ಮಕ್ಕಳ ಕಳ್ಳರು ವದಂತಿಗೆ ಅಮಾಯಕ ಕಾರ್ಮಿಕ ಬಲಿ: ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ

 ಜಾರ್ಖಂಡ್‌ ಮೂಲದ 33 ವರ್ಷದ ಕಾರ್ಮಿಕನ ಸಾವಿನ ಹಿಂದೆ ರಾಮಮೂರ್ತಿನಗರ ಪೊಲೀಸರ ಕೈವಾಡವಿದೆ ಎಂದು  ಸಾಮಾಜಿಕ ಕಾರ್ಯಕರ್ತರೊಬ್ಬರು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದ್ದಾರೆ.

                  ಸಾಂದರ್ಭಿಕ ಚಿತ್ರ

By : Rekha.M
Online  Desk

ಬೆಂಗಳೂರು: ಜಾರ್ಖಂಡ್‌ ಮೂಲದ 33 ವರ್ಷದ ಕಾರ್ಮಿಕನ ಸಾವಿನ ಹಿಂದೆ ರಾಮಮೂರ್ತಿನಗರ ಪೊಲೀಸರ ಕೈವಾಡವಿದೆ ಎಂದು  ಸಾಮಾಜಿಕ ಕಾರ್ಯಕರ್ತರೊಬ್ಬರು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದ್ದಾರೆ.

ಮಕ್ಕಳ ಕಳ್ಳ ಎಂಬ ಶಂಕೆಯ ಮೇಲೆ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಥಳಿಸುತ್ತಿದ್ದಾಗ ಬಂದ ಪೊಲೀಸರು ಆತನನ್ನ ಕೆದೊಯ್ದಿದ್ದಾರೆ,  ಕೆಲವು ಗಂಟೆಗಳ ನಂತರ, ಆತನ ಶವ ಕೆಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.

ಪೊಲೀಸರು ಎತ್ತಿಕೊಂಡು ಹೋದ ಮೇಸ್ತ್ರಿ ಸಾವನ್ನಪ್ಪಿದ್ದರಿಂದ ಇದು ಕಸ್ಟಡಿ ಸಾವು ಎಂದು ಅರ್ಜಿಯಲ್ಲಿ  ಆರೋಪಸಲಾಗಿದೆ. ಆದರೆ, ಆರೋಪ ನಿರಾಧಾರ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮೇಸ್ತ್ರಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಆರು ಜನರನ್ನು ಬಂಧಿಸಲಾಗಿದೆ.

ಜಾರ್ಖಂಡ್ ಮೂಲದ ಸಂಜಯ್ ತುಡು ಎಂಬಾತ ರಾಮಮೂರ್ತಿ ನಗರದಲ್ಲಿ ಕೆಲಸ ಮಾಡುತ್ತಿದ್ದ. ರಾಮಮೂರ್ತಿನಗರ ಪೊಲೀಸ್ ವ್ಯಾಪ್ತಿಯ ದೂರವಾಣಿ ನಗರದ ಜ್ಯೋತಿ ಪುರಂನ 1ನೇ ಕ್ರಾಸ್‌ನಲ್ಲಿ ಸೆಪ್ಟೆಂಬರ್ 23 ರಂದು ಗುಂಪೊಂದು ಆತನನ್ನು ಥಳಿಸಿತ್ತು.

ಮರುದಿನ ಕೆಆರ್ ಪುರಂ ಪೊಲೀಸ್ ವ್ಯಾಪ್ತಿಯ ಐಟಿಐ ಕಾಲೋನಿಯಲ್ಲಿ ಫುಟ್ ಪಾತ್ ಮೇಲೆ ಶವವಾಗಿ ಪತ್ತೆಯಾಗಿದ್ದ.. ಹೆಚ್ಚಿನ ತನಿಖೆ ಮತ್ತು ಮರಣೋತ್ತರ ಪರೀಕ್ಷೆಯ ಫಲಿತಾಂಶಗಳು ಪೊಲೀಸರು ಪ್ರಕರಣವನ್ನು ಅಸಹಜ ಸಾವು ಎಂದು ಪೊಲೀಸರು ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸಂತ್ರಸ್ತನನ್ನು ಹೊಯ್ಸಳ ಗಸ್ತು ವಾಹನದಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಾಮಾಜಿಕ ಹೋರಾಟಗಾರ ವಿ.ಪರಮೇಶ್ ಹೇಳಿದ್ದಾರೆ.

ಆತನ ಮೇಲೆ ಹಲ್ಲೆ ನಡೆದಿದ್ದರೂ ಹೊಯ್ಸಳ ವಾಹನದಲ್ಲಿ ಕುಳಿತುಕೊಂಡು ಹೋಗಲು ಸಾಧ್ಯವಾಯಿತು, ಆತ ಚೆನ್ನಾಗಿಯೇ ಇದ್ದ, ಆದರೆ ಕೆಲವೇ ಗಂಟೆಗಳಲ್ಲಿ ಆತನ ದೇಹ ನೆರೆಯ ಪೊಲೀಸ್ ಠಾಣೆ ಬಳಿ ಪತ್ತೆಯಾಗಿದೆ. ಇದು ಕೊಲೆಯಲ್ಲದೇ ಬೇರೇನೂ ಅಲ್ಲ, ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಸಾಕ್ಷ್ಯವನ್ನು ತಿರುಚಿದ್ದಾರೆ, ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.

ಪೊಲೀಸರ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸುವ್ಯವಸ್ಥೆ (ಪೂರ್ವ) ಹೆಚ್ಚುವರಿ ಪೊಲೀಸ್ ಕಮಿಷನರ್ ಡಾ ಎ ಸುಬ್ರಹ್ಮಣ್ಯೇಶ್ವರ ರಾವ್, ಹಲ್ಲೆ ನಡೆದ ಸ್ಥಳ ಮತ್ತು ಶವ ಪತ್ತೆಯಾದ ಸ್ಥಳವು 1.5 ಕಿಮೀ ವ್ಯಾಪ್ತಿಯಲ್ಲಿದೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ವ್ಯಕ್ತಿಯನ್ನು ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಕರೆದೊಯ್ದ ನಂತರ, ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅವರೊಂದಿಗೆ ಐದರಿಂದ 10 ನಿಮಿಷಗಳ ಕಾಲ ಮಾತನಾಡಿದರು. ಆದರೆ ವ್ಯಕ್ತಿ ಪೊಲೀಸ್ ಠಾಣೆ ಒಳಗೆ ಮತ್ತು ಹೊರಗೆ ನಡೆಯುತ್ತಲೇ ಇದ್ದ. ನಂತರ ಸ್ವಯಂಪ್ರೇರಿತವಾಗಿ  ಠಾಣೆಯಿಂದ ಹೊರ ನಡೆದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಪ್ರಕರಣ ಸಂಬಂಧ ಆರು ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪರಮೇಶ್‌ ಆರೋಪಗಳನ್ನು ಪೊಲೀಸರು ನಿರಾಕರಿಸಿದ್ದಾರೆ. ಈ ಕುರಿತು ಸ್ಪಷ್ಟೀಕರಣ ನೀಡಿರುವ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್‌, ‘‘ ಜನರಿಂದ ಹಲ್ಲೆಗೊಳಗಾಗಿದ್ದ ಕಾರ್ಮಿಕ ಸಂಜಯ್‌ನನ್ನು ಠಾಣೆಗೆ ಕರೆತಂದ ನಾಲ್ಕೇ ನಿಮಿಷಗಳಲ್ಲಿ ಬಿಟ್ಟು ಕಳುಹಿಸಲಾಗಿದೆ. ಈ ಕುರಿತು ಸಿಸಿಟಿವಿ ದೃಶ್ಯಾವಳಿಗಳಿವೆ. ಘಟನೆ ಬಗ್ಗೆ ಸಂಜಯ್‌ ದೂರು ನೀಡಲು ನಿರಾಕರಿಸಿದ್ದರು. ಅವರು ಸಾವನ್ನಪ್ಪಿದ್ದ ವಿಚಾರ ಕೂಡ ಕೆಲ ದಿನಗಳ ಹಿಂದಷ್ಟೇ ಗೊತ್ತಾಗಿದೆ’’ ಎಂದಿದ್ದಾರೆ


Post a Comment

Previous Post Next Post