ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ: ಇಬ್ಬರ ಬಂಧನ

 ಬೆಂಗಳೂರು: ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ ನೀಡಿರುವ ಆರೋಪದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

ಸತೀಶ್ ರೆಡ್ಡಿ ಹತ್ಯೆಗೆ ಕುಖ್ಯಾತ ರೌಡಿ ಗ್ಯಾಂಗ್ ಸ್ಕೆಚ್ ಹಾಕಿದ್ದ ಸ್ಫೋಟಕ ವಿಷಯ ಬಹಿರಂಗಗೊಂಡಿದೆ. ನಗರದ ವಿಲ್ಸನ್ ಗಾರ್ಡನ್ ನಾಗನ ತಂಡ ಶಾಸಕನ ಹತ್ಯೆಗೆ 2 ಕೋಟಿಗೆ ಸುಪಾರಿ ಪಡೆದಿದ್ದು ಶಾಸಕರ ಚಲನವಲನಗಳ ಬಗ್ಗೆ ನಿಗಾವಹಿಸಿದ್ದರು. ಆದರೆ ದಾಳಿಗೂ ಮುಂಚೆ ರೌಡಿಶೀಟರ್ ನಾಗನ ತಂಡದಿಂದಲೇ ವಿಷಯ ಬಹಿರಂಗಗೊಂಡಿದೆ. 

ಶಾಸಕ ಸತೀಶ್ ರೆಡ್ಡಿ.


  ನಾಗನ ತಂಡದಲ್ಲಿದ್ದ ಚಿತ್ರದುರ್ಗದ ಮೂಲದ ಆಕಾಶ್ ಕೊಲೆಯ ಸುಳಿವು ಬಿಟ್ಟು ಕೊಟ್ಟಿದ್ದಾನೆ. ಸತೀಶ್ ರೆಡ್ಡಿ ಬೆಂಬಲಿಗ ಚಂದ್ರು ಕರೆ ಮಾಡಿದ್ದಾಗ ಆಕಾಶ್ ಕೊಲೆಯ ಸಂಚು ಬಾಯ್ಬಿಟ್ಟಿದ್ದಾನೆ. ನಂತರ ಎಚ್ಚೆತ್ತ ಶಾಸಕರು ಪೊಲೀಸರಿಗೆ ದೂರು ನೀಡಿದ್ದಾರೆ. 

Post a Comment

Previous Post Next Post