ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ತುಡಿನೀರು ಗ್ರಾಮದ ವಾಸಿಯಾದ ಸಲೀಂ 25 ವರ್ಷ ರವರು ದಿನಾಂಕ:15-12-2022 ರಂದು ರಾತ್ರಿ ಜಮೀನಿಗೆ ಮಲಗಲು ಹೋಗಿದ್ದು, ವಾಪಾಸ್ ಮನೆಗೆ ಹಿಂದಿರುಗಿ ಬಂದಿರದ ಕಾರಣ ಎಲ್ಲಾ ಕಡೆ ಹುಡುಕಲಾಗಿ ದಿನಾಂಕ:18-12-2022 ರಂದು ಬೆಳಿಗ್ಗೆ ಅದೇ ಗ್ರಾಮದ ಹಳ್ಳವೊಂದರ ಪಕ್ಕದ ಪೊದೆಯಲ್ಲಿ ಸಲೀಂ ನ ಮೃತ ದೇಹವು ದೊರೆತಿದ್ದು ನೋಡಲಾಗಿ ತಲೆ ಮತ್ತು ಎಡಗಾಲಿನ ಹತ್ತಿರ ಯಾವುದೋ ಆಯುಧದಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದು ಕಂಡು ಬಂದಿರುತ್ತದೆಂದು ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0186/2022 ಕಲಂ: 302, 201 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿರುತ್ತದೆ.
ಪ್ರಕರಣದ ತನಿಖೆ ಸಂಬಂದ ಶ್ರೀ ಶಿವಾನಂದ ಮದರಕಂಡಿ, ಡಿ ವೈಎಸ್ ಪಿ ಶಿಕಾರಿಪುರ ಉಪವಿಭಾಗ ಮತ್ತು ಶ್ರೀ ರಾಜಶೇಖರ ಸಿಪಿಐ ಸೊರಬ ವೃತ್ತ ರವರ ನೇತೃತ್ವದಲ್ಲಿ ಶ್ರೀ ರಾಜುರೆಡ್ಡಿ ಪಿ.ಎಸ್ಐ ಹಾಗೂ ಸಿಬ್ಬಂದಿಗಳಾದ ಎ. ಎಸ್. ಐ ತೋಟಪ್ಪ , ಹೆಚ್.ಸಿ ಉಷಾ, ಹೆಚ್.ಸಿ ಗಿರೀಶ್, ಸಿದ್ದೇಶ್, ಸಿಪಿಸಿ ಮಲ್ಲೇಶ, ಮಂಜುನಾಥ, ಭರತ ಭೂಷಣ್, ಚಾಲಕರಾದ ಎ.ಆರ್. ಎಸ್ ಐ ಬಂಗಾರಪ್ಪ, ಎಪಿಸಿ ಕೃಷ್ಣಪ್ಪ ರವರುಗಳನ್ನೊಳಗೊಂಡ ತಂಡವನ್ನು ರಚನೆ ಮಾಡಿದ್ದು, ಸದರಿ ತಂಡವು ಪ್ರಕರಣದ ತನಿಖೆ ಕೈಗೊಂಡು ದಿನಾಂಕ:23-12-2022 ರಂದು ಪ್ರಕರಣ್ದ 1 ನೇ ಆರೋಪಿ ರಫೀಕ್, 35 ವರ್ಷ, ತುಡಿನೀರು ಗ್ರಾಮ, ಸೊರಬ ತಾಲ್ಲೂಕು ಮತ್ತು ದಿನಾಂಕ:24-12-2022 ರಂದು ಪ್ರಕರಣದ 2ನೇ ಆರೋಪಿ ಸಂತೋಷ, 24 ವರ್ಷ, ತುಡಿನೀರು ಗ್ರಾಮ, ಸೊರಬ ತಾಲ್ಲೂಕು ರವರನ್ನು ದಸ್ತಗಿರಿ ಮಾಡಿರುತ್ತಾರೆ.
ಸದರಿ ಆರೋಪಿತರ ವಿಚಾರಣೆ ವೇಳೆ ಪ್ರಕರಣ್ದ 1 ನೇ ಆರೋಪಿ ರಫೀಕ್ ನು ಮೃತ ಸಲೀಂನಿಗೆ ಅಣ್ಣನಾಗಿದ್ದು, ಜಮೀನಿನ ವಿಚಾರದಲ್ಲಿ ಇಬ್ಬರಿಗೂ ಆಗಾಗ ಜಗಳವಾಗುತ್ತಿದ್ದು ಅಲ್ಲದೆ ಮೃತ ಸಲೀಂ ನು ತನ್ನ ಅಣ್ಣನಾದ ರಫೀಕ್ ನು ಮನೆಯಲ್ಲಿ ಇಲ್ಲದ ಸಮಯದಲ್ಲಿ ಆತನ ಹೆಂದತಿಯೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ಬಗ್ಗೆ ರಫೀಕ್ ನಿಗೆ ದ್ವೇಷವಿದ್ದು, ಈ ಕಾರಣದಿಂದ ಸಲೀಂ ನನ್ನು ಕೊಲೆ ಮಾಡಲು ಪ್ರಕರಣದ 2 ನೇ ಆರೋಪಿ ಸಂತೋಷ್ ನೊಂದಿಗೆ ಸೇರಿ ದಿನಾಂಕ 16-12-2022 ರಂದು ಬೆಳಗಿನ ಜಾವ ಜಮೀನಿನಲ್ಲಿ ಮಲಗಿದ್ದ ಸಲೀಂ ತಲೆಗೆ ದೊಣ್ಣೆಗಳಿಂದ ಬಲವಾಗಿ ಹೊಡೆದು ಕೊಲೆ ಮಾಡಿ ಸಾಕ್ಷ್ಯಾ ನಾಶ ಮಾಡುವ ಉದ್ದೇಶದಿಂದ ಸಲೀಂ ನ ಮೃತ ದೇಹದ ಕಾಲುಗಳನ್ನು ಬಟ್ಟೆಯಿಂದ ಕಟ್ಟಿ, ಮೃತ ದೇಹ ಮತ್ತು ಮಲಗಿದ್ದ ಚಾಪೆ ಹಾಗೂ ಕೌದಿ ಸಮೇತ ಜಮೀನಿನ ಹತ್ತಿರದ ಬದನಿಕಟ್ಟೆ ಹಳ್ಳದ ಪೊದೆಯಲ್ಲಿ ಬಿಸಾಕಿರುವುದು ಕಂಡು ಬಂದಿರುತ್ತದೆ.
ಸದರಿ ತನಿಖಾ ತಂಡದ ಉತ್ತಮ ಕಾರ್ಯವನ್ನು ಮಾನ್ಯ ಪೊಲೀಸ್ ಅದೀಕ್ಷರು, ಶಿವಮೊಗ್ಗ ಜಿಲ್ಲೆರವರ ಪ್ರಶಂಸಿಸಿ , ಅಭಿನಂದಿಸಿರುತ್ತಾರೆ.
Post a Comment