ಬಳ್ಳಾರಿ : ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮೂವರು ಉದ್ಯೋಗಿಗಳನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಬಳ್ಳಾರಿಯಲ್ಲಿ ಬಂಧಿಸಿದೆ.
ಪ್ರಶಾಂತ್ ರೆಡ್ಡಿ, ಯೋಗೀಶ್, ಮೊಹಮದ್ ಗೌಸ್ ಬಂಧಿತ ಅಧಿಕಾರಿಗಳಾಗಿದ್ದಾರೆ. ಮನೆ ಕಟ್ಟಲು ಪುರಾತತ್ವ ಇಲಾಖೆಯಿಂದ ಎನ್‌ಓಸಿ ನೀಡಲು ಹಣ ಬೇಡಿಕೆ ಇಟ್ಟಿದ್ದರು. ಈ ದೂರಿನ ಅನ್ವಯ ಖಾಸಗಿ ಹೋಟೆಲ್ನಲ್ಲಿ ಲಂಚದ ಹಣವನ್ನು ಮುಂಗಡವಾಗಿ ಪಡೆಯುವಾಗ ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ಮೂವರು ಅಧಿಕಾರಿಗಳನ್ನು ಬಲೆಗೆ ಕೆಡವಿದ್ದಾರೆ.
1.5 ಲಕ್ಷ ಪಾವತಿಸಿದ ನಂತರವೇ ಅವರಿಗೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡುವುದಾಗಿ ಎಎಸ್‌ಐ ಅಧಿಕಾರಿಗಳು ನಿವಾಸಿಗೆ ತಿಳಿಸಿದರು. ಹೀಗಾಗಿ ನಿವಾಸಿ ಸಿಬಿಐಗೆ ದೂರು ನೀಡಿದ್ದಾರೆ.
ಗುರುವಾರ ರಾಕೇಶ್ ಸಿಂಗ್ ನೇತೃತ್ವದಲ್ಲಿ ನವದೆಹಲಿಯಿಂದ 14 ಸದಸ್ಯರ ಸಿಬಿಐ ತಂಡವು ಎಎಸ್ಐ ಕಚೇರಿ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದೆ. ನನ್ನಿಂದ ಹಣ ಪಡೆಯುತ್ತಿದ್ದಾಗ ಅಧಿಕಾರಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಭ್ರಷ್ಟ ಅಧಿಕಾರಿಗಳಿಂದ ಕಿರುಕುಳಕ್ಕೊಳಗಾದ ಹಲವು ಬಿಲ್ಡರ್‌ಗಳನ್ನು ರಕ್ಷಿಸಿದ್ದಕ್ಕಾಗಿ ಸಿಬಿಐ ತಂಡಕ್ಕೆ ನಾನು ಕೃತಜ್ಞನಾಗಿದ್ದೇನೆ. ಎಎಸ್‌ಐ ಕೇಂದ್ರೀಯ ಸಂಸ್ಥೆಯಾಗಿರುವುದರಿಂದ ಸಿಬಿಐಗೆ ದೂರು ನೀಡಲು ನಿರ್ಧರಿಸಿದ್ದಾಗಿ ನಿವಾಸಿ ತಿಳಿಸಿದ್ದಾರೆ.
ಲಂಚ ಪಡೆದ ಎಎಸ್‌ಐ ಅಧಿಕಾರಿಗಳನ್ನು ಬಂಧಿಸಿರುವುದು ಇದೇ ಮೊದಲು ಎಂದು ಸ್ಥಳೀಯ ಕಾರ್ಯಕರ್ತರು ತಿಳಿಸಿದರು. ಈಗಾಗಲೇ ಅನೇಕ ಸ್ಥಳೀಯರು ಮನೆ ನಿರ್ಮಾಣದ ಸಮಯದಲ್ಲಿ ಎಎಸ್‌ಐ ಅಧಿಕಾರಿಗಳೊಂದಿಗೆ ಸಮಸ್ಯೆಗಳನ್ನು ಹೊಂದಿದ್ದರು. ನಮ್ಮ ದೇಶದ ಪರಂಪರೆಯನ್ನು ರಕ್ಷಿಸುವ ಎಎಸ್‌ಐ ಭ್ರಷ್ಟಾಚಾರದಲ್ಲಿ ತೊಡಗಿರುವುದು ಆಘಾತಕಾರಿಯಾಗಿದೆ. ಅಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ವಿನಂತಿಸುತ್ತೇವೆ" ಎಂದು ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
Post a Comment