ಬೆಂಗಳೂರು ಸೇರಿದಂತೆ ೧೬ ರೈಲುನಿಲ್ದಾಣಗಳ ನವೀಕರಣ


ಬೆಂಗಳೂರು ನಗರ ರೈಲು ನಿಲ್ದಾಣ ಸೇರಿ ದೇಶದ ೧೬ ರೈಲು ನಿಲ್ದಾಣಗಳನ್ನು ೧೦ ಸಾವಿರ ಕೋಟಿ ರೂ. ಗೂ ಅಧಿಕ ಮೊತ್ತದಲ್ಲಿ ನವೀಕರಣ ಮಾಡಲು ಭಾರತೀಯ ರೈಲ್ವೆ ಮುಂದಾಗಿದೆ. ೧೬ ರೈಲ್ವೆ ನಿಲ್ದಾಣಗಳ ಪೈಕಿ ದೆಹಲಿಯ ಮೂರು ರೈಲು ನಿಲ್ದಾಣಗಳಾದ ಆನಂದ್ ವಿಹಾರ್, ನಿಜಾಮುದ್ದೀನ್, ಹಳೆ ದೆಹಲಿ ಸೇರಿವೆ. ಉಳಿದಂತೆ ವಿಜಯವಾಡ, ದಾದರ್ ಮತ್ತು ಕಲ್ಯಾಣ್ ಸೇರಿದಂತೆ, ೧೬ ನಿಲ್ದಾಣಗಳನ್ನು ನವೀಕರಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಯೋಜನೆಯಡಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.

ಉಳಿದಂತೆ ಪುಣೆ, ಕೊಯಮತ್ತೂರು, ಬರೋಡಾ, ಭೋಪಾಲ್ ಮತ್ತು ಚೆನ್ನೈ ಸೆಂಟ್ರಲ್ ಸಹ ಈ ಹಂತದಲ್ಲಿ ಪುನರುಜ್ಜೀವನಗೊಳಿಸಲು ಗುರುತಿಸಲಾಗಿದೆ. ಇವುಗಳಲ್ಲಿ ಹಲವಾರು ನಿಲ್ದಾಣಗಳು ಪುನರಾಭಿವೃದ್ಧಿ ಯೋಜನೆಯಲ್ಲಿವೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.ಯೋಜನೆ ಯ ಕಾರ್ಯಸಾಧ್ಯ ಮತ್ತು ವೆಚ್ಚ, ಟೆಂಡರ್ ದಾಖಲೆಗಳ ವಿವರಗಳನ್ನು ರೂಪಿಸಲಾಗುತ್ತಿದೆ ಮತ್ತು ವಿವಿಧ ಹಣಗಳಿಕೆಯ ಮಾದರಿಗಳು ಪರಿಗಣನೆಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
೨೦೦ ರೈಲು ನಿಲ್ದಾಣಗಳ ನವೀಕರಣ:
ದೇಶದಲ್ಲಿ ೨೦೦ ರೈಲು ನಿಲ್ದಾಣಗಳನ್ನು ನವೀಕರಣ ಮಾಡಲು ಉದ್ದೇಶಿಸಿದ್ದು ಮೊದಲ ಹಂತದಲ್ಲಿ ೧೦ ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ರೈಲ್ವೆ ಸಚಿವಾಲಯ ’ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ’ ಮಾರ್ಗ ಎರಡಕ್ಕೂ ಹೋಗುತ್ತಿದೆ, ಅಲ್ಲಿ ಸರ್ಕಾರವು ಸಂಪೂರ್ಣ ಯೋಜನಾ ವೆಚ್ಚ ಮತ್ತು ಯೋಜನೆಗಳ ಕಾರ್ಯಸಾಧ್ಯತೆಯನ್ನು ಪರಿಗಣಿಸಿ ೨೦೦ ನಿಲ್ದಾಣಗಳ ಪುನರಾಭಿವೃದ್ಧಿಗೆ ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಕಳೆದ ವಾರ, ಕೇಂದ್ರ ಸಚಿವ ಸಂಪುಟವು ಪಿಪಿಪಿಗೆ ಹೋಗುವ ಬದಲು ಇಪಿಸಿ ಮೋಡ್‌ನಲ್ಲಿ ನವದೆಹಲಿ, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಮುಂಬೈ ಮತ್ತು ಅಹಮದಾಬಾದ್ ನಿಲ್ದಾಣಗಳ ಪುನರಾಭಿವೃದ್ಧಿಗೆ ಅನುಮೋದನೆ ನೀಡಿದೆ.
 

Post a Comment

Previous Post Next Post