ನಾನು ಗಣಪತಿ ಕೆರೆಗೆ ಸೇರುವ ತ್ಯಾಜ್ಯ ನೀರನ್ನು ತಡೆಯಿರಿ ಎಂದು ಪ್ರತಿಭಟಿಸಿದರೆ ಅದನ್ನು ಸರಿ ಮಾಡುವ ಬದಲು ಆಡಳಿತ ಮಾಡುವ ಪಕ್ಷ ನನ್ನ ವಿರುದ್ದವೇ ಪ್ರತಿಭಟನೆ ಮಾಡಿರುವುದು ಹಾಸ್ಯಾಸ್ಪದ. ಕೆರೆಗೆ ಅನೈರ್ಮಲ್ಯದ ನೀರು ಬೇಡ ಎಂದಿದ್ದೇನೆಯೇ ಹೊರತು ಕೆರೆಹಬ್ಬ ಬೇಡ, ಸಾಗರಾರತಿ ಬೇಡವೆಂದು ನಾನು ಹೇಳಲೇ ಇಲ್ಲ. ಕೆರೆಯ ಅಭಿವೃದ್ದಿಗೆ ಮೊದಲು ಹಣ ತಂದಿದ್ದೇ ಕಾಗೋಡು ತಿಮ್ಮಪ್ಪನವರು ಈಗ ಅಭಿವೃದ್ದಿ ಹೆಸರಲ್ಲಿ ಕೆರೆಯನ್ನು ಸ್ವಿಮ್ಮಿಂಗ್ ಪೂಲ್ ಮಾಡಲು ಹೊರಟಿದ್ದಾರೆ.
ಹಾಲಪ್ಪ ನನ್ನನ್ನು ರೆಸಾರ್ಟ್ ರಾಜಕಾರಣ ಮಾಡುವವರು ಎಂದಿದ್ದಾರೆ. ಹಾಲಪ್ಪ ಎಲ್ಲಿ ಹೋಗಿದ್ದಾರೆ ಅನ್ನುವುದು ಹಾಲಪ್ಪನೇ ಮರೆತಿರಬೇಕು. ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರೆ ಕಾಗೋಡು ತಿಮ್ಮಪ್ಪನವರಿಗೆ, ಇಲ್ಲವೇ ನನಗೆ, ಅದು ನಮ್ಮ ಕುಟುಂಬದಲ್ಲೇ ಇರುತ್ತದೆ. ಆದರೆ ಬಿಜೆಪಿಯಲ್ಲಿ ಹಾಲಪ್ಪ ಟಿಕೇಟ್ ಸಿಗದೇ ಹೋದರೆ ಏನು ಮಾಡುತ್ತಾರೆ. ಅದು ಇದು ಎನ್ನುವ ಶಾಸಕರ ನನ್ನನ್ನು ಹೊಲಸು ಎನ್ನುವ ಬದಲು ಈ ಹಿಂದೆ ಮಂತ್ರಿಗಿರಿ ಕಳೆದುಕೊಂಡದ್ದು ಯಾವ ಹೊಲಸಿನಿಂದ ಎಂದು ಸಾರ್ವಜನಿಕವಾಗಿ ಹೇಳಲಿ.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರವೈಯಕ್ತಿಕ ನಿಂದನೆಗಳು ಯಾರಾದರೂ ನನ್ನ ವಿರುದ್ದ ಮಾಡಿದರೆ ಮಾತ್ರ ನಾನು ಅವರ ಬಗ್ಗೆಯೂ ಹಾಗೆಯೇ ಮಾತನಾಡುತ್ತೇನೆ. ಮಾರಿಕಾಂಬ ದೇವಸ್ಥಾನದಲ್ಲ್ಲಿ ಶಾಸಕ ಹಾಲಪ್ಪ ಹಸ್ತಕ್ಷೇಪ ಜಾಸ್ತಿಯಾಗಿದೆ. ಎಂಡಿಎಫ್ ಗಲಾಟೆಯಲ್ಲಿ ಪ್ರಬುದ್ದ ಸಮಾಜ ಬ್ರಾಹ್ಮಣ ಮತ್ತು ಲಿಂಗಯುತರನ್ನು ಇದೇ ಹಾಲಪ್ಪ ಹೊಡೆಸಿದ್ದಾನೆ. ನಿನ್ನೆ ನನ್ನ ವಿರುದ್ದ ಪ್ರತಿಭಟನೆಯಲ್ಲಿ ರೌಡಿಶೀಟರ್ ಗಳನ್ನು ಹಾಲಪ್ಪ ಪಕ್ಕದಲ್ಲಿಟ್ಟುಕೊಂಡು ಮಾತನಾಡಿಸಿದ್ದಾನೆ. ಇವುಗಳು ಸಾಗರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ ಮಾತಿನ ಮುಖ್ಯಾಂಶಗಳು.
Post a Comment