ಕೃಷಿ ಕ್ಷೇತ್ರದ ಡಿಜಿಟಲೀಕರಣದಲ್ಲಿ ಕರ್ನಾಟಕ ಪ್ರಮುಖ ಮೈಲಿಗಲ್ಲನ್ನು ತಲುಪಿದೆ. ರಾಜ್ಯದಲ್ಲಿ 78 ಲಕ್ಷ ರೈತರ ಭೂ ಸಮೀಕ್ಷೆ ವಿವರಗಳನ್ನು ಅವರ ಆಧಾರ್ ಸಂಖ್ಯೆಗೆ ಜೋಡಿಸಲಾಗಿದೆ. ಈ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ರಾಜ್ಯ ಕರ್ನಾಟಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆಧಾರ್ ಕಾರ್ಡ್
By : Rekha.M
ಬೆಂಗಳೂರು: ಕೃಷಿ ಕ್ಷೇತ್ರದ ಡಿಜಿಟಲೀಕರಣದಲ್ಲಿ ಕರ್ನಾಟಕ ಪ್ರಮುಖ ಮೈಲಿಗಲ್ಲನ್ನು ತಲುಪಿದೆ. ರಾಜ್ಯದಲ್ಲಿ 78 ಲಕ್ಷ ರೈತರ ಭೂಮಿ ಸಮೀಕ್ಷೆ ವಿವರಗಳನ್ನು ಅವರ ಆಧಾರ್ ಸಂಖ್ಯೆಗೆ ಜೋಡಿಸಲಾಗಿದೆ. ಈ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ರಾಜ್ಯ ಕರ್ನಾಟಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕರ್ನಾಟಕ ಸರ್ಕಾರ ಅಭಿವೃದ್ಧಿಪಡಿಸಿದ ಭೂಮಿ ಸಾಫ್ಟ್‌ವೇರ್ ಮೂಲಕ ಸುಮಾರು 63 ಲಕ್ಷ ರೈತರು ಮತ್ತು 16 ಲಕ್ಷ ಭೂರಹಿತ ರೈತರ ವಿವರಗಳನ್ನು ಅಪ್‌ಲೋಡ್ ಮಾಡಲಾಗಿದೆ. ರೈತರು ಭೂ ಸಮೀಕ್ಷೆಯಲ್ಲಿ ಆಸಕ್ತಿ ವಹಿಸುತ್ತಿದ್ದು, ಕರ್ನಾಟಕದಲ್ಲಿ ಇದುವರೆಗೆ 212 ಕೋಟಿ ನಿವೇಶನಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ತಿಳಿಸಿದರು.
ನೈಸರ್ಗಿಕ ಮತ್ತು ಡಿಜಿಟಲ್ ಕೃಷಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ ಸಿಎಂ, ವಿವರವಾದ ಅಧ್ಯಯನದ ನಂತರ ರೈತರಿಗೆ ಪರಿಚಯಿಸಲಾದ ಮೊದಲ ನ್ಯಾನೋ ಯೂರಿಯಾ ಘಟಕ ಬೆಂಗಳೂರಿನಲ್ಲಿ ತೆರೆಯಲಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ಮೂರು ರಾಜ್ಯಗಳು ನೈಸರ್ಗಿಕ ಕೃಷಿಯನ್ನು ಕೈಗೆತ್ತಿಕೊಂಡಿವೆ.
ಕರ್ನಾಟಕವು ಈಗ ಐದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳನ್ನು ಹೊಂದಿದೆ ಮತ್ತು ವಿಶ್ವವಿದ್ಯಾನಿಲಯಗಳ ಮಾರ್ಗದರ್ಶನದಲ್ಲಿ 1,000 ಎಕರೆ ಭೂಮಿಯಲ್ಲಿ ನೈಸರ್ಗಿಕ ಕೃಷಿ ನಡೆಯುತ್ತಿದೆ. ಸಾವಯವ ಕೃಷಿಯಿಂದ 2.4 ಲಕ್ಷ ಹೆಕ್ಟೇರ್ ಭೂಮಿಯನ್ನು ನೈಸರ್ಗಿಕ ಕೃಷಿಯಾಗಿ ಪರಿವರ್ತಿಸಲಾಗುತ್ತಿದೆ ಮತ್ತು 2023ರ ಮಾರ್ಚ್ ವೇಳೆಗೆ ಹೆಚ್ಚುವರಿಯಾಗಿ ಒಂದು ಲಕ್ಷ ಹೆಕ್ಟೇರ್ ಅನ್ನು ನೈಸರ್ಗಿಕ ಕೃಷಿಭೂಮಿಯನ್ನಾಗಿ ಪರಿವರ್ತಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ನೈಸರ್ಗಿಕ ಕೃಷಿ ಮಾಡಲು 41,434 ರೈತರನ್ನು ಆಯ್ಕೆ ಮಾಡಲಾಗಿದೆ. ಈ ರೈತರು ಕಾರ್ಯಾಗಾರಗಳಿಗೆ ಹಾಜರಾಗುವುದರ ಜೊತೆಗೆ 200 ಕ್ಷೇತ್ರ ಭೇಟಿಗಳನ್ನು ಮಾಡುತ್ತಾರೆ ಎಂದರು.
Post a Comment