ದಿನಾಂಕ 02-12-2022 ರಂದು ಯಾರೋ ಕಳ್ಳರು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣಾನಗರದ ವಾಸದ ಮನೆಯೊಂದರ ಎಗ್ಸಾಸ್ಟರ್ ಫ್ಯಾನ್ ಅನ್ನು ಮುರಿದು ಅಲ್ಲಿಂದ ಮನೆಯೊಳಗೆ ಬಂದು ಗಾಡ್ರೇಜ್ ಬೀರುವಿನಲ್ಲಿದ್ದ ನಗದು ಹಣ, ಟಿವಿ, ಮೊಬೈಲ್ ಮತ್ತು ವಾಚ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೇಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 467/2022 ಕಲಂ: 454,457,380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಸದರಿ ಪ್ರಕರಣದ ತನಿಖೆ ಕೈಗೊಂಡ ಶ್ರೀ ಅಂಜನ ಕುಮಾರ್, ಪಿ.ಐ, ದೊಡ್ಡಪೇಟೆ, ವಸಂತ್, ಐಎಸ್ ಐ, ಶ್ರೀ ಸೈಲ್ ಕೆಂಚಣ್ಣವರ, ಫ್ರೊ. ಪಿಎಸ್ ಐ, ಚಂದ್ರಶೇಖರ್ ಎ ಎಸ್ ಐ, ಹಾಗೂ ಸಿಬ್ಬಂಧಿಗಳಾದ ಹೆಚ್.ಸಿ ಪಾಲಾಕ್ಷನಾಯ್ಕ್ ಮತ್ತು ಸಿ.ಪಿ.ಸಿ ಗುರುನಾಯ್ಕ್, ಮನೋಹರ್, ನಿಥಿನ್, ರಮೇಶ್ ರವರುಗಳನ್ನೊಳಗೊಂಡ ತಂಡವು ದಿನಾಂಕ 02-01-2023 ರಂದು ಪ್ರಕರಣದ ಆರೋಪಿತನಾದ ಸದ್ದಾಂ. ಡಿ, 31 ವರ್ಷ, 1ನೇ ಕ್ರಾಸ್ ಅಣ್ಣಾನಗರ, ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಮೇಲ್ಕಂಡ ಪ್ರಕರಣವೂ ಸೇರಿದಂತೆ ಒಟ್ಟು 08 ಮನೆಗಳ್ಳತನ ಪ್ರಕರಣಗಳಿಗೆ ಸಂಬಂದಿಸಿದ ಅಂದಾಜು ಮೌಲ್ಯ 7.22.500/- ರೂ ಗಳ 144.50 ಗ್ರಾಂ ತೂಕದ ಬಂಗಾರದ ಆಭರಣಗಳು, ಅಂದಾಜು ಮೌಲ್ಯ 21.700/- ರೂ ಗಳ 310 ಗ್ರಾಂ ತೂಕದ ಬೆಳಿಯ ವಸ್ತುಗಳು, ಒಂದು ಮೊಬೈಲ್ ಫೋನ್, ಒಂದು ವಾಚ್, 2 ಟಿವಿಗಳು ಸೇರಿ ಒಟ್ಟು 7.77.500/- ರೂ ಮೌಲ್ಯದ ವಸ್ತುಗಳನ್ನು ಅಮಾನತ್ತು ಪಡೆಸಿಕೊಂಡಿರುತ್ತಾರೆ.
ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿರುತ್ತಾರೆ.
Post a Comment