ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಗೆ ಬಾಂಬೆ ಹೈಕೋರ್ಟ್​ ನೋಟಿಸ್!

 ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್‌  ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ  ಶುಕ್ರವಾರ ಬಾಂಬೆ ಹೈಕೋರ್ಟ್ ನೋಟಿಸ್ ಜಾರಿಮಾಡಿದೆ.

                      ಬಿಲ್ ಗೇಟ್ಸ್

By : Rekha.M
Online Desk

ಮುಂಬೈ: ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್‌  ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ  ಶುಕ್ರವಾರ ಬಾಂಬೆ ಹೈಕೋರ್ಟ್ ನೋಟಿಸ್ ಜಾರಿಮಾಡಿದೆ.

ದಿಲೀಪ್ ಲುನಾವತ್ ಎಂಬುವವರ ಪುತ್ರಿ, ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ಮೇಲೆ ಸಾವನ್ನಪ್ಪಿದ್ದರು. ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡ ನಂತರ ಸೈಡ್ ಎಫೆಕ್ಟ್ಸ್​ ಉಂಟಾಗಿ ಸಾವನ್ನಪ್ಪಿದ್ದಾಳೆ ಎಂದು ದಿಲೀಪ್ ಆರೋಪಿಸಿದ್ದರು. ಅಲ್ಲದೇ ಒಂದು ಸಾವಿರ ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಬಾಂಬೈ ಹೈಕೋರ್ಟ್​ ಮೊರೆ ಹೋಗಿದ್ದಾರೆ. ಇದರ ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಭಾರತ ಮತ್ತು ಇತರ ತೃತೀಯ ಜಗತ್ತಿನ ದೇಶಗಳಿಗೆ 100 ಮಿಲಿಯನ್ ಡೋಸ್ ಕೋವಿಶೀಲ್ಡ್ ಲಸಿಕೆಗಳ ತಯಾರಿಕೆ ಮತ್ತು ವಿತರಣೆಯ ಪ್ರಕ್ರಿಯೆಯನ್ನು ವೇಗಗೊಳಿಸಲು, 2020 ರಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್‌ ನೊಂದಿಗೆ ಪಾಲುದಾರಿಕೆಗೆ ಒಳಪಟ್ಟಿತ್ತು.

ಭಾರತದ ಕೇಂದ್ರ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ, ಡ್ರಗ್ ಕಂಟ್ರೋಲರ್ ಜನರಲ್ ಡಾ ವಿಜಿ ಸೋಮಾನಿ ಮತ್ತು ಎಐಐಎಂಎಸ್ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ಅವರನ್ನು ಅರ್ಜಿಯ ಇತರ ಪ್ರತಿವಾದಿಗಳಾಗಿ ಮಾಡಲಾಗಿದೆ.

2020ರಲ್ಲಿ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಜೊತೆಗೆ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್‌ (Bill and Melinda Gates Foundation) ಪಾಲುದಾರಿಕೆ ಹೊಂದಿತ್ತು. ಭಾರತ ಮತ್ತು ಇತರೆ ದೇಶಗಳಲ್ಲಿ 100 ಮಿಲಿಯನ್ ಡೋಸ್ ಕೋವಿಡ್‌ಶೀಲ್ಡ್ ಲಸಿಕೆಯನ್ನು ತಯಾರಿಸುವ ಹಾಗೂ ಅದರ ಕಾರ್ಯವನ್ನ ವೇಗಗೊಳಿಸುವ ಉದ್ದೇಶದಿಂದ ಪಾರ್ಟನರ್​ಶಿಪ್ ಮೇಲೆ ಈ ಸಂಸ್ಥೆಗಳು ಅಂದು ಕೆಲಸ ಮಾಡುತ್ತಿದ್ದವು.

 ದಿಲೀಪ್ ಲುನಾವತ್ ಮಹಾರಾಷ್ಟ್ರದ ಔರಂಗಾಬಾದ್ ನಿವಾಸಿ ಆಗಿದ್ದಾರೆ. ಇವರ ಪುತ್ರಿ ದ್ಯಾಮಂಗಾವ್‌ನ ಎಸ್‌ಎಂಬಿಟಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆ ಹಾಗೂ ಉಪನ್ಯಾಸಕಿ ಆಗಿದ್ದರು. ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಸಂಸ್ಥೆ ಲಸಿಕೆ ಹಾಕಿಸಿಕೊಳ್ಳುವಂತೆ ಕೇಳಿಕೊಂಡಿತ್ತು. ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿದ್ದರಿಂದ ಮಗಳು ವ್ಯಾಕ್ಸಿನ್ ಹಾಕಿಸಿಕೊಂಡಿದ್ದಳು. ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮದಿಂದಾಗಿ ಮಾರ್ಚ್ 1, 2021 ರಂದು ಸಾವನ್ನಪ್ಪಿದ್ದಾರೆ ಎಂದು ಲುನಾವತ್ ಆರೋಪಿಸಿದ್ದಾರೆ.

ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಲಸಿಕೆಯಿಂದ ದೇಹಕ್ಕೆ ಯಾವುದೇ ಅಪಾಯವಿಲ್ಲ ಎಂದು ಮಗಳಿಗೆ ಭರವಸೆ ನೀಡಲಾಗಿತ್ತು. ಡಾ ಸೋಮಾನಿ ಮತ್ತು ಗುಲೇರಿಯಾ ಅವರು ಹಲವಾರು ಸಂದರ್ಶನಗಳಲ್ಲಿ ‘ಲಸಿಕೆಗಳು ಸುರಕ್ಷಿತವಾಗಿವೆ ಎಂದು ಜನರಿಗೆ ಭರವಸೆ ನೀಡಿದ್ದಾರೆ’ ಎಂದು ಲುನಾವತ್ ತಮ್ಮ ಮನವಿಯಲ್ಲಿ ಕೋರ್ಟ್ ಗೆ ಹೇಳಿದ್ದಾರೆ.


    Post a Comment

    Previous Post Next Post