ಬಿಹಾರ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವುದಕ್ಕೆ ಯಾವುದೇ ಆತುರವಿಲ್ಲ ಎಂದು ಪ್ರತಿಪಾದಿಸಿದ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)ದ ನಾಯಕರು ಈ ವಿಷಯದ ಬಗ್ಗೆ...
ತೇಜಸ್ವಿ ಯಾದವ್ಪಾಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವುದಕ್ಕೆ ಯಾವುದೇ ಆತುರವಿಲ್ಲ ಎಂದು ಪ್ರತಿಪಾದಿಸಿದ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)ದ ನಾಯಕರು ಈ ವಿಷಯದ ಬಗ್ಗೆ ಮಾತನಾಡಬಾರದು ಎಂದು ಸಲಹೆ ನೀಡಿದ್ದಾರೆ.
ಮುಂದಿನ ವರ್ಷದ ವೇಳೆಗೆ ಯುವ ನಾಯಕ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಆರ್‌ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಅವರು ಇತ್ತೀಚೆಗೆ ದೆಹಲಿಯಲ್ಲಿ ಹೇಳಿಕೆ ನೀಡಿದ್ದು, ಇದು ನಿತೀಶ್ ಕುಮಾರ್ ಅವರ ಜೆಡಿಯುನಲ್ಲಿ ಕೆಲವು ನಾಯಕರನ್ನು ಕಂಗೆಡಿಸಿದೆ.
ನನಗೆ ಸಿಎಂ ಆಗುವ ಯಾವುದೇ ವೈಯಕ್ತಿಕ ಮಹತ್ವಾಕಾಂಕ್ಷೆ ಇಲ್ಲ ಅಥವಾ ಆತುರವಿಲ್ಲ. ಬೆಂಬಲಿಗರು ಮಿತಿಮೀರಿ ಮಾತನಾಡುತ್ತಿದ್ದಾರೆ. ಆದರೆ ಭವಿಷ್ಯದಲ್ಲಿ ಸಿಎಂ ಯಾರಾಗಬಹುದು ಎಂದು ನಾವು ಯೋಚಿಸಬೇಕಾದ ಸಮಯ ಇದಲ್ಲ ಎಂದು ಯಾದವ್ ಹೇಳಿದ್ದಾರೆ.
ಬಿಜೆಪಿ ಪ್ರತಿನಿಧಿಸುವ ಫ್ಯಾಸಿಸ್ಟ್ ಶಕ್ತಿಗಳನ್ನು ಅಧಿಕಾರದಿಂದ ಕಿತ್ತೊಗೆಯುವುದರ ಮೇಲೆ ನಾವು ಗಮನಹರಿಸಬೇಕು. ಬಿಹಾರದಲ್ಲಿ ನಾವು ಅದನ್ನು ಸಾಧಿಸಿದ್ದೇವೆ. ರಾಷ್ಟ್ರೀಯವಾಗಿಯೂ ಇದನ್ನು ಸಾಧಿಸಬೇಕಾಗಿದೆ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
Post a Comment