ಬೆಂಗಳೂರು: ನಕಲಿ ಅಂಕಪಟ್ಟಿ ಜಾಲ ಪತ್ತೆ, 4 ಮಂದಿ ಸಿಸಿಬಿ ಬಲೆಗೆ; ಪ್ರತಿಷ್ಠಿತ ವಿವಿಗಳ ನಕಲಿ ಅಂಕಪಟ್ಟಿ ತಯಾರಿಕೆ

 ಹಣ ಪಡೆದು ನಕಲಿ ಅಂಕಪಟ್ಟಿ ನೀಡುತ್ತಿದ್ದ ಬೃಹತ್ ಜಾಲವನ್ನು ಬೆಂಗಳೂರು (ಕೇಂದ್ರೀಯ ಅಪರಾಧ ವಿಭಾಗ) ಸಿಸಿಬಿ ಪೊಲೀಸರು ಮಂಗಳವಾರ ಭೇದಿಸಿದ್ದಾರೆ.

                                        ನಕಲಿ ಅಂಕಪಟ್ಟಿ ಜಾಲ

By : Rekha.M
Online Desk

ಬೆಂಗಳೂರು: ಹಣ ಪಡೆದು ನಕಲಿ ಅಂಕಪಟ್ಟಿ ನೀಡುತ್ತಿದ್ದ ಬೃಹತ್ ಜಾಲವನ್ನು ಬೆಂಗಳೂರು (ಕೇಂದ್ರೀಯ ಅಪರಾಧ ವಿಭಾಗ) ಸಿಸಿಬಿ ಪೊಲೀಸರು ಮಂಗಳವಾರ ಭೇದಿಸಿದ್ದಾರೆ.

ದೇಶದ ೨೫ ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ( ಮಾರ್ಕ್ಸ್ ಕಾರ್ಡ್) ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ನಕಲಿ ಮಾರ್ಕ್ಸ್ ಕಾರ್ಡ್ ಮಾರಾಟದ ಜಾಲದಲ್ಲಿದ್ದ ಶಿಲ್ಪ , ಸುರೇಂದ್ರ ಕುಮಾರ್, ಶಾರದ ಹಾಗೂ ರಾಜಣ್ಣ ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಕಲಿ ಮಾರ್ಕ್ಸ್ ಕಾರ್ಡ್ ತಯಾರಿಸಿ ಮಾರಾಟ ಮಾಡುತ್ತಿದ್ದ ವೆಂಕಟೇಶ್ವರ ಇನ್ಸ್ಟಿಟ್ಯೂಟ್ ಗೆ ಸೇರಿದ ಮಹಾಲಕ್ಷ್ಮಿ ಲೇಔಟ್, ಕೊಡಿಗೇಹಳ್ಳಿ ಹಾಗೂ ಮಾರತ್ ಹಳ್ಳಿಯ ಮೂರು ಇನ್ಸ್ಟಿಟ್ಯೂಟ್ ಗಳ ಮೇಲೆ ಸಿಸಿಬಿಯ ಮೂರು ವಿಶೇಷ ತಂಡಗಳು ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡದುಕೊಂಡು ಏಕಕಾಲದಲ್ಲಿ ದಾಳಿ ನಡೆಸಿ ಸುಮಾರು 12 ಗಂಟೆಗಳ ಕಾಲ ಶೋಧ ನಡೆಸಿ ಜಾಲವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ. 

ಬಂಧಿತ ಆರೋಪಿಗಳಿಂದ ಮೂರು ಇನ್ಸ್ಟಿಟ್ಯೂಟ್      ಗಳಲ್ಲಿದ್ದ ಎಸ್ಎಸ್ಎಲ್ ಸಿ,ಪಿಯುಸಿ,ಬಿಎ.ಬಿಎಸ್ಸಿ,ಬಿಕಾಂ,ಬಿಬಿಎ,ಎಂಬಿಎ,ಇಂಜಿನಿಯರಿಂಗ್ ಸೇರಿ ವಿವಿಧ ಪದವಿಗೆ ನೀಡುತ್ತಿದ್ದ 1500 ಕ್ಕೂ ಹೆಚ್ಚು ನಕಲಿ ಮಾರ್ಕ್ಸ್ ಕಾರ್ಡ್, 80ಕ್ಕೂ ಹೆಚ್ಚು ಸೀಲ್ ಗಳು, 30 ಹಾಲೋಗ್ರಾಮ್ ಸ್ಟಿಕ್ಕರ್, 9 ಮೊಬೈಲ್ ಗಳು, ನಕಲಿ ಸುಮಾರು 1097 ದಾಖಲಾತಿ, ಪಿ.ಹೆಚ್.ಡಿ ಪುಸ್ತಕಗಳು, ಹಾರ್ಡ್ ಡಿಸ್ಕ್, ಪ್ರಿಂಟರ್, ಮೊಬೈಲ್ ಗಳು, ಸೀಲ್‌ಗಳು, ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವೆಂಕಟೇಶ್ವರ ಇನ್ಸ್ ಟ್ಯೂಟ್ ಸಂಸ್ಥೆಯ ವೆಬ್ ಸೈಟ್ ನಲ್ಲಿ ವಿವಿಧ ಪದವಿಗಳ ದೂರ ಶಿಕ್ಷಣ( ಕರಸ್ಪಾಂಡೆನ್ಸ್) ಕೋರ್ಸ್‌ಗಳನ್ನು ಹೊಂದಿದ್ದು ಮಾಹಿತಿ ನೀಡಲಾಗಿತ್ತು, ಇದನ್ನು ನೋಡಿದ ದೂರುದಾರರು ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಕಛೇರಿಗೆ ಕಳೆದ ನ.2 ರಂದು ಹೋಗಿ ಕಛೇರಿಯ ಸ್ವಾಗತಕಾರರಾಗಿದ್ದ ಮಹಿಳೆಯನ್ನು ವಿಚಾರಿಸಿ ಬಿ.ಕಾಂ ಡಿಗ್ರಿ ಪದವಿ ಅವಶ್ಯಕತೆ ಇದೆ ಎಂದು ಕೇಳಲಾಗಿದೆ. ಸದರಿ ಮಹಿಳೆ ಒಂದು ಲಕ್ಷ ಹಣ ಕೊಟ್ಟರೆ ನಿಮಗೆ ಪ್ರತಿಷ್ಠಿತ ವಿಶ್ವ ವಿದ್ಯಾಲಯಗಳಿಂದ ಪದವಿ ಪ್ರಮಾಣ ಪತ್ರ ಕೊಡುವುದಾಗಿ ತಿಳಿಸಿದ್ದರು.

    ಐದು ವರ್ಷಗಳಿಂದ ವಿಎಸ್ಎಸ್ ಸಂಸ್ಥೆಯ ವೆಬ್ ಸೈಟ್ ಕಾರ್ಯನಿರ್ವಹಿಸುತ್ತಿದ್ದು, ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್,  ಶಾರದಾ, ಶಿಲ್ಪ‌ ಹಾಗೂ ರಾಜಣ್ಣ ಎಂಬವರನ್ನು ಬಂಧಿಸಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಅರುಣಾಚಲ ಪ್ರದೇಶ, ಹಿಮಾಚಲ‌ ಪ್ರದೇಶ, ಸಿಕ್ಕಿಂ , ಪಶ್ಚಿಮ ಬಂಗಾಳ‌ ಸೇರಿದಂತೆ 20ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನ 1 ಸಾವಿರಕ್ಕೂ ಹೆಚ್ಚು ನಕಲಿ ಅಂಕಪಟ್ಟಿ ಹಾಗೂ 70ಕ್ಕೂ  ಸೀಲ್, ಹಾರ್ಡ್ ಡಿಸ್ಕ್  ಪ್ರಿಂಟರ್ ಹಾಗೂ ಮೊಬೈಲ್ ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ  ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

    ಇತ್ತೀಚೆಗೆ ಯುವಕನೊಬ್ಬನನ್ನು ಸಂಪರ್ಕಿಸಿದ ಆರೋಪಿಗಳು ಪರೀಕ್ಷೆಯಿಲ್ಲದೆ  ಡಿಗ್ರಿ ಮಾರ್ಕ್ಸ್ ಕಾರ್ಡ್ ಬೇಕಾದರೆ ಒಂದು ಲಕ್ಷ ರೂಪಾಯಿ ನೀಡುವಂತೆ ಕೇಳಿದ್ದರು. ಆರೋಪಿಗಳು ಯುವಕನ ವಾಟ್ಸಾಪ್  ನಂಬರ್ ಗೆ ಫೇಕ್ ಮಾರ್ಕ್ಸ್ ಕಾರ್ಡ್ ಕಳುಹಿಸಿದ್ದರು‌‌.  ಅನುಮಾನಗೊಂಡು ಯುವಕ ಸೈಬರ್ ಕ್ರೈಂ ಪೊಲೀಸರಿಗೆ ನೀಡಿದ ದೂರು ಆಧರಿಸಿ ಮಹಾಲಕ್ಷ್ಮೀ ಲೇಔಟ್ ನ ಕೇಂದ್ರ ಕಚೇರಿ ಸೇರಿ ಮೂರು ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಅಕ್ರಮ ಜಾಲ ಬೆಳಕಿಗೆ ಬಂದಿದೆ‌.
     


    Post a Comment

    Previous Post Next Post