ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ನಿಷೇಧ ಹೇರಿದ್ದರೂ, ಸಾಕಷ್ಟು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಪ್ರತೀನಿತ್ಯ ಕಂಡು ಬರುತ್ತಲೇ ಇರುತ್ತದೆ. ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂದರೂ ದೂರು ನೀಡಲು ಸಾಧ್ಯವಾಗದ ಕಾರಣ ಇಷ್ಟು ದಿನ ಮೂಕ ಪ್ರೇಕ್ಷಕರಂತಿರಬೇಕಾಗಿತ್ತು. ಆದರೆ, ಇದೀಗ ದೂರ ನೀಡಲು ಸರ್ಕಾರ ವೇದಿಕೆಯೊಂದನ್ನು ಕಲ್ಪಿಸಿದೆ.
ಸಂಗ್ರಹ ಚಿತ್ರಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ನಿಷೇಧ ಹೇರಿದ್ದರೂ, ಸಾಕಷ್ಟು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಪ್ರತೀನಿತ್ಯ ಕಂಡು ಬರುತ್ತಲೇ ಇರುತ್ತದೆ. ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬಂದರೂ ದೂರು ನೀಡಲು ಸಾಧ್ಯವಾಗದ ಕಾರಣ ಇಷ್ಟು ದಿನ ಮೂಕ ಪ್ರೇಕ್ಷಕರಂತಿರಬೇಕಾಗಿತ್ತು. ಆದರೆ, ಇದೀಗ ದೂರ ನೀಡಲು ಸರ್ಕಾರ ವೇದಿಕೆಯೊಂದನ್ನು ಕಲ್ಪಿಸಿದೆ.
ಸ್ಟಾಪ್ ಟೊಬ್ಯಾಕೋ ಮೊಬೈಲ್ ಆ್ಯಪ್ ನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿರುವವರ ಫೋಟೋ ತೆಗೆದು, ಆ್ಯಪ್ ಮೂಲಕ ದೂರು ಸಲ್ಲಿಸಬಹುದಾಗಿದೆ. ನಂತರ ಫೋಟೋವನ್ನು ಆಧರಿಸಿ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಮತ್ತು ರಾಜ್ಯ ತಂಬಾಕು ನಿಯಂತ್ರಣ ಘಟಕ, ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ಮಂಗಳಗಂಗೋತ್ರಿಯ ಸಹಯೋಗದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸ್ಟಾಪ್ ಟೊಬ್ಯಾಕೋ ಮೊಬೈಲ್ ಆಪ್ ಬಿಡುಗಡೆ ಮಾಡಲಾಯಿತು.
ನಾಗರಿಕರು ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು (ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ), ಆ್ಯಪ್ ಡೌನ್ ಲೋಡ್ ಮಾಡಿಕೊಂಡವರು, ನಿಯಮ ಉಲ್ಲಂಘಿಸುತ್ತಿರುವ ಜನರ ಚಿತ್ರವನ್ನು ಕ್ಲಿಕ್ ಮಾಡಿ ಮತ್ತು ಅದನ್ನು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಬೇಕು.ಅಪ್ಲಿಕೇಶನ್'ನಲ್ಲಿ ಜಿಪಿಎಸ್'ನ್ನು ಸಕ್ರಿಯಗೊಳಿಸಲಾಗಿದೆ. ಫೋಟೋ ಅಪ್ಲೋಡ್ ಆಗುತ್ತಿದ್ದಂತೆಯೇ ನಿಯಮ ಉಲ್ಲಂಘನೆಯ ಸ್ಥಳವು ಸ್ವಯಂಚಾಲಿತವಾಗಿ ಫೀಡ್ ಆಗುತ್ತದೆ. ನಂತರ ದೂರು ಆಯಾ ಜಿಲ್ಲೆಯ ತಂಬಾಕು ನಿಯಂತ್ರಣ ವಿಭಾಗಕ್ಕೆ ತಲುಪಲಿದೆ. ನಂತರ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆಂದು ತಿಳಿದುಬಂದಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಾಪಾನ ಮಾಡುವುದು, ಅಪ್ರಾಪ್ತ ವಯಸ್ಕರಿಗೆ ತಂಬಾಕು ಮಾರಾಟ ಮಾಡುವುದು, ಶಿಕ್ಷಣ ಸಂಸ್ಥೆಗಳ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತು, ತಂಬಾಕು ಮಾರಾಟ ಮತ್ತು ಎಚ್ಚರಿಕೆಯ ಸಂದೇಶಗಳಿಲ್ಲದೆ ಸಿಗರೇಟುಗಳ ಮಾರಾಟ ಮಾಡುವುದರ ವಿರುದ್ಧ ನಾಗರೀಕರು ದೂರು ಸಲ್ಲಿಸಬಹುದಾಗಿದೆ.
ಆರೋಗ್ಯ ಆಯುಕ್ತ ರಂದೀಪ್ ಅವರು ಮಾತನಾಡಿ, ತಂಬಾಕು ಮುಕ್ತ ಪೀಳಿಗೆಯನ್ನು ನಿರ್ಮಿಸಲು ಅಡ್ಡಿಯಾಗಿರುವ ವಿತಂಡವಾದಿಗಳ ಸಂಖ್ಯೆ ದೊಡ್ಡದಿದೆ. ಇಂತಹವರನ್ನು ಮೀರಿ ಕಾರ್ಯ ಸಾಧಿಸಬೇಕಿದೆ. ಧೂಮಪಾನ ತ್ಯಜಿಸುವಂತೆ ಸಲಹೆ ಮಾಡಿದರೆ ಕೆಲವರು ವಿತಂಡವಾದ ಮಾಡುತ್ತಾರೆ. ಸಿಹಿ ತಿಂದರೆ ಮಧುಮೇಹ ಬರುವುದಿಲ್ಲವೇ? ಎಂದು ಪ್ರಶ್ನಿಸುತ್ತಾರೆ. ಹೀಗೆ ಒಂದಕ್ಕೊಂದು ತಾಳೆಯಾಗದ ವಿಚಾರಗಳ ಬಗ್ಗೆ ವಾದ ಮಾಡುವವರನ್ನು ಮೀರಿ ತಂಬಾಕು ಮುಕ್ತ ತಲೆಮಾರನ್ನು ನಿರ್ಮಿಸಿಬೇಕಿದೆ' ಎಂದು ಹೇಳಿದರು.
ನಿಯಮ ಉಲ್ಲಂಘಿಸುವವರನ್ನು ಯಾವ ರೀತಿ ಗುರುತಿಸಲಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ನಾವು ಈ ಬಗ್ಗೆ ಗಮನಹರಿಸಿಲ್ಲ. ಅಂಗಡಿಯವರು, ಟೀ ಅಂಗಡಿಗಳು, ಕಾಫಿ ಶಾಪ್ ಗಳು, ಬೇಕರಿಗಳು ಮತ್ತು ಇತರ ಪ್ರಮುಖ ಸ್ಥಳಗಳಲ್ಲಾಗುವ ಉಲ್ಲಂಘನೆಗಳಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ. ಅಂಗಡಿಯವರು ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆಗಳನ್ನು ನೀಡಬೇಕು. ಸಾರ್ವಜನಿಕವಾಗಿ ಧೂಮಪಾನ ಮಾಡಲು ಬಿಡಬಾರದು ಎಂದು ತಿಳಿಸಿದ್ದಾರೆ.
ಒಂದೇ ಅಂಗಡಿಯಿಂದ ಪದೇ ಪದೇ ದೂರುಗಳು ಬಂದರೆ, ಅದನ್ನು ಮುಚ್ಚಲು ಎಲ್ಲ ಕಾನೂನು ಅವಕಾಶಗಳಿವೆ. ಎಸ್‌ಟಿಸಿಸಿಯ ಪ್ರಯತ್ನದಿಂದ ಕರ್ನಾಟಕದ 20 ಕ್ಕೂ ಹೆಚ್ಚು ಹಳ್ಳಿಗಳು ತಂಬಾಕು ಮುಕ್ತವಾಗಿವೆ, ಅಲ್ಲಿ ಯಾವುದೇ ಮಾರಾಟ ಅಥವಾ ತಂಬಾಕು ಸೇವನೆಗಳಿಲ್ಲ ಎಂದರು.
Post a Comment