗೊಂಡು ಸದರಿ ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಮಮತ ರವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದು, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಾಧೀಶರಾದ ಮಾನು ಕೆ. ಎಸ್ ರವರು ದಿನಾಂಕ:-17-02-2023 ರಂದು ಆರೋಪಿತರಾದ ಜಯ್ಯಣ್ಣ 42 ವರ್ಷ, ಗುತ್ಯಪ್ಪ ಕಾಲೋನಿ, ಶಿವಮೊಗ್ಗ ಮತ್ತು ವಾಸು, 42 ವರ್ಷ, ಅಶೊಕ ರಸ್ತೆ ಶಿವಮೊಗ್ಗ ರವರ ವಿರುದ್ಧ ಕಲಂ 302 ಸಹಿತ 34 ಐಪಿಸಿ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿತರಿಗೆ ಜೀವಾವಧಿ ಶಿಕ್ಷೆ & ರೂ 10,000 ದಂಡ, ದಂಡವನ್ನು ಕಟ್ಟಲು ವಿಫಲರಾದರೆ 3 ತಿಂಗಳ ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿರುತ್ತಾರೆ.
Post a Comment