ಬಿ ವೈ ರಾಘವೇಂದ್ರ
ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರರವರು ಇವತ್ತು ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿ ಕುವೆಂಪು ವಿಮಾನ ನಿಲ್ಧಾಣದ ವಿಚಾರವಾಗಿ ಮಾಹಿತಿಗಳನ್ನು ನೀಡಿದರು. ಅದರಲ್ಲಿ ಮುಖ್ಯವಾಗಿ ವಿಮಾನ ನಿಲ್ಧಾಣಕ್ಕೆ (shivamogga airport) ಭೂಮಿ ಕೊಟ್ಟವರಿಗೆ ಸೈಟ್ ನೀಡಲಾಗುವುದು, ಈ ಸಂಬಂಧ ಈಗಾಗಲೇ ಹೌಸಿಂಗ್ ಬೋರ್ಡ್ಗೆ 35 ಕೋಟಿ ರೂಪಾಯಿಯನ್ನು ನೀಡಲಾಗಿದೆ. ಕೆಲವು ಹೊತ್ತಿನಲ್ಲಿ ಈ ಸಂಬಂಧ ಆದೇಶಪ್ರತಿಗಳನ್ನು ನೀಡಲಾಗುವುದು ಎಂದರು
ಇನ್ನೊಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 27ಕ್ಕೆ ಆಗಮಿಸುತ್ತಿದ್ದು ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 11 ಗಂಟೆಗೆ ಪ್ರಧಾನ ಮಂತ್ರಿಗಳ ವಿಮಾನ ಲ್ಯಾಂಡಿಂಗ್ ಆಗುತ್ತದೆ, ಬಳಿಕ ಮಧ್ಯಾಹ್ನ 1 ಗಂಟೆಗೆ ಅವರು ಬೆಳಗಾವಿಗೆ ಹೋಗಲಿದ್ದಾರೆ, ಒಟ್ಟು 2 ಗಂಟೆಗಳ ಕಾಲ ಶಿವಮೊಗ್ಗದಲ್ಲಿ ವಿವಿಧ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಮೂರು ಸಾವಿರಕ್ಕೂ ಹೆಚ್ಚು ವಾಹನಗಳ ವ್ಯವಸ್ಥೆ ಮಾಡಲಾಗಿದೆ, ಮೂರು ಲಕ್ಷಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಸೇರುವ ನಿರೀಕ್ಷೆಯಿದ್ದು, ಅಂದು ಬೆಳಗ್ಗೆ 10 ಗಂಟೆ ಒಳಗೆ ಏರ್ರ್ಪೋರ್ಟ್ ಗೇಟ್ ಮುಚ್ಚಲಾಗುತ್ತದೆ, ಅಷ್ಟರಲ್ಲೇ ಎಲ್ಲರೂ ಸೇರಿಕೊಳ್ಳಬೇಕು ಎಂದು ತಿಳಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣನಿನ್ನೆ ಸಂಜೆ ನಡೆದಂತಹ ರಾಜ್ಯಸರ್ಕಾರದ ಕ್ಯಾಬಿನೆಟ್ ನಲ್ಲಿ ಕುವೆಂಪುರವರ ಹೆಸರನ್ನು ವಿಮಾನ ನಿಲ್ಧಾಣಕ್ಕೆ ಇಡಲು ತೀರ್ಮಾನ ಮಾಡಲಾಗಿದೆ, ಕ್ಯಾಬಿನೆಟ್ ಲ್ಲಿ ತೀರ್ಮಾನ ಮಾಡಿ ಕೇಂದ್ರಕ್ಕೆ ಕಳುಹಿಸಲಾಗಿದೆ, ಮಲೆನಾಡಿನ ಮಣ್ಣಿನ ಸೊಗಸನ್ನು ಕುವೆಂಪುರವರು ವಿಶ್ವಾದ್ಯಂತ ಹರಡಿಸಿದ್ದಾರೆ ಎಂದ ಸಂಸದ ರಾಘವೇಂದ್ರವರು, ಶಿವಮೊಗ್ಗ ರೈಲ್ವೆ ನಿಲ್ದಾಣ, ಸಾಗರ, ತಾಳಗುಪ್ಪ ರೈಲ್ವೆ ನಿಲ್ದಾಣ ಮೇಲ್ದರ್ಜೆಗೆ ಏರಿಸಲು ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾಗಿದೆ, ಅದೇ ರೀತಿ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಕೆಳದಿ ಶಿವಪ್ಪ ನಾಯಕ ಹೆಸರನ್ನು ಇಡಲು ತೀರ್ಮಾನ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ರು.
ಇನ್ನೂ ವಿಮಾನ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಕೂಡ ಭಾಗಿಯಾಗಲಿದ್ದಾರೆ ಎಂದ ರಾಘವೇಂದ್ರವರು , ಸೋಗಾನೆ ಏರ್ಪೋರ್ಟ್ ಸಂತ್ರಸ್ತರ ವಿಚಾರದಲ್ಲಿ ಹಿಂದೆ ಸರಿಯುವ ಮಾತಿಲ್ಲ. ‘ಎಲ್ಲರಿಗೂ ಸೈಟ್ ನೀಡಲಾಗುತ್ತದೆ. ನಿನ್ನೆ 35 ಕೋಟಿ ಹಣವನ್ನು ಹೌಸಿಂಗ್ ಬೋರ್ಡ್ ಗೆ ನೀಡಲಾಗಿದೆ ಎಂದು ತಿಳಿಸಿದ್ರು.
Post a Comment