ನವದೆಹಲಿ: ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ತಕ್ಷಣವೇ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 25.50 ರೂ. ರಷ್ಟು ಕಡಿಮೆ ಮಾಡಿದೆ.
ಇತ್ತೀಚಿನ ಪರಿಷ್ಕರಣೆಯೊಂದಿಗೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದಿಲ್ಲಿ ಯಲ್ಲಿ 1,885 ರೂ.ರ ಬದಲಿಗೆ 1,859.50 ರೂ. ಆಗಲಿದೆ. ಕೋಲ್ಕತ್ತಾದಲ್ಲಿ 1,959 ರೂ. ಹಾಗೂ ಮುಂಬೈನಲ್ಲಿ 1811.50 ರೂ.ಕ್ಕೆ ಇಳಿಕೆಯಾಗಿದೆ.
ಸೆಪ್ಟೆಂಬರ್ 1 ರಂದು 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಪ್ರತಿ ಯೂನಿಟ್ ಬೆಲೆಯನ್ನು 91.50 ರೂ ಕಡಿಮೆ ಮಾಡಲಾಗಿತ್ತು. ಆಗಸ್ಟ್ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 36 ರೂ.ರಷ್ಟು ಕಡಿಮೆ ಮಾಡಲಾಗಿತ್ತು.
ಆದಾಗ್ಯೂ, ದೇಶೀಯ ಸಿಲಿಂಡರ್‌ಗಳ ಬೆಲೆಗಳು ಸ್ಥಿರ ವಾಗಿದೆ. ಜುಲೈ 6 ರಂದು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ 50 ರೂ. ಹೆಚ್ಚಿಸಲಾ ಗಿತ್ತು. ಈ ಹಿಂದೆ, ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಮೇ 19, 2022 ರಂದು ಪರಿಷ್ಕರಿಸಲಾಗಿತ್ತು.
Post a Comment