ಇತ್ತೀಚೆಗೆ ನಡೆದ ಮಂಗಳೂರು ಸ್ಫೋಟದ ಪ್ರಮುಖ ಶಂಕಿತ ಮೊಹಮ್ಮದ್ ಶಾರಿಕ್ ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಆ್ಯಂಡ್ ಇರಾಕ್ ಉಗ್ರ ಸಂಘಟನೆಯಿಂದ ತರಬೇತಿ ಪಡೆದಿದ್ದ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಶೋಭಾ ಕರಂದ್ಲಾಜೆ
ಬೆಂಗಳೂರು: ಇತ್ತೀಚೆಗೆ ನಡೆದ ಮಂಗಳೂರು ಸ್ಫೋಟದ ಪ್ರಮುಖ ಶಂಕಿತ ಮೊಹಮ್ಮದ್ ಶಾರಿಕ್ ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಆ್ಯಂಡ್ ಇರಾಕ್ ಉಗ್ರ ಸಂಘಟನೆಯಿಂದ ತರಬೇತಿ ಪಡೆದಿದ್ದ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ವಿರೋಧಿ ಗೀಚುಬರಹ ಪ್ರಕರಣದಲ್ಲಿ ತೀವ್ರ ತನಿಖೆ ನಡೆಯದ ಕಾರಣ ಜಾಮೀನಿನ ಮೇಲೆ ಆತ ಹೊರಬಂದಿದ್ದಾನೆ ಎಂದು ಹೇಳಿದರು.
ಶಾರಿಕ್ ಇಸಿಸ್‌ನಿಂದ ತರಬೇತಿ ಪಡೆದಿದ್ದ ಮತ್ತು ಕದ್ರಿ ಮಂಜುನಾಥ್ ದೇವಸ್ಥಾನ ಮತ್ತು ಈ ಪ್ರದೇಶಗಳಲ್ಲಿನ ಇತರ ದೇವಾಲಯಗಳು, ಮುಖಂಡರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪ್ರಯತ್ನಿಸುತ್ತಿದ್ದ ಎಂದು ತಿಳಿಸಿದರು.
ಶಾರಿಕ್‌ಗೆ ಇಸಿಸ್‌ನಿಂದ ತರಬೇತಿ ನೀಡಲಾಗಿದ್ದು, ತರಬೇತಿ ಬಳಿಕ ಇತರೆ ಯುವಕರಿಗೆ ತರಬೇತಿ ನೀಡಿದ್ದಾನೆ ಎಂದರು.
ಇದೇ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆಯೊಂದಿಗೆ ಸಹಕರಿಸುವಂತೆ ಸ್ಥಳೀಯ ಪೊಲೀಸರಿಗೆ ಮನವಿ ಮಾಡಿದ ಅವರು, ಕಳೆದ ಮೂರು ತಿಂಗಳಿನಿಂದ ಮಂಗಳೂರಿನಲ್ಲಿ ಎನ್‌ಐಎ ಸಕ್ರಿಯವಾಗಿದೆ ಎಂದು ಹೇಳಿದರು.
Post a Comment