ಗೋಶಾಲೆಗಳನ್ನು ಸ್ಥಾಪಿಸಿ ವಯೋವೃದ್ಧ ಮತ್ತು ಬಿಡಾಡಿ ಗೋವುಗಳ ರಕ್ಷಣೆಗೆ ಒತ್ತು ನೀಡುತ್ತಿರುವ ರಾಜ್ಯದ ಬಿಜೆಪಿ ಸರ್ಕಾರವು ಈ ವರ್ಷದ ಜುಲೈಯಲ್ಲಿ ಪ್ರಾರಂಭಿಸಿರುವ ಪುಣ್ಯಕೋಟಿ ದತ್ತು ಯೋಜನೆಗೆ ಗೋಶಾಲೆಗಳನ್ನು ದತ್ತು ಪಡೆಯುವ ಯೋಜನೆಗೆ ಹೆಚ್ಚಿನ ಜನರು ಸಿಗುತ್ತಿಲ್ಲ. ರಾಜ್ಯದಲ್ಲಿ 33,000 ಕ್ಕೂ ಹೆಚ್ಚು ಜಾನುವಾರುಗಳ ಆರೈಕೆ ಅಗತ್ಯವಿದ್ದು, ಕೇವಲ 152 ಗೋವುಗಳನ್ನು ಇದು
ಬೆಂಗಳೂರು: ಗೋಶಾಲೆಗಳನ್ನು ಸ್ಥಾಪಿಸಿ ವಯೋವೃದ್ಧ ಮತ್ತು ಬಿಡಾಡಿ ಗೋವುಗಳ ರಕ್ಷಣೆಗೆ ಒತ್ತು ನೀಡುತ್ತಿರುವ ರಾಜ್ಯದ ಬಿಜೆಪಿ ಸರ್ಕಾರವು ಈ ವರ್ಷದ ಜುಲೈಯಲ್ಲಿ ಪ್ರಾರಂಭಿಸಿರುವ ಪುಣ್ಯಕೋಟಿ ದತ್ತು ಯೋಜನೆಗೆ ಗೋಶಾಲೆಗಳನ್ನು ದತ್ತು ಪಡೆಯುವ ಯೋಜನೆಗೆ ಹೆಚ್ಚಿನ ಜನರು ಸಿಗುತ್ತಿಲ್ಲ. ರಾಜ್ಯದಲ್ಲಿ 33,000 ಕ್ಕೂ ಹೆಚ್ಚು ಜಾನುವಾರುಗಳ ಆರೈಕೆ ಅಗತ್ಯವಿದ್ದು, ಕೇವಲ 152 ಗೋವುಗಳನ್ನು ಇದುವರೆಗೆ ದತ್ತು ಪಡೆಯಲಾಗಿದೆ.
ರಾಜ್ಯದಲ್ಲಿ ಹಸು, ಎಮ್ಮೆ ಸೇರಿದಂತೆ ಒಟ್ಟು 1.14 ಕೋಟಿ ಜಾನುವಾರುಗಳಿವೆ. ಅವುಗಳನ್ನು ವಧೆ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರವು ಕಳೆದ ವರ್ಷ ಕರ್ನಾಟಕ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಮಸೂದೆಯನ್ನು ಅಂಗೀಕರಿಸಿತ್ತು. ಅಂದಿನಿಂದ ಖಾಸಗಿ ಸಂಸ್ಥೆಗಳು ಮತ್ತು ಸರಕಾರದಿಂದ ನಿರ್ವಹಣೆ ಮಾಡುತ್ತಿರುವ ವಯೋವೃದ್ಧ ಹಾಗೂ ಅಸ್ವಸ್ಥ ಹಸುಗಳನ್ನು ಗೋಶಾಲೆಗಳಿಗೆ ಕಳುಹಿಸುವ ಸಂಖ್ಯೆ ಹೆಚ್ಚಿದೆ.
ಅಂತಹ ಸಂಸ್ಥೆಗಳು ಮತ್ತು ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮತ್ತು ಜನರ ಸಹಭಾಗಿತ್ವವನ್ನು ಉತ್ತೇಜಿಸಲು, ಪಶುಸಂಗೋಪನಾ ಇಲಾಖೆ ಈ ಯೋಜನೆಯನ್ನು ರೂಪಿಸಿದೆ. ಇದಕ್ಕೆ ವೆಬ್‌ಸೈಟ್ ನ್ನು ಸಹ ಪ್ರಾರಂಭಿಸಿದೆ. ಗೋಶಾಲೆಗಳಲ್ಲಿರುವ 33,000 ಜಾನುವಾರುಗಳ ಪೈಕಿ 21,000 ದತ್ತಾಂಶವನ್ನು ಸಂಗ್ರಹಿಸುವಲ್ಲಿ ಇಲಾಖೆ ಯಶಸ್ವಿಯಾಗಿದೆ.
ವೆಬ್‌ಸೈಟ್‌ನಲ್ಲಿ, ಒಬ್ಬರು ಗೋಶಾಲೆಗೆ ದೇಣಿಗೆ ನೀಡಲು ಅಥವಾ ಹಸುವನ್ನು ದತ್ತು ಅಥವಾ ಹಸುವಿಗೆ ಆಹಾರ ಒದಗಿಸಲು ಧನಸಹಾಯ ಮಾಡಬಹುದು. ಒಂದು ಗೋಶಾಲೆಗೆ 10 ರೂಪಾಯಿಯಿಂದ ಹಿಡಿದು, ವರ್ಷಕ್ಕೆ 11,000 ರೂಪಾಯಿ ಮತ್ತು ದಿನಕ್ಕೆ 70 ರೂಪಾಯಿಗಳ ದೇಣಿಗೆ ನೀಡಬಹುದು.
ಆನ್ ಲೈನ್ ಮಾದರಿಗೆ ಒತ್ತಾಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಸುಗಳನ್ನು ನೋಡಿಕೊಳ್ಳಲು ಆನ್‌ಲೈನ್ ಮಾದರಿಗೆ ಒತ್ತಾಯಿಸಿದ್ದಾರೆ. ಪಶುಸಂಗೋಪನಾ ಸಚಿವರು ತಮ್ಮದೇ ಪಕ್ಷದ ಶಾಸಕರಿಗೆ ಗೋವುಗಳನ್ನು ದತ್ತು ನೀಡುವಂತೆ ಒತ್ತಾಯಿಸಿ ಮನವಿ ಮಾಡಿಲ್ಲ ಅಥವಾ ಪತ್ರ ಬರೆದಿಲ್ಲ ಎಂದು ತಿಳಿದುಬಂದಿದೆ.
ಈ ಯೋಜನೆಯನ್ನು ಕೇವಲ ಒಂದು ತಿಂಗಳ ಹಿಂದೆ ಪ್ರಾರಂಭಿಸಲಾಗಿದೆ. ಬೊಮ್ಮಾಯಿ ಸರಕಾರವು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇದೊಂದು ದೊಡ್ಡ ಕಾರ್ಯಕ್ರಮವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ಯೋಜನೆಯು ಹೆಚ್ಚಿನ ದಾನಿಗಳನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದೆ. ಹಸುಗಳನ್ನು ದತ್ತು ಪಡೆಯಲು ಕಾರ್ಪೊರೇಟ್ ಸಂಸ್ಥೆಗಳನ್ನು ಸಂಪರ್ಕಿಸಲು ಮಾರುಕಟ್ಟೆ ಏಜೆನ್ಸಿಗಳನ್ನು ನೇಮಿಸಿಕೊಳ್ಳುತ್ತಿದ್ದೇವೆ. ಬ್ಯಾಂಕಿಂಗ್, ಐಟಿ-ಬಿಟಿ ಮತ್ತು ಇತರ ವಲಯಗಳಲ್ಲಿನ ಕಂಪನಿಗಳಿಗೆ ಮನವಿ ಮಾಡುತ್ತೇವೆ ಎಂದು ಪಶುಸಂಗೋಪನೆ ಇಲಾಖೆ ಕಾರ್ಯದರ್ಶಿ ಸಲ್ಮಾನ್ ಫಾಹಿಮ್ ಹೇಳುತ್ತಾರೆ.
Post a Comment