ಆದಿಪುರುಷ ನಿಷೇಧಿಸಬೇಕೆಂದು ರಾಮಮಂದಿರದ ಪ್ರಧಾನ ಅರ್ಚಕ ಒತ್ತಾಯ

 

ವದೆಹಲಿ: ಭಗವಾನ್ ರಾಮ, ಹನುಮಾನ್ ಮತ್ತು ರಾವಣನನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಮೇಲೆ ಬಾಲಿವುಡ್ ಚಲನಚಿತ್ರ ಆದಿಪುರುಷ ಅನ್ನು ತಕ್ಷಣವೇ ನಿಷೇಧಿಸಬೇಕೆಂದು ಅಯೋಧ್ಯೆಯ ರಾಮ ಮಂದಿರದ ಪ್ರಧಾನ ಅರ್ಚಕ ಒತ್ತಾಯಿಸಿದ್ದಾರೆ.

ಶ್ರೀರಾಮ, ಹನುಮಾನ್ ಮತ್ತು ರಾವಣನ ಚಿತ್ರಣವು ಮಹಾಕಾವ್ಯಕ್ಕೆ ಹೊಂದಿಕೆ ಯಾಗುವುದಿಲ್ಲ. ಸಿನಿಮಾದಲ್ಲಿನ ಅವರ ಚಿತ್ರಣವು ಅವರ ಘನತೆಗೆ ತಕ್ಕಂತೆ ಇಲ್ಲ ಎಂದು ಆರೋಪಿಸಿದ್ದಾರೆ. ಸಿನಿಮಾ ಮಾಡುವುದು ಅಪರಾಧವಲ್ಲ.

ಆದರೆ, ಉದ್ದೇಶ ಪೂರ್ವಕ ವಿವಾದಗಳನ್ನು ಹುಟ್ಟುಹಾಕಲು ಉದ್ದೇಶಪೂರ್ವಕವಾಗಿ ವಿವಾದಗಳನ್ನು ಸೃಷ್ಟಿಸ ಬಾರದು ಎಂದು ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಹೇಳಿದ್ದಾರೆ.

ಬಾಲಿವುಡ್ ಚಲನಚಿತ್ರ ಆದಿಪುರುಷದ 1.46 ನಿಮಿಷಗಳ ಟೀಸರ್ ಭಾನುವಾರ ಅಯೋಧ್ಯೆಯಲ್ಲಿ ಬಿಡುಗಡೆಯಾಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಟೀಸರ್ ಅನ್ನು ಖಂಡಿಸಿ ದ್ದಾರೆ.

Post a Comment

Previous Post Next Post