ಆರ್ ಎಸ್ ಎಸ್ ಸಂಘಟನೆಯನ್ನು ನಿಷೇಧಿಸಬೇಕೆಂದು ಕೇಳುವುದೇ ದುರ್ದೈವ, ಈ ಮಟ್ಟಕ್ಕೆ ಸಿದ್ದರಾಮಯ್ಯರು ಇಳಿಯಬಾರದಾಗಿತ್ತು: ಸಿಎಂ ಬೊಮ್ಮಾಯಿ

 ಆರ್​ಎಸ್​ಎಸ್​ ನಿಷೇಧಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಯೇ ದೊಡ್ಡ ದುರ್ದೈವ, ಅವರ ಹೇಳಿಕೆಗೆ ಆಧಾರಗಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

      ಸಿಎಂ ಬೊಮ್ಮಾಯಿ

By : Rekha.M
Online Desk

ಹುಬ್ಬಳ್ಳಿ: ಆರ್​ಎಸ್​ಎಸ್​ ನಿಷೇಧಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಯೇ ದೊಡ್ಡ ದುರ್ದೈವ, ಅವರ ಹೇಳಿಕೆಗೆ ಆಧಾರಗಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿ, ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿಯಾಗಿ, ವಿಪಕ್ಷ ನಾಯಕರಾಗಿ ಈ ಮಟ್ಟಕ್ಕೆ ಇಳಿಯಬಾರದಿತ್ತು. ಪಿಎಫ್​ಐ ಏಕೆ ನಿಷೇಧಿಸಿದರು ಎಂದು ಕೇಳಲು ಅವರಲ್ಲಿ ಆಧಾರಗಳಿಲ್ಲ. ಹಿಂದೆ ಅವರೇ ಪಿಎಫ್​ಐ ಮೇಲಿದ್ದ ಪ್ರಕರಣಗಳನ್ನು ಇವರೇ ಹಿಂಪಡೆದಿದ್ದರು. ಅದನ್ನು ಮರೆಮಾಚಲು ಆರ್​ಎಸ್​ಎಸ್​ ನಿಷೇಧಿಸಿ ಎಂದು ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ದೇಶಪ್ರೇಮಿಗಳು ಹಾಗೂ ಬಡವರಿಗೆ ನೆರವಾಗುತ್ತಿರುವ ಸಂಘಟನೆ ಆರ್​ಎಸ್​ಎಸ್​. ದೇಶವು ಸಮಸ್ಯೆಗಳಿಗೆ ಸಿಲುಕಿದಾಗ ಆರ್​ಎಸ್​ಎಸ್​ ಹಲವು ರೀತಿಯಲ್ಲಿ ನೆರವಿಗೆ ಬಂದಿದೆ. ದೇಶದಲ್ಲಿ ದೇಶಪ್ರೇಮ ಜಾಗೃತಿ ಮಾಡುತ್ತಿರುವ ಸಂಘಟನೆಯನ್ನು, ದೀನದಲಿತರು, ಬಡಮಕ್ಕಳಿಗೆ, ಅನಾಥರಿಗೆ, ದೇಶದಲ್ಲಿ ಪ್ರಕೃತಿ ವಿಕೋಪವಾಗುವಾಗ ನಿಲ್ಲುವ ಸಂಘಟನೆಯನ್ನು ನಿಷೇಧಿಸಬೇಕು ಎನ್ನುವುದು ದುರ್ದೈವ ಎಂದರು.

ನಂತರ ಮುಖ್ಯಮಂತ್ರಿಗಳು ಕೃಷ್ಣಾ ನದಿಗೆ ಕಟ್ಟಿರುವ ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದರು. 


Post a Comment

Previous Post Next Post