ದೂರವಾಣಿ ಕರೆ ವೇಳೆ 'ಹಲೋ' ಎಂದು ಹೇಳುವ ಬದಲು 'ವಂದೇ ಮಾತರಂ' ಹೇಳುವಂತೆ ಮಹಾರಾಷ್ಟ್ರ ಸರ್ಕಾರ ತನ್ನ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಸಾಂದರ್ಭಿಕ ಚಿತ್ರಮುಂಬೈ: ದೂರವಾಣಿ ಕರೆ ವೇಳೆ 'ಹಲೋ' ಎಂದು ಹೇಳುವ ಬದಲು 'ವಂದೇ ಮಾತರಂ' ಹೇಳುವಂತೆ ಮಹಾರಾಷ್ಟ್ರ ಸರ್ಕಾರ ತನ್ನ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಶನಿವಾರ ಸರ್ಕಾರದ ಈ ಹೊಸ ನಿರ್ಣಯವನ್ನು ಹೊರಡಿಸಿದ್ದು, ಎಲ್ಲಾ ಸರ್ಕಾರಿ ನೌಕರರು ದೂರವಾಣಿ ಅಥವಾ ಮೊಬೈಲ್ ಫೋನ್ ಕರೆಗಳನ್ನು ಸ್ವೀಕರಿಸುವಾಗ 'ಹಲೋ' ಬದಲಿಗೆ 'ವಂದೇ ಮಾತರಂ' ಎಂದು ಹೇಳುವುದನ್ನು ಕಡ್ಡಾಯಗೊಳಿಸಿದೆ. 'ಹಲೋ' ಎಂಬ ಪದವು ಅನುಕರಣೆಯಾಗಿದೆ. ಈ ಪಾಶ್ಚಾತ್ಯ ಸಂಸ್ಕೃತಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಈ 'ವಂದೇಮಾತರಂ' ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದೆ.
ಸರ್ಕಾರಿ ಆದೇಶದ ಪ್ರಕಾರ ಸರ್ಕಾರ ಅಥವಾ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರು ನಾಗರಿಕರು ಅಥವಾ ಸರ್ಕಾರಿ ಅಧಿಕಾರಿಗಳಿಂದ ದೂರವಾಣಿ ಅಥವಾ ಮೊಬೈಲ್ ಫೋನ್ ಕರೆಗಳನ್ನು ಸ್ವೀಕರಿಸುವಾಗ 'ಹಲೋ' ಬದಲಿಗೆ 'ವಂದೇ ಮಾತರಂ' ಅನ್ನು ಬಳಸಬೇಕು. ಅಧಿಕಾರಿಗಳು ಕೂಡ ತಮ್ಮನ್ನು ಭೇಟಿಯಾಗುವ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಾಮಾನ್ಯ ಆಡಳಿತ ಇಲಾಖೆ ನೀಡಿರುವ ಜಿಆರ್‌ಒ ತಿಳಿಸಿದೆ.
"ಹಲೋ" ಎಂಬ ಪದವು ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಾಗಿದೆ ಮತ್ತು ಇದು ಯಾವುದೇ ನಿರ್ದಿಷ್ಟ ಅರ್ಥವಿಲ್ಲದ ಶುಭಾಶಯ ಮತ್ತು ಯಾವುದೇ ಪ್ರೀತಿಯನ್ನು ಉಂಟುಮಾಡುವ ಪದವಾಗಿರುವುದಿಲ್ಲ. ಹೀಗಾಗಿ 'ಹಲೋ' ಎಂಬ ಪದದ ಬದಲಿಗೆ 'ವಂದೇ ಮಾತರಂ' ಪದ ಬಳಕೆ ಮಾಡಬೇಕು" ಎಂದು ಜಿಆರ್ ಹೇಳಿದರು.
ಮುಸ್ಲಿಂ ನಾಯಕರ ವಿರೋಧ
ಇನ್ನು ಸರ್ಕಾರದ ನಿರ್ಧಾರದ ವಿರುದ್ಧ ವಾಗ್ದಾಳಿ ನಡೆಸಿರುದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಶಾಸಕ ವಾರಿಸ್ ಪಠಾಣ್, ನಿಜವಾದ ಸಮಸ್ಯೆಗಳಿಂದ ಸಾರ್ವಜನಿಕರನ್ನು ಬೇರೆಡೆಗೆ ಸೆಳೆಯಲು ಶಿಂಧೆ ಸರ್ಕಾರ ಹೊಸ ನಾಟಕವನ್ನು ರಚಿಸುತ್ತಿದೆ. ನಾವು ವಂದೇ ಮಾತರಂ ಹೇಳದಿದ್ದರೆ ನೀವೇನು ಮಾಡುತ್ತೀರಿ? ವಂದೇ ಮಾತರಂ ಹೇಳುವುದರಿಂದ ಜನರಿಗೆ ಉದ್ಯೋಗ ಸಿಗುತ್ತದೆಯೇ? ರೈತರ ಸಾಲ ಮನ್ನಾ ಆಗುತ್ತದೆಯೇ? ಹಣದುಬ್ಬರ ಕಡಿಮೆಯಾಗುತ್ತದೆಯೇ?" ಎಂದು ವಾರಿಸ್ ಪಠಾಣ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
Post a Comment