ಪುರುಷರಂತೆ ಮಹಿಳಾ ಕ್ರಿಕೆಟಿಗರಿಗೂ ಸಮಾನ ವೇತನ: ಕಾರ್ಯದರ್ಶಿ ಜಯ್ ಶಾ

 

ಮುಂಬೈ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗುರುವಾರ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ ಘೋಷಿಸಿ ದ್ದಾರೆ.

ನಮ್ಮ ಒಪ್ಪಂದದ ಮಹಿಳಾ ಕ್ರಿಕೆಟಿಗರಿಗೆ ವೇತನ ಇಕ್ವಿಟಿ ನೀತಿಯನ್ನು ಜಾರಿಗೆ ತರು ತ್ತಿದ್ದೇವೆ. ಕ್ರಿಕೆಟ್‌ನಲ್ಲಿ ಲಿಂಗ ಸಮಾನತೆಯ ಹೊಸ ಯುಗಕ್ಕೆ ಸಾಗುತ್ತಿರುವಾಗ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಒಂದೇ ಆಗಿರುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಸಮಾನ ವೇತನ ನಿಯಮದಂತೆ, ಇನ್ನು ಮುಂದೆ ಮಹಿಳಾ ಕ್ರಿಕೆಟ್ ಸದಸ್ಯರು ಪ್ರತಿ ಟೆಸ್ಟ್ ಪಂದ್ಯಕ್ಕೆ ೧೫ ಲಕ್ಷ ರೂ., ಪ್ರತಿ ಏಕದಿನ ಪಂದ್ಯಕ್ಕೆ ಆರು ಲಕ್ಷ ರೂ. ಹಾಗೂ ಪ್ರತಿ ಟಿ೨೦ ಪಂದ್ಯಕ್ಕೆ ಮೂರು ಲಕ್ಷ ವೇತನ ಪಡೆಯಲಿದ್ದಾರೆ. ಈ ಮೂಲಕ ಸಮಾನ ವೇತನ ವಿಚಾರದಲ್ಲಿ ಕ್ರಿಕೆಟ್ ಆಸ್ಟ್ರೇಇಲಯಾ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ಬಳಿಕ ಬಿಸಿಸಿಐ ಮೂರನೇ ಕ್ರಿಕೆಟ್ ಮಂಡಳಿ ಎಂಬ ಮನ್ನಣೆ ಪಡೆದಂತಾಯಿತು.

Post a Comment

Previous Post Next Post