ಕಣ್ಣೀರು ತಂದ ಈರುಳ್ಳಿ: 205 ಕೆಜಿ ಉಳ್ಳಾಗಡ್ಡಿ ಮಾರಾಟ ಮಾಡಿದ ಗದಗ ರೈತನಿಗೆ ಸಿಕ್ಕಿದ್ದು ಬರೋಬ್ಬರಿ 8 ರು 36 ಪೈಸೆ!

 ಗದಗದ ರೈತರೊಬ್ಬರು ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ 205 ಕೆಜಿ ಈರುಳ್ಳಿ ಮಾರಾಟ ಮಾಡಿ 8.36 ರೂ. ಹಣ ಪಡೆದಿದ್ದಾರೆ.

ರೈತ ಶೇರ್ ಮಾಡಿರುವ ರಸೀದಿ

By : Rekha.M
Online Desk

ಗದಗ: ಇತ್ತೀಚೆ ತರಕಾರಿ ಬೆಳೆಗಳು ಹುಚ್ಚುಚ್ಚಾಗಿ ಏರಿಳಿತ ಕಾಣುತ್ತಿವೆ, ಆದರೆ ಇಲ್ಲೊಂದು ಆಘಾತಕಾರಿ ಘಟನೆ ನಡೆದಿದೆ.

ಗದಗದ ರೈತರೊಬ್ಬರು ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ 205 ಕೆಜಿ ಈರುಳ್ಳಿ ಮಾರಾಟ ಮಾಡಿ 8.36 ರೂ. ಹಣ ಪಡೆದಿದ್ದಾರೆ. ಇದರಿಂದ ಕಂಗೆಟ್ಟ ರೈತ ತನ್ನ ಉತ್ಪನ್ನಗಳನ್ನು ಬೆಂಗಳೂರಿಗೆ ತರದಂತೆ ಇತರ ರೈತರಿಗೆ ಎಚ್ಚರಿಕೆ ನೀಡಲು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ರಸೀದಿ ವೈರಲ್ ಆಗಿದೆ.

ಯಶವಂತಪುರ ಮಾರುಕಟ್ಟೆಯಲ್ಲಿಈರುಳ್ಳಿ ಮಾರಾಟ ಮಾಡಲು ಸುಮಾರು 50 ರಾತರು 415 ಕಿಮೀ ನಿಂದ ಬರುತ್ತಾರೆ, ಕ್ವಿಂಟಾಲ್ ಈರುಳ್ಳಿಗೆ 500 ರು ಇದ್ದ ಬೆಲೆ ಏಕಾ ಏಕಿ 200 ರುಪಾಯಿಗೆ ಕುಸಿದಿದೆ.

ಕೋಪಗೊಂಡ ರೈತರು, ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಇದೀಗ ಪ್ರತಿಭಟನೆಗೆ ಯೋಜಿಸುತ್ತಿದ್ದಾರೆ. ಗದಗದ ರೈತರು ಈ ವರ್ಷ ನಿರಂತರ ಮಳೆಯಿಂದ ಹಾನಿಗೊಳಗಾಗಿದ್ದೇವೆ ಮತ್ತು ನಾವು ಬೆಳೆದ ಈರುಳ್ಳಿ ಗಾತ್ರದಲ್ಲಿ ಚಿಕ್ಕದಾಗಿದೆ ಎಂದು ಪವಾಡೆಪ್ಪ ಹೇಳಿದರು.

ಪುಣೆ, ತಮಿಳುನಾಡಿನಿಂದ ಯಶವಂತಪುರಕ್ಕೆ ಉತ್ಪನ್ನಗಳನ್ನು ತರುವ ರೈತರಿಗೆ ಬೆಳೆ ಉತ್ತಮವಾಗಿರುವುದರಿಂದ ಉತ್ತಮ ಬೆಲೆ ಸಿಗುತ್ತಿದೆ. ಆದರೆ, ಇಷ್ಟು ಕಡಿಮೆ ಬೆಲೆ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ’ ಎಂದು ಪವಾಡೆಪ್ಪ ಹೇಳಿದರು.

ಗದಗ ಮತ್ತು ಉತ್ತರ ಕರ್ನಾಟಕದ ಈರುಳ್ಳಿ ಬೆಳೆಗೆ ಉತ್ತಮ ಬೆಲೆ ಸಿಗದ ಹಿನ್ನೆಲೆಯಲ್ಲಿ ಯಶವಂತಪುರ ಮಾರುಕಟ್ಟೆಗೆ ಬರುವುದನ್ನು ತಪ್ಪಿಸಲು ಇತರ ರೈತರನ್ನು ಎಚ್ಚರಿಸಲು ನಾನು ರಸೀದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ ಲೋಡ್ ಮಾಡಿದ್ದಾಗಿ ಹೇಳಿದ್ದಾರೆ. ಬೆಳೆ ಬೆಳೆದು ಮಾರಾಟ ಮಾಡಲು ನಾನು 25 ಸಾವಿರ ರು ಹಣ ಖರ್ಚು ಮಾಡಿದ್ದಾಗಿ ತಿಳಿಸಿದ್ದಾರೆ.






Post a Comment

Previous Post Next Post