ಟ್ಯೂಶನ್‍ಗೆ ಹೋದ ಬಾಲಕಿ ನೀರಿನ ಸಂಪ್‍ನಲ್ಲಿ ಅನುಮಾನಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ. ಮಳವಳ್ಳಿ ಪಟ್ಟಣದ ಎನ್‍ಇಎಸ್ ಬಡಾವಣೆಯ ಅಶ್ವಿನಿ ಮತ್ತು ಸುರೇಶ್ ಕುಮಾರ್ ದಂಪತಿಯ ಪುತ್ರಿ 10 ವರ್ಷದ ದಿವ್ಯಾ ಶವವಾಗಿ ಪತ್ತೆಯಾಗಿರುವ ಬಾಲಕಿಯಾಗಿದ್ದಾಳೆ.
ನಿರ್ಮಾಣ ಹಂತದ ಕಟ್ಟಡದ ಸಂಪ್ ನಲ್ಲಿ ಪತ್ತೆಯಾದ ದಿವ್ಯಾ ಮೃತದೇಹBy : Rekha.M
Online Desk
ಮಂಡ್ಯ: ಟ್ಯೂಶನ್‍ಗೆ ಹೋದ ಬಾಲಕಿ ನೀರಿನ ಸಂಪ್‍ನಲ್ಲಿ ಅನುಮಾನಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ. ಮಳವಳ್ಳಿ ಪಟ್ಟಣದ ಎನ್‍ಇಎಸ್ ಬಡಾವಣೆಯ ಅಶ್ವಿನಿ ಮತ್ತು ಸುರೇಶ್ ಕುಮಾರ್ ದಂಪತಿಯ ಪುತ್ರಿ 10 ವರ್ಷದ ದಿವ್ಯಾ ಶವವಾಗಿ ಪತ್ತೆಯಾಗಿರುವ ಬಾಲಕಿಯಾಗಿದ್ದಾಳೆ.
ನಿನ್ನೆ ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ದಿವ್ಯಾ ಪಾಠ ಹೇಳಿಸಿಕೊಳ್ಳಲೆಂದು 45 ವರ್ಷದ ಟ್ಯೂಶನ್ ಶಿಕ್ಷಕ ಕಾಂತರಾಜು ಅವರ ಬಳಿ ಹೋಗಿದ್ದಳು. ಬೆಳಗ್ಗೆ ಮನೆಯಿಂದ ಟ್ಯೂಶನ್ ಗೆಂದು ಹೋದವಳು ಮಧ್ಯಾಹ್ನ, ಸಂಜೆಯಾದರೂ ಮನೆಗೆ ಬಾರದಿದ್ದಾಗ ಪೋಷಕರು ಆತಂಕಗೊಂಡು ಟ್ಯೂಶನ್ ಸೆಂಟರ್ ಮತ್ತು ಅಕ್ಕಪಕ್ಕದಲ್ಲಿ ವಿಚಾರಿಸಿದ್ದಾರೆ, ಆದರೆ ಎಲ್ಲಿಯೂ ಪತ್ತೆಯಾಗಲಿಲ್ಲ.
ಇದಾದ ನಂತರ ಸ್ಥಳೀಯರು ಬಾಲಕಿ ಹೊರಹೋಗಿರುವುದನ್ನು ಕಂಡು ನೀಡಿದ ಮಾಹಿತಿ ಮೇರೆಗೆ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗ ನಾಗರಾಜು ಎಂಬವರ ನಿರ್ಮಾಣ ಹಂತದ ಮನೆಯ ಕಟ್ಟಡದ ಸಮೀಪದಲ್ಲಿದ್ದ ನೀರಿನ ಸಂಪ್‍ನಲ್ಲಿ ಪರಿಶೀಲನೆ ನಡೆಸಿದಾಗ ಬಾಲಕಿಯ ಶವ ಪತ್ತೆಯಾಗಿದೆ.
ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಬಾಲಕಿ ಸಾವಿನ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ಡಿವೈಎಸ್‍ಪಿ ಎನ್.ನವೀನ್ ಕುಮಾರ್, ಸಿಪಿಐ ಎ.ಕೆ.ರಾಜೇಶ್ ಭೇಟಿ ನೀಡಿ ಶ್ವಾನದಾಳದೊಂದಿಗೆ ಪರಿಶೀಲನೆ ನಡೆಸಿದ್ದಾರೆ. ಟ್ಯೂಶನ್ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment