ಕೊಪ್ಪಳ: ಬೆತ್ತಲೆ ಪೂಜೆಯಿಂದ ಬಡತನ ನಿವಾರಣೆ; ಅಪ್ರಾಪ್ತ ಬಾಲಕನ ವಿಡಿಯೋ ಮಾಡಿ ವಿಕೃತಿ ಮೆರೆದ ಕಿಡಿಗೇಡಿಗಳು!

 ತಮ್ಮ ಖುಷಿಗಾಗಿ ಮುಗ್ಧ ಬಾಲಕನನ್ನು ಬೆತ್ತಲೆ ಪೂಜೆ ಮಾಡುವಂತೆ ಪುಸಲಾಯಿಸಿ, ನಂತರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವಿಕೃತಿ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

              ಸಂತ್ರಸ್ತ ಬಾಲಕ

By : Rekha.M
Online Desk

ಕೊಪ್ಪಳ: ತಮ್ಮ ಖುಷಿಗಾಗಿ ಮುಗ್ಧ ಬಾಲಕನನ್ನು ಬೆತ್ತಲೆ ಪೂಜೆ ಮಾಡುವಂತೆ ಪುಸಲಾಯಿಸಿ, ನಂತರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವಿಕೃತಿ ಮೆರೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಬೆತ್ತಲೆ ಪೂಜೆ ಮಾಡಿದರೆ ಬಡತನ ನಿವಾರಣೆ ಆಗುತ್ತದೆ, ತಂದೆಯ ಸಾಲ ತೀರುತ್ತದೆ ಮತ್ತು ಹಣ ಕೈಸೇರುತ್ತದೆ ಎಂದು ನಂಬಿಸಿ ಹುಡುಗ ಬೆತ್ತಲೆ ಸೇವೆ ಮಾಡುವಂತೆ ಮಾಡಿದ್ದಾರೆ. ನಂತರ ಅದರ ವಿರಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಯೂಟ್ಯೂಬ್‌ನಲ್ಲಿ ಹರಿ ಬಿಡಲಾಗಿದೆ. ಈ ಬಗ್ಗೆ ಬಾಲಕನ ಪೋಷಕರು ಕೊಪ್ಪಳದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇತ್ತೀಚೆಗಷ್ಟೆ 16 ವರ್ಷದ ಬಾಲಕನ ತಂದೆ ಕೊಪ್ಪಳದಲ್ಲಿ ಮನೆ ಕಟ್ಟಿಸಿದ್ದರು. ಮನೆ ಕಟ್ಟಿಸಲು ಸಾಲ ಮಾಡಿದ್ದರು. ಆ ಸಾಲವನ್ನು ತೀರಿಸುವ ಸಲುವಾಗಿ ಮಗ ಹುಬ್ಬಳ್ಳಿಗೆ ಬಂದು ಕೆಲಸ ಮಾಡುತ್ತಿದ್ದ. ದಿನಗೂಲಿ ನೌಕರನಾಗಿ ಸಾಧ್ಯವಾದಷ್ಟು ಸಂಪಾದಿಸಿ ಮನೆಯ ಸಾಲ ತೀರಿಸಲು ಶ್ರಮಿಸುತ್ತಿದ್ದ. ಬಾಲಕ ತನ್ನ ಕಷ್ಟವನ್ನು ಕೆಲವರ ಬಳಿ ಹೇಳಿಕೊಂಡಿದ್ದಾನೆ.

ಬೆತ್ತಲೆ ಪೂಜೆ ಮಾಡಿದ್ರೆ ಬಡತನ ನಿವಾರಣೆ ಆಗುತ್ತೆ ಅಂತ ಬಾಲಕನನ್ನು ಪುಸಲಾಯಿಸಿದ ಶರಣಪ್ಪ ಮತ್ತು ತಂಡ. ಬಳಿಕ ರೂಮ್ ನಲ್ಲಿ ಬಾಲಕ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿ ಪೂಜೆ ಮಾಡುವ ನಾಟಕ ಮಾಡಲಾಗಿದೆ. ಪೂಜೆಯ ವಿಡಿಯೋ ಮಾಡಿ ಫೇಸ್ ಬುಕ್, ವಾಟ್ಸ್ ಆಪ್, ಯೂಟ್ಯೂಬ್ ಗಳಲ್ಲಿ ವಿಡಿಯೋ ವೈರಲ್ ಮಾಡಿದ ಶರಣಪ್ಪ‌ ಮತ್ತು ತಂಡ.  ಶರಣಪ್ಪ, ಇರುಪನಗೌಡ, ಶರಣಪ್ಪ ತಳವರ್ ವಿರುದ್ಧ ಬಾಲಕನ ಕುಟುಂಬ ದೂರು ದಾಖಲಿಸಿದೆ.


Post a Comment

Previous Post Next Post