ಮೋಹನದಾಸ್ ಪೈ ಅವರೇ ಈ ಪರಿಯ ಮಳೆ ನ್ಯೂಯಾರ್ಕ್ ನಲ್ಲಿ ಬಿದ್ದಿದ್ರೆ ಏನಾಗ್ತಿತ್ತು? ದೂರುವುದು ಸುಲಭ ಪರಿಹರಿಸುವುದು ದೂರದ ಮಾತು !

 ನೂರಾರು ಹಳ್ಳಿಗಳನ್ನು ಗ್ರೇಟರ್ ಬೆಂಗಳೂರಿಗೆ ಸೇರಿಸಿ ಯಾವುದೇ ಅಭಿವೃದ್ದಿಯನ್ನ ಈ ಗ್ರಾಮಗಳಲ್ಲಿ ಮಾಡದಿರುವುದು ಯಾರ ತಪ್ಪು ? ಇನ್ನು ಮೋಹನದಾಸ್ ಪೈ ಯವರೇ ಈ ಪರಿಯ ಮಳೆ ನ್ಯೂಯೋರ್ಕ್ ನಲ್ಲಿ ಬಿದ್ದಿದ್ರೆ ಏನಾಗ್ತಾಯಿತ್ತು? ಸಹನೆ ಹಾಗು ಸತ್ಯಾನ್ವೇಷಣೆಗೆ ಮನ್ನಣೆ ಕೊಡಿ.

                  ಕೆ.ಸುಧಾಕರ್

By : Rekha.M
Online Desk

ಬೆಂಗಳೂರು: ನಿರಂತರ ಹಾಗೂ ಭಾರಿ ಮುಂಗಾರು ಮಳೆಯಿಂದ ರಾಜಧಾನಿ ಬೆಂಗಳೂರು ಬದುಕು ಅಸ್ತವ್ಯಸ್ತಗೊಂಡಿದೆ. ಸಮಸ್ಯೆಗಳಿಂದ ನಲುಗುತ್ತಿರುವ ಇಲ್ಲಿನ ಜನತೆ ದಿಕ್ಕು ತೋಚದಂತಾಗಿದ್ದಾರೆ. ಇದಕ್ಕೆ ಪ್ರಸಕ್ತ ರಾಜ್ಯ ಸರ್ಕಾರವನ್ನು ಐಟಿ ಕ್ಷೇತ್ರದ ಮೋಹನ್ ದಾಸ್ ಪೈ ಸೇರಿದಂತೆ ಅನೇಕರು ದೂರುತ್ತಿದ್ದಾರೆ. ಇವುಗಳಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಅದರ ಪೂರ್ಣಪಠ್ಯ ಮುಂದಿದೆ. ಅವೈಜ್ಞಾನಿಕವಾಗಿ ನೂರಾರು ಹಳ್ಳಿಗಳನ್ನು ಗ್ರೇಟರ್ ಬೆಂಗಳೂರಿಗೆ ಸೇರಿಸಿ ಯಾವುದೇ ಅಭಿವೃದ್ದಿಯನ್ನ ಈ ಗ್ರಾಮಗಳಲ್ಲಿ ಮಾಡದಿರುವುದು ಯಾರ ತಪ್ಪು ? ಇನ್ನು ಮೋಹನದಾಸ್ ಪೈ ಯವರೇ ಈ ಪರಿಯ ಮಳೆ ನ್ಯೂಯೋರ್ಕ್ ನಲ್ಲಿ ಬಿದ್ದಿದ್ರೆ ಏನಾಗ್ತಾಯಿತ್ತು? ಸಹನೆ ಹಾಗು ಸತ್ಯಾನ್ವೇಷಣೆಗೆ ಮನ್ನಣೆ ಕೊಡಿ. ದೂರುವುದು ಸುಲಭ ಪರಿಹರಿಸುವುದು ದೂರದ ಮಾತು

ಇತಿಹಾಸದಲ್ಲಿ ಕಂಡರಿಯದ ರೌದ್ರಾವತಾರ ತಾಳಿದ ಮಳೆಯಿಂದ ಬೆಂಗಳೂರು ಅಸ್ಥವ್ಯಸ್ತವಾಗಿರುವಿದು ಸತ್ಯ. ಈ ಸಂಕಷ್ಟದ ಕಾಲದಲ್ಲಿ ಸರಕಾರ ಹಾಗು ನಾಗರಿಕರು ಒಟ್ಟಾಗಿ ಸವಾಲನ್ನು ಎದುರಿಸಬೇಕೆ ಹೊರತು ನಿಂದಿಸುವ ಸಮಯವಲ್ಲ. ಈ ರೀತಿಯ ಮಳೆ ಪ್ರಪಂಚದ ಯಾವುದೇ ನಗರದಲ್ಲಿ ಬಿದ್ದಿದ್ದೇ ಆದಲ್ಲಿ ಪರಿಸ್ಥಿತಿ ಇದಕ್ಕಿನ್ನ ಭಿನ್ನವಾಗಿರುವುದಿಲ್ಲ.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಹಾಗು ಬೆಂಗಳೂರಿನ ಸಚಿವರುಗಳು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗು ವಿವಿಧ ಸಂಘಸಂಸ್ಥೆಗಳು ಸಕ್ರಿಯವಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ. ನಮ್ಮ ಕೆಂಪೇಗೌಡರು ಕಟ್ಟಿದ ಸುಂದರ ಹಾಗು ಎಲ್ಲರನ್ನೊಳಗೊಂಡ ಚಿಕ್ಕದಾದ ಹಾಗು ಚೊಕ್ಕದಾದ ಬೆಂಗಳೂರು ಇವತ್ತು ಅಭಿವೃದ್ಧಿಯ ಹೆಸರಲ್ಲಿ ಬೃಹತ್ ಮಹಾನಗರ ಆಗಿದೆ.

ಆಗ ನಿರ್ಮಿಸಿದ ಕೆರೆಗಳು ಇಂದು ಒತ್ತುವರಿಯಾಗಿ ಮಾಯವಾಗಿದೆ. ರಾಜಕಾಲುವೆಗಳ ಮೇಲೆ ಮನೆಗಳು ಮಳಿಗೆಗಳು ನಿರ್ಮಾಣವಾಗಿದೆ. ಕೆಲವು ಕೆರೆಗಳ ಅಂಗಳದಲ್ಲಿ, ತಗ್ಗು ಪ್ರದೇಶದಲ್ಲಿ ಮನೆಗಳ ಲೇಔಟ್ ನಿರ್ಮಾಣ ಮಾಡಿಕೊಡಿದ್ದಾರೆ. ಇಂತ ಬಳುವಳಿಯನ್ನ ನಮ್ಮ ಸರ್ಕಾರ ಪಡೆದಿದೆ. ಆದರೂ ನಮ್ಮ ಸರಕಾರ ಇದನ್ನು ಸವಾಲಾಗಿ ಸ್ವೀಕರಿಸಿ ಶೀಘ್ರ ಶಾಶ್ವತ ಪರಿಹಾರವನ್ನು ನೀಡುತ್ತೇವೆ.

ಇವು ಜಾಗತಿಕ ತಾಪಮಾನ ವೈಪರೀತ್ಯದ ಕೆಲವು ಕೊಡುಗೆಗಳು. ಹಾಗಾಗಿ ನಾವೆಲ್ಲಾ ಒಟ್ಟಾಗಿ ಉತ್ತಮ ಹಾಗು ನಿರ್ಮಲವಾದ ಪರಿಸರಪೂರಕ ನಗರಾಭಿವೃದ್ದಿಗೆ ನಾಂದಿಹಾಡೋಣ. ಪ್ರಕೃತಿ ನಮ್ಮ ಅಗತ್ಯಗಳಿಗೆ ಎಲ್ಲವು ಕೊಡುತ್ತೆ ಆದರೆ ನಮ್ಮ ದುರಾಸೆಗೆ ಅದರ ವಿಕೃತಿಯ ದರ್ಶನವಾಗುತ್ತೆ. ಎಚ್ಚರ…ಎಚ್ಚರ ಎಂದು ಟ್ವೀಟ್ ಮಾಡಿದ್ದಾರೆ.




Post a Comment

Previous Post Next Post