ನ್ಯಾಯ ಕೊಡಿ ಮೋದಿಯವರೇ ಎಂದು ಪ್ರಧಾನಿಗಳ ಮುಂದೆ 12 ಪ್ರಶ್ನೆಗಳನ್ನು ಮುಂದಿಟ್ಟ ವಿಪಕ್ಷ ನಾಯಕ ಸಿದ್ದರಾಮಯ್ಯ.

    ಬೆಂಗಳೂರು: ಯಾದಗಿರಿ ಮತ್ತು ಕಲ್ಬುರ್ಗಿ ಜಿಲ್ಲೆಗಳಲ್ಲಿ ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ವಿಪಕ್ಷನಾಯಕ ಸಿದ್ದರಾಮಯ್ಯ ಪ್ರಧಾನಿಗಳ ಮುಂದೆ ರಾಜ್ಯದ ಜನತೆ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಮುಂದಿಟ್ಟಿದ್ದಾರೆ. ಪ್ರಧಾನಿಗಳ ಮುಂದೆ 12  ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

    ಪಿಎಸ್ಐ ನೇಮಕಾತಿ ಹಗರಣದಿಂದ, ಸಹಾಯಕ ಪ್ರಾಧ್ಯಾಪಕ ನೇಮಕಾತಿ ಹಗರಣವು ಸೇರಿ ಮೊನ್ನೆ ನಡೆದ  PWD   ಇಂಜಿನಿಯರ್ ನೇಮಕಾತಿ ಹಗರಣದಲ್ಲಿ ಕೆಲಸದಿಂದ ವಂಚಿತರಾದ ಎಲ್ಲ ಅರ್ಹರಿಗೆ ನ್ಯಾಯ ಕೊಡಿಸಿ ಮೋದಿಯವರೇ?


                                  By: Anitha H.V
                                  Online Desk

    ಕೆಆರ್ ಪುರಂ ನ ಇನ್ಸ್ಪೆಕ್ಟರ್ ನಂದೀಶ್ 80  ಲಕ್ಷ ಲಂಚ ಕೊಟ್ಟು ವರ್ಗಾವಣೆ ಪಡೆದು ಬಂದ ಕಾರಣಕ್ಕೆ ಒತ್ತಡದಿಂದ ಸತ್ತಿದ್ದಾರೆಂದು ಸ್ವತಃ ಬಿಜೆಪಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ .ಇತರರಿಗೆ ರಕ್ಷಣೆ ನೀಡುವ ಪೊಲೀಸರಿಗೆ ಹೀಗಾದರೆ  ಏನು ಮೋದಿಯವರೇ?

    ಕೋವಿಡ್ ಸಂದರ್ಭದಲ್ಲಿ ಅಗತ್ಯ ಸಲಕರಣೆ ಪೂರೈಕೆ ಮಾಡಿದ್ದ ಗುತ್ತಿಗೆದಾರ ಬಸವರಾಜ ಅಮರಗೋಳ ಅವರಿಗೆ ರಾಜ್ಯ ಸರ್ಕಾರ ಬಿಲ್ ಹಣ ನೀಡದೇ ಇರುವುದರಿಂದ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.ಈತನಿಗೆ ನ್ಯಾಯ ಕೊಡಿಸಿ, ಪ್ರಾಣ ಉಳಿಸಬೇಕಾದವರು ನೀವಲ್ಲವೇ ಮೋದಿಯವರೇ ? ಕೊರೋನಾ ಕಾಲದಲ್ಲಿ ಸ್ಯಾನಿಟೈಸರ್ , ಮಾಸ್ಕ್ ನಿಂದ ಹಿಡಿದು ವೆಂಟಿಲೇಟರ್ ವರೆಗೆ ಎಲ್ಲದರಲ್ಲೂ ರಾಜ್ಯಸರ್ಕಾರ ಲೂಟಿ ಮಾಡಿದ್ದರಿಂದ ಕನಿಷ್ಠ 3 ,000 ಕೋಟಿ ರೂ ಅವ್ಯವಹಾರ ನಡೆದಿದೆ. ಕೊರೊನದಿಂದ ಹಾದಿಬೀದಿಯಲ್ಲಿ ಸತ್ತವರ ಆತ್ಮಗಳು ನ್ಯಾಯಕ್ಕಾಗಿ ನಿಮ್ಮ ಹಾದಿಯನ್ನೇ ಕಾಯುತ್ತಿವೆ ಮೋದಿ ಅವರೇ ..

    ಕಾಲುಬಾಯಿ ರೋಗ ಮತ್ತು ಚರ್ಮಗಂಟು ರೋಗದಿಂದ ಒಂದೂವರೆಲಕ್ಷದಷ್ಟು ಜಾನುವಾರುಗಳು ಮರಣ ಹೊಂದಿವೆ. ರೋಗಕ್ಕೆ ಲಸಿಕೆ ಮತ್ತು ಜೀವನಾಧಾರ ರಾಸುಗಳನ್ನು ಕೆಳೆದುಕೊಂಡ ರೈತ ಕುಟುಂಬಗಳಿಗೆ ಪರಿಹಾರ ಕೊಡಿಸಿ ಪ್ರಧಾನ ಮಂತ್ರಿಗಳೇ ಎಂದು 12 ಪ್ರಶ್ನೆಗಳನ್ನು ಕೇಳಿದ್ದಾರೆ.

Post a Comment

Previous Post Next Post