ಶಿವಮೊಗ್ಗ: ಶಿವಮೊಗ್ಗದ ಮಹಾನಗರ ಪಾಲಿಕೆಯ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನೇ ವಾರ್ಡ್ ಸದಸ್ಯೆ ಮೇಹಕ್ ಶರೀಫ್ ಕಚೇರಿಯಲ್ಲಿ ಹಿಂದೂ ವಿರೋಧಿ, ಮತಾಂಧ, ಕನ್ನಡ ವಿರೋಧಿ ಟಿಪ್ಪುವಿನ ಭಾವಚಿತ್ರವನ್ನು ಅಕ್ರಮವಾಗಿ ಅಳವಡಿಸಿದ್ದು, ಈ ರೀತಿ ಮಾಡಿರುವುದು ಖಂಡನೀಯ, ಇದರಿಂದ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ದಕ್ಕೆ ಉಂಟಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಆಕ್ರೋಶ ವ್ಯಕ್ತಪಡಿಸುವ ಮೂಲಕ ಮಹಾನಗರ ಪಾಲಿಕೆಗೆ ಪತ್ರ ಸಲ್ಲಿಸಿದೆ.
ಈ ರೀತಿ ಹಿಂದೂಗಳ ಭಾವನಗೆ ದಕ್ಕೆ ಉಂಟಾಗುವ ಕಾರಣ ಈ ಕೂಡಲೇ ಆ ಭಾವಚಿತ್ರವನ್ನು ತೆರವುಗೊಳಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಹಾನಗರ ಪಾಲಿಕೆಗೆ ಪತ್ರ ಸಲ್ಲಿಸುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಹಾಗೂ ಮೆಹಕ್ ಶರೀಫ್ ರವರ ಪತಿ ಎಂ ಡಿ. ಶರೀಫ್ ಅವರು ಈ ಹಿಂದೆ ಸ್ವತಂತ್ರ ಹೋರಾಟಗಾರ ವಿ.ಡಿ ಸಾವರ್ಕರ್ ರವರ ಭಾವಚಿತ್ರವನ್ನು ವಿರೋಧಿಸಿ ಸ್ವಾತಂತ್ರ್ಯ ದಿನೋತ್ಸವದ ಸಮಯದಂದು ಶಿವಮೊಗ್ಗ ನಗರದಲ್ಲಿ ಅಶಾಂತಿ ಉಂಟಾಗಲು ಕಾರಣಿ ಭೂತನಾಗಿ ಜೈಲು ಪಾಲಾಗಿದ್ದ, ಈತನ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಆಗಾಗ ಶಿವಮೊಗ್ಗ ನಗರದಲ್ಲಿ ಕೋಮು ದಳುರಿಯನ್ನು ಸೃಷ್ಠಿಸಲು ಪ್ರಯತ್ನ ಮಾಡುತ್ತಿರುತ್ತಾನೆ, ಆದ್ದರಿಂದ ಈ ಕೂಡಲೆ ಆತನ ಮೇಲೆ ಗೂಂಡಾ ಕಾಯ್ದೆಯನ್ನು ಜಾರಿಮಾಡಿ ಜೈಲಿಗೆ ಅಟ್ಟಬೇಕೆಂದು ಮಹಾನಗರ ಪಾಲಿಕೆಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿನಂತಿ ಮಾಡಿಕೊಂಡಿದೆ.
Post a Comment