By : Ashwini Rathod
Online disk
ಮಂಗಳೂರು, ಸೆಪ್ಟೆಂಬರ್ 29: ದಕ್ಷಿಣ ಭಾರತದ ಹೆಸರಾಂತ ತೀರ್ಥ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕೊಯಮತ್ತೂರಿನಿಂದ ಬಸ್ ವ್ಯವಸ್ಥೆಯನ್ನು ಕೆಎಸ್‌ಆರ್‌ಟಿಸಿ ಕಲ್ಪಿಸಿದೆ. ಸೆಪ್ಟೆಂಬರ್28 ರಿಂದ ಬಸ್ ಸೇವೆ ಆರಂಭವಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಮೊದಲ ಬಸ್‌ನ್ನು ಸ್ವಾಗತಿಸಿದ್ದಾರೆ.
ಕೆಎಸ್‌ಆರ್‌ಟಿಸಿ ವೋಲ್ವೋ ಬಸ್ ಸಂಚಾರಕ್ಕೆ ಬುಧವಾರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಶುಭ ಹಾರೈಸಿ ಬಸ್‌ಗೆ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದ ಹಾಕಿ ಬಸ್ ಸಂಚಾರ ಆರಂಭಕ್ಕೆ ಖುಷಿ ವ್ಯಕ್ತಪಡಿಸಿದರು.
ಮಧ್ಯಾಹ್ನ 3.30ಕ್ಕೆ ಕೊಯಮತ್ತೂರು ನಿಂದ ಹೊರಡುವ ಬಸ್ ರಾತ್ರಿ ಒಂಭತ್ತು ಗಂಟೆಗೆ ಮೈಸೂರು ತಲುಪಲಿದೆ. ಮೈಸೂರಿನಿಂದ 10.15ಕ್ಕೆ ಹೊರಟು ಮುಂಜಾನೆ 3.45ಗಂಟೆಗೆ ಸುಬ್ರಹ್ಮಣ್ಯ ತಲುಪಿ, ಬೆಳಗ್ಗೆ 5 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಈ ಬಸ್ ತಲುಪಲಿದೆ.
ಮೊದಲ ಪ್ರಯಾಣದ ಬಸ್ ಶ್ರೀ ಕ್ಷೇತ್ರ ಧರ್ಮಸ್ಥಳ ವನ್ನು ತಲುಪಿದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಬಸ್ ಸಂಚಾರ, ಪ್ರಯಾಣಿಕರ ಬೇಡಿಕೆ ಮತ್ತು ಪ್ರಯಾಣಿಕರಿಗೆ ಆಗುವ ಅನುಕೂಲದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕೆಎಸ್‌ಆರ್‌ಟಿಸಿ ಡಿಸಿ ರಾಜೇಶ್ ಶೆಟ್ಟಿ, ಡಿಎಂಇ ನವೀನ್, ಡಿಟಿಒ ಮರೀಗೌಡ ಸೇರಿದಂತೆ ಇತರ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಪರಿಸರ ಸ್ನೇಹಿ ಪ್ರವಾಸೋದ್ಯಮ
ಸಸಿಹಿತ್ಲುವಿನಲ್ಲಿರುವ 29 ಎಕರೆ ಡೀಮ್ಡ್ ಅರಣ್ಯ ಸದ್ಬಳಕೆ ಮಾಡಿಕೊಂಡು ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕೆ ಕೋಸ್ಟಲ್ ಝೋನ್ ಮ್ಯಾನೇಜ್‌ಮೆಂಟ್ ಪ್ಲಾನ್‌ಗೆ ಅನುಮೋದನೆ ದೊರೆತಿದ್ದು, ಇದು ಕಡಲತೀರದ ಅಭಿವೃದ್ಧಿಯ ಜತೆಗೆ, ತೀರದ ನಿವಾಸಿಗಳ ಆದಾಯ ಹೆಚ್ಚಳಕ್ಕೆ ಹೇರಳ ಅವಕಾಶದ ಬಾಗಿಲನ್ನು ತೆರೆಯಲಿದೆ.
ಎಎಪಿಯಿಂದ ಪೋರ್ಟಲ್ ಮಂಗಳೂರು ನಗರದ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿ ನಾಗರಿಕರು ಮತ್ತು ಆಡಳಿತದ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುವುದಕ್ಕಾಗಿ ಎಎಪಿ ಪೋರ್ಟಲ್ ಆರಂಭಿಸಲಿದೆ. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಪೋರ್ಟಲ್ ಸೀಮಿತವಾಗಿರುತ್ತದೆ. ಜನರು ಅನುಭವಿಸುವ ತೊಂದರೆಯನ್ನು ಈ ಪೋರ್ಟಲ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಪರಿಹಾರ ಸಿಗದೇ ಇದ್ದರೆ ಮತ್ತೆ ಮತ್ತೆ ಒತ್ತಾಯಿಸಲಾಗುವುದು. ಆಗಲೂ ಸುಮ್ಮನೇ ಇದ್ದರೆ ಪ್ರತಿಭಟನೆ ಮಾಡಲಾಗುವುದು. ಹಾಗಾಗು ಜನರು ತಮ್ಮ ಸಾಮಾಜಿಕ ಸಮಸ್ಯೆಗಳನ್ನು ಬರೆದು ಫೋಟೋ ಅಥವಾ ವಿಡಿಯೋ ಕಳುಹಿಸಿ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕಾಮತ್ ಮಾಹಿತಿ ನೀಡಿದ್ದಾರೆ.
Post a Comment