ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಗುಜರಾತ್ ಎಎಪಿ ಮುಖ್ಯಸ್ಥನಿಗೆ ಎನ್‌ಸಿಡಬ್ಲ್ಯು ಸಮನ್ಸ್, ವಶಕ್ಕೆ

 ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು) ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಗುಜರಾತ್ ಎಎಪಿ ಘಟಕದ ಮುಖ್ಯಸ್ಥ ಗೋಪಾಲ್...

                        ದೆಹಲಿ ಪೊಲೀಸರಿಂದ ಗೋಪಾಲ್ ಇಟಾಲಿಯಾ ವಶಕ್ಕೆ

By : Rekha.M
Online Desk

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ(ಎನ್‌ಸಿಡಬ್ಲ್ಯು) ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಗುಜರಾತ್ ಎಎಪಿ ಘಟಕದ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರಿಗೆ ಸಮನ್ಸ್ ನೀಡಿದೆ. 

ಸಮನ್ಸ್ ವಿರೋಧಿಸಿ ಎನ್‌ಸಿಡಬ್ಲ್ಯು ಕಚೇರಿ ಮುಂದೆ ಆಪ್ ಕಾರ್ಯಕರ್ತರ ಪ್ರತಿಭಟನೆ ನಡುವೆ ದೆಹಲಿ ಪೊಲೀಸರು ಗುರುವಾರ ಗುಜರಾತ್ ಎಎಪಿ ಮುಖ್ಯಸ್ಥನನ್ನು ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ವಶಕ್ಕೆ ಪಡೆದಿದ್ದರು. 

ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಇಟಾಲಿಯಾ ಬೆಂಬಲಿಗರು ಎನ್‌ಸಿಡಬ್ಲ್ಯೂ ಕಟ್ಟಡದ ಹೊರಗೆ ಗದ್ದಲ ಸೃಷ್ಟಿಸುತ್ತಿದ್ದಾರೆಂದು ದೂರು ಬಂದ ನಂತರ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ಅವರನ್ನು ವಶಕ್ಕೆ ತೆಗೆದುಕೊಂಡಿತು. ನಂತರ ಇಟಾಲಿಯಾ ಅವರನ್ನು ಪೊಲೀಸರು ಬಿಡುಗಡೆ ಮಾಡಿದರು.

ಎಎಪಿ ನಾಯಕನ ವಿರುದ್ಧ ಪೊಲೀಸ್ ಕ್ರಮಕ್ಕೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇಟಾಲಿಯಾ ಬಂಧನವು ಗುಜರಾತ್‌ನಾದ್ಯಂತ ಪಟೇಲ್ ಸಮುದಾಯದಲ್ಲಿ ಭಾರಿ ಆಕ್ರೋಶ ಉಂಟುಮಾಡಿದೆ ಎಂದು ಹೇಳಿದ್ದಾರೆ.

"ಇಡೀ ಬಿಜೆಪಿ" ಇಟಾಲಿಯಾ ಹಿಂದೆ ಬಿದ್ದಿರುವುದು ಏಕೆ ಎಂದು ಟ್ವಿಟರ್‌ನಲ್ಲಿ ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ "ನಿಂದನೀಯ ಮತ್ತು ಅಸಭ್ಯ ಭಾಷೆ" ಬಳಸಿದ್ದಕ್ಕಾಗಿ ಇಟಾಲಿಯಾಗೆ ಸಮನ್ಸ್ ನೀಡಲಾಗಿದೆ. ಅವರ ಹೇಳಿಕೆ "ಲಿಂಗ ಪಕ್ಷಪಾತ, ಸ್ತ್ರೀದ್ವೇಷ ಮತ್ತು ಖಂಡನೀಯ" ಎಂದು ಎನ್‌ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಅವರು ಹೇಳಿದ್ದಾರೆ.

ವಿಚಾರಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಟಾಲಿಯಾ ಅವರು ತಮ್ಮ ಮೌಖಿಕ ಹೇಳಿಕೆಯಲ್ಲಿ, ವೀಡಿಯೊದಲ್ಲಿರುವ ವ್ಯಕ್ತಿ ತಾವಲ್ಲ ಎಂದು ಹೇಳಿದ್ದಾರೆ. 

ವಿಚಾರಣೆ ವೇಳೆ ಗುಜರಾತಿ ಭಾಷೆಯಲ್ಲಿ ಮಾತನಾಡಲು ಆರಂಭಿಸಿದ ಇಟಾಲಿಯಾ ಅವರ ಹೇಳಿಕೆಯನ್ನು ಭಾಷಾಂತರ ಮಾಡಲು ಭಾಷಾಂತರಕಾರರ ವ್ಯವಸ್ಥೆ ಮಾಡಲು ಆಯೋಗ ಮುಂದಾಗಿದೆ ಎಂದು ಎನ್‌ಸಿಡಬ್ಲ್ಯೂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Post a Comment

Previous Post Next Post