ಶಿವಮೊಗ್ಗದ ಖ್ಯಾತ ವೈದ್ಯ ಡಾ. ಧನಂಜಯ ಸರ್ಜಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ : ಬಿಜೆಪಿಗೆ ಆನೆ ಬಲ ಬಂದಂತಾಗಿದೆ.


  ಕೆಲ ತಿಂಗಳಿಂದ ಶಿವಮೊಗ್ಗ ರಾಜಕೀಯದ ಕೇಂದ್ರ ಬಿಂದುವಾಗಿ ಮಾರ್ಪಟಿದ್ದ ಡಾ. ಧನಂಜಯ್ ಸರ್ಜಿ ಯವರು ರಾಜ್ಕೀಯ ಜೀವನಕ್ಕೆ ಪಾದಾರ್ಪಣೆ ಮಾಡುತ್ತಾರೆಂಬ ಮಾತು ಎಲ್ಲಕಡೆ ಹರಿದಾಡುತ್ತಲೇ ಇತ್ತು. ಹಾಗೆಯೇ ಯಾವ ಪಕ್ಷದ ಮೂಲಕ ಅವರು ತಮ್ಮ ರಾಜಕೀಯ ಜೀವನ ಪ್ರಾರಂಭಿಸುತ್ತಾರೆ? ಎಂಬ ಕುತೂಹಲಕಾರಿ ಪ್ರಶ್ನೆ ಎಲ್ಲರ ಮನದಲ್ಲಿತ್ತು ಆದರೆ ಆ ಪ್ರಶ್ನೆಗೆ ಇಂದು ಇತ್ತರ ಸಿಕ್ಕಿದೆ. ಮೊದಲಿನಿಂದಲೂ ವೈದ್ಯಕೀಯ ಮತ್ತು ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಧನಂಜಯ್ ಸರ್ಜಿಯವರು ಜನಪರ-ಜೀವಪರ ಎಂಬ ಘೋಷಣೆಯೊಂದಿಗೆ ಸಾಮಾಜಿಕ ಕಾರ್ಯದಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಆದರೆ ಇಂದು ಸರ್ಜಿರವರು  ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿರುವುದು ಸಂಪೂರ್ಣ ಶಿವಮೊಗ್ಗ ಜನತೆಗೆ ಸಂತಸದ ವಿಷಯವಾಗಿದೆ. 

    ಧನಂಜಯ್ ಸರ್ಜಿಯವರು ಮೊದಲಿನಿಂದಲೂ ತಮ್ಮ ವ್ಯಕ್ತಿತ್ವದ ಮೂಲಕ ಎಲ್ಲರ ಮನೆಮಾತಾಗಿದ್ದರು. ಯಾವುದೇ ರಾಜಕೀಯದ ಅಧಿಕಾರದಲ್ಲಿ ಇಲ್ಲದಿದ್ದರೂ ತಮ್ಮ ನಿಸ್ವಾರ್ಥ ಸೇವೆಯಿಂದ ಎಷ್ಟೋ ಜನರ ಕಷ್ಟಗಳನ್ನು ನೀಗಿಸಿದ್ದರು. ಇಂತಹ ಮನಸ್ಥಿತಿ ಹೊಂದಿರುವ ಇವರು ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿರುವುದು ಎಷ್ಟೋ ಜನರ ಕನಸು ನನಸಾದಂತಿದೆ. ಯಾವುದೇ ರೀತಿಯ ಅಪೇಕ್ಷೆ ಇಲ್ಲದೆಯೇ ಜನರ ಸಂಕಷ್ಟಕ್ಕೆ ಮಿಡಿಯುವಂತ ಅದ್ಭುತ ಹೃದಯವಂತಿಕೆ ಹೊಂದಿರುವ ವ್ಯಕ್ತಿ ಧನಂಜಯ ಸರ್ಜಿರವರು ಎಂದರೇ ತಪ್ಪಾಗಲಾರದು. ಪ್ರತಿಯೊಂದು ಹಂತದಲ್ಲಿಯೂ ಸಮಾಜದ ಜನರ ಸೇವೆ ಮಾಡುವುದೇ ನನ್ನ ಜೀವನದ ಮುಖ್ಯ ಉದ್ದೇಶ ಎಂದುಕೊಂಡಿದ್ದ ಇವರ ಈ ಒಂದು ಮನೋಭಾವಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಅದು ಕಡಿಮೆಯೇ. ಸರ್ಜಿಯವರ ಈ ವ್ಯಕ್ತಿತ್ವ ಕಾರಣದಿಂದಲೇ ಅವರಿಗೆ ಇಂದು ಬಿಜೆಪಿ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ದಿಸಲು ಅವಕಾಶ ದೊರೆತಿರುವುದು. ಸರ್ಜಿರವರು ಬಿಜೆಪಿ ಗೆ ಸೇರ್ಪಡೆಯಾಗಿರುವುದು ಬಿಜೆಪಿ ಪಕ್ಷಕ್ಕೆ ಆನೆಬಲ ಬಂದಂತಾಗಿದೆ. ಇಂತಹ ಒಬ್ಬ ಬಲಿಷ್ಟ ವ್ಯಕ್ತಿ ಬಿಜೆಪಿ ಗೆ ಸೇರ್ಪಡೆಯಾಗಿರುವುದು ಶಿವಮೊಗ್ಗ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಒಳ್ಳೆಯ ವ್ಯಕ್ತಿತ್ವವುಳ್ಳ, ಜನರ ಕಷ್ಟಕ್ಕೆ ಮಿಡಿಯುವಂತ ವ್ಯಕ್ತಿ ಅಧಿಕಾರಕ್ಕೆ ಬರಬೇಕು ಎಂಬುದು ಸಮಾಜದ ಅನೇಕ ಜನರ ಆಸೆಯಾಗಿತ್ತು. ಸರ್ಜಿರವರು ಬಿಜೆಪಿ ಗೆ ಸೇರ್ಪಡೆಯಾಗುವ ಮೂಲಕ ಎಷ್ಟೋ ಜನರ ಆಸೆಯನ್ನು ಈಡೇರಿಸಿದ್ದಾರೆ. ಅಧಿಕಾರದಲ್ಲಿ ಇಲ್ಲದ ಸಮಯದಲ್ಲೇ ಎಷ್ಟೋ ಸಮಾಜಮುಖಿ ಸೇವೆಗಳನ್ನು ಮಾಡಿರುವ ಸರ್ಜಿರವರು ಇನ್ನೂ ಅಧಿಕಾರಕ್ಕೆ ಬಂದರೆ ಇನ್ನೂ ಅದೆಷ್ಟೂ ಸಮಾಜಮುಖಿ ಕಾರ್ಯಗಳನ್ನು ಮಾಡಬಹುದು. ಇಂತಹವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಬಿಜೆಪಿ ಪಕ್ಷದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ. ಯಾವುದೇ ಜವಾಬ್ದಾರಿಯನ್ನಾಗಲಿ ಪ್ರಾಮಣಿಕವಾಗಿ ನಿಭಾಯಿಸುವ ಇವರು ಮುಂದೇ ತಮ್ಮ ರಾಜಕೀಯ ಜೀವನದಲ್ಲಿ ಬರುವಂತಹ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ, ನಿಸ್ವಾರ್ಥ ಮನಸ್ಸಿನಿಂದ ನಿಭಾಯಿಸುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇವರ ಮುಂದಿನ ರಾಜಕೀಯ ಜೀವನದಲ್ಲಿ ಇವರು ಸಮಾಜದ ಅಭಿವೃದ್ದಿಗಾಗಿ ಮಾಡುವ ಕಾರ್ಯದ ವೈಖರಿಯನ್ನು ಇಡೀ ಕರ್ನಾಟವೇ ನೋಡುವಂತಾಗಲಿ. ಶಿವಮೊಗ್ಗದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದ ಇವರು ಮುಂದೆ ರಾಜ್ಯದ ಜನತೆ ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Post a Comment

Previous Post Next Post