165 ಕೋಟಿ ರೂ. ಭಿಕ್ಷುಕರ ಸೆಸ್ ಬಾಕಿ ಪಾವತಿ: 25 ಕೋಟಿ ಬಾಕಿ ಪಾವತಿ ಮಾಡುವುದಾಗಿ ಬಿಬಿಎಂಪಿ ಭರವಸೆ

 ನಗರದ ಮಾಗಡಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರವು ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಮತ್ತು ಬಿಬಿಎಂಪಿಯಲ್ಲಿ 165 ಕೋಟಿ ರೂಪಾಯಿ ಬಾಕಿ ಉಳಿದಿದೆ ಎಂದು ಆರೋಪಿಸಿದ್ದು, ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅರ್ಚನಾ ವೈ.ಬಿ, ಪರಿಹಾರ ಕೇಂದ್ರವು ಏಪ್ರಿಲ್ 2022 ರಿಂದ ಜ್ಞಾಪನೆಗ

               ಸಾಂದರ್ಭಿಕ ಚಿತ್ರ

By : Rekha.M
Online Desk

ಬೆಂಗಳೂರು: ನಗರದ ಮಾಗಡಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರವು ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಮತ್ತು ಬಿಬಿಎಂಪಿಯಲ್ಲಿ 165 ಕೋಟಿ ರೂಪಾಯಿ ಬಾಕಿ ಉಳಿದಿದೆ ಎಂದು ಆರೋಪಿಸಿದ್ದು, ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅರ್ಚನಾ ವೈ.ಬಿ, ಪರಿಹಾರ ಕೇಂದ್ರವು ಏಪ್ರಿಲ್ 2022 ರಿಂದ ಜ್ಞಾಪನೆಗಳನ್ನು ಕಳುಹಿಸುತ್ತಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, ಮಾಗಡಿ ರಸ್ತೆಯ ಕೇಂದ್ರವು ರಾಜ್ಯದ 14 ಕೇಂದ್ರಗಳಲ್ಲಿ ಅತಿ ಹೆಚ್ಚು ಭಿಕ್ಷುಕರ ಜನಸಂಖ್ಯೆಯನ್ನು ಹೊಂದಿದೆ. ಬಿಬಿಎಂಪಿಯಲ್ಲಿ ಬಾಕಿ ಇರುವ ಸೆಸ್ ಮೊತ್ತ ದೊಡ್ಡದಾಗಿದೆ. ಕೇಂದ್ರದ ಬಂಧನ ಅವಧಿಯು ಒಂದರಿಂದ ಮೂರು ವರ್ಷಗಳವರೆಗೆ ಇರುತ್ತದೆ. ಒಂದು ವೇಳೆ, ಸಂಬಂಧಿಕರನ್ನು ಟ್ರ್ಯಾಕ್ ಮಾಡಿದರೆ, ಯಾರಾದರೂ ಭಿಕ್ಷುಕರನ್ನು ಕರೆದೊಯ್ಯಲು ಬಂದರೆ, ಅವರನ್ನು ಕಾನೂನು ಪ್ರಕ್ರಿಯೆಗಳ ನಂತರ ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ. 

ನಿಲಯಗಳು, ಅಡುಗೆ ಕೋಣೆಗಳನ್ನು ಹೊಂದಿರುವ ಕೇಂದ್ರವು ಕೌಶಲ್ಯ ತರಬೇತಿಯನ್ನು ನಡೆಸುತ್ತದೆ, ಅವರು ಜೀವನೋಪಾಯವನ್ನು ಕಲಿಯುವವರೆಗೆ ಆಹಾರ ಮತ್ತು ಔಷಧಿಗಳನ್ನು ಒದಗಿಸುತ್ತದೆ. 858 ಭಿಕ್ಷುಕರನ್ನು ಹೊಂದಿರುವ ಕೇಂದ್ರವನ್ನು ನಡೆಸಲು ಮತ್ತು ಸಂಬಳವನ್ನು ಪಾವತಿಸಲು, ಆಡಳಿತವು ಸೆಸ್ ಮೊತ್ತವನ್ನು ಅವಲಂಬಿಸಿದೆ ಎಂದು ಅರ್ಚನಾ ಹೇಳಿದರು.

ಬಿಬಿಎಂಪಿ ವಾರ್ಷಿಕವಾಗಿ ಶೇಕಡಾ 20 ಕೋಟಿಯಷ್ಟು ಭಿಕ್ಷುಕರ ಸೆಸ್ ನ್ನು ಸಂಗ್ರಹಿಸುತ್ತದೆ, ಇದರಲ್ಲಿ ಶೇಕಡಾ 10 ರಷ್ಟು ಸೇವಾ ಶುಲ್ಕವನ್ನು ಕಡಿತಗೊಳಿಸಿ ಕೇಂದ್ರಕ್ಕೆ ನೀಡಲಾಗುವುದು. ಆದರೆ ಪಾಲಿಕೆಯವರು ಅತ್ಯಲ್ಪ ಮೊತ್ತವನ್ನು ಮಾತ್ರ ನೀಡುತ್ತಾರೆ ಎಂದು ಸಮಸ್ಯೆಯನ್ನು ಹೇಳಿಕೊಂಡರು. 

ಈ ಬಗ್ಗೆ ಕೇಳಿದಾಗ, ಪಾಲಿಕೆಯು 25 ಕೋಟಿ ರೂಪಾಯಿ ಬಾಕಿ ಪಾವತಿಸಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. “ಕಳೆದ ಐದು ವರ್ಷಗಳ ಸೆಸ್ ಮೊತ್ತವನ್ನು ಬಿಡುಗಡೆ ಮಾಡಲಾಗುವುದು. ಈವರೆಗೆ `200 ಕೋಟಿ ಮಂಜೂರಾಗಿದೆ ಎಂದರು.


Post a Comment

Previous Post Next Post