ಬ್ರಿಟಿಷರು ನಮ್ಮನ್ನು 200 ವರ್ಷ ಆಳಿದರು, ಈಗ ಕಾಲಚಕ್ರ ತಿರುಗಿದೆ, ಬ್ರಿಟನ್ ಗೆ ಭಾರತೀಯ ಮೂಲದವರು ಪ್ರಧಾನಿಯಾಗಿದ್ದಾರೆ: ಸಿಎಂ ಬೊಮ್ಮಾಯಿ

 ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆ ಆಗಿದ್ದಕ್ಕೆ ಪ್ರಧಾನಿ ಮೋದಿ ಆದಿಯಾಗಿ ರಾಜಕೀಯ ಗಣ್ಯರು ಸಂತಸ ಹಾಗೂ ಶುಭಾಶಯ ಸಂದೇಶ ಕಳಿಸುತ್ತಿದ್ದಾರೆ.

                  ಸಿಎಂ ಬೊಮ್ಮಾಯಿ

By : Rekha.M
Online Desk

ಹಾವೇರಿ: ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್‌ ಪ್ರಧಾನಿಯಾಗಿ ಆಯ್ಕೆ ಆಗಿದ್ದಕ್ಕೆ ಪ್ರಧಾನಿ ಮೋದಿ ಆದಿಯಾಗಿ ರಾಜಕೀಯ ಗಣ್ಯರು ಸಂತಸ ಹಾಗೂ ಶುಭಾಶಯ ಸಂದೇಶ ಕಳಿಸುತ್ತಿದ್ದಾರೆ.

ಬ್ರಿಟನ್ ನೂತನ ಪ್ರಧಾನಿಯ ಆಯ್ಕೆಯ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಬ್ರಿಟಿಷರು ನಮ್ಮನ್ನು 200 ವರ್ಷಗಳ ಕಾಲ ಆಳಿದರು. ಒಬ್ಬ ಭಾರತೀಯ ಪ್ರಧಾನಿ ಆಗುತ್ತಾನೆ ಅನ್ನೋದನ್ನು ಅವರು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಈಗ ಚಕ್ರ ತಿರುಗಿದೆ ಎಂದು ಅಭಿನಂದನೆ  ಸಲ್ಲಿಸಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿದ ಸಿಎಂ, ಭಾರತೀಯರು ಎಲ್ಲ ರಂಗದಲ್ಲೂ ಮುಂದಿದ್ದಾರೆ. ಭಾರತೀಯ ಮೂಲದ ಬಹಳ ಮಂದಿ ವಿದೇಶಗಳಲ್ಲಿ ಸಂಸದರಾಗಿದ್ದಾರೆ. ಈಗ ಭಾರತದ ನಂಟಿರುವ ವ್ಯಕ್ತಿ ಬ್ರಿಟನ್ ಪ್ರಧಾನಿ ಆಗಿರುವುದು ವಿಶೇಷ ಎಂದು ಸಂತಸ ಹಂಚಿಕೊಂಡರು.

ಇನ್ನು ರಾಜ್ಯದ ಯೋಜನೆಗಳ ಬಗ್ಗೆ ಮಾತನಾಡಿರುವ ಸಿಎಂ, ರಾಜ್ಯದಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿ ಮಾಡುತ್ತಿದ್ದೇವೆ. ಪ್ರತಿ ಗ್ರಾಮದಲ್ಲಿ 2 ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 5 ಲಕ್ಷ ರೂಪಾಯಿ ಸಾಲ ಮತ್ತು ಅನುದಾನ ಕೊಡುತ್ತಿದ್ದೇವೆ. 5 ಲಕ್ಷ ಮಹಿಳೆಯರಿಗೆ ಉದ್ಯೋಗ ಕೊಡುವ ಕಾರ್ಯಕ್ರಮ ಮಾಡುತ್ತಿದ್ದೇವೆ. ಯುವಕರಿಗಾಗಿ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಜಾರಿಗೆ ಮಾಡುತ್ತಿದ್ದೇವೆ. ಪ್ರತಿ ಗ್ರಾಮದಲ್ಲಿ 2 ಯುವಶಕ್ತಿ ಸಂಘಗಳಿಗೆ ತಲಾ 5 ಲಕ್ಷ ರೂಪಾಯಿ ಅನುದಾನ ಕೊಡುತ್ತಿದ್ದೇವೆ. 5 ಲಕ್ಷ ಯುವಕರಿಗೆ ಕೆಲಸ ಕೊಡುವ ಯೋಜನೆ ಇದಾಗಿದೆ ಎಂದು ತಿಳಿಸಿದ್ದಾರೆ. 


Post a Comment

Previous Post Next Post