ಸಚಿವ ಉಮೇಶ್ ಕತ್ತಿಯವರು ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನದ ನೇರ-ನಿಷ್ಠುರ ವ್ಯಕ್ತಿಯಾಗಿದ್ದರು ಎಂದು ಗೃಹ ಸಚಿವ ಆರಗ ಉಮೇಶ್ ಕತ್ತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಸಚಿವ ಉಮೇಶ್ ಕತ್ತಿ-ಗೃಹ ಸಚಿವ ಆರಗ ಜ್ಞಾನೇಂದ್ರ(ಸಂಗ್ರಹ ಚಿತ್ರ)
ತುಮಕೂರು: ಸಚಿವ ಉಮೇಶ್ ಕತ್ತಿಯವರು ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನದ ನೇರ-ನಿಷ್ಠುರ ವ್ಯಕ್ತಿಯಾಗಿದ್ದರು ಎಂದು ಗೃಹ ಸಚಿವ ಆರಗ ಉಮೇಶ್ ಕತ್ತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ ನಿಧನ ಅತ್ಯಂತ ದುಖವಾಗಿದೆ. ನನ್ನ ಆತ್ಮೀಯರಲ್ಲಿ ಒಬ್ಬರಾಗಿದ್ದರು. ಅನಾರೋಗ್ಯದ ಕಾರಣ ಕಳೆದ ಸಚಿವ ಸಂಪುಟ ಸಭೆಗೆ ಹಾಜರಾಗಿರಲಿಲ್ಲ ಎಂದರು. ಕತ್ತಿಯವರು ಹಾಸ್ಯ ಪ್ರಜ್ಞೆ ಉಳ್ಳವರಾಗಿದ್ದರು. ಇದ್ದದ್ದು ಇದ್ದ ಹಾಗೆ ಹೇಳುವ ಜಾಯಮಾನದವರಾಗಿದ್ದರು. ಅವರ ಕುಟುಂಬಕ್ಕೆ ದುಖ ಭರಿಸುವ ಶಕ್ತಿ ಕೊಡಲಿ. ಅವರ ನಿಧನದಿಂದ ನನ್ನ ಎಲ್ಲಾ ಕೆಲಸ ಕಾರ್ಯ ರದ್ದು ಮಾಡಿದ್ದೇನೆ. ಜನೋತ್ಸವದ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷದ ಹಿರಿಯರು ನಿರ್ಧರಿಸುತ್ತಾರೆ ಎಂದರು.
ಈಗ ನಾನು ಬೆಂಗಳೂರಿಗೆ ಹೋಗುತ್ತಿದ್ದೇನೆ. ತುಮಕೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಶೇಕಡಾ 300ರಿಂದ 400ರಷ್ಟು ಹೆಚ್ಚಾಗಿದೆ. 3 ಸಾವಿರ ಎಕರೆಯಷ್ಟು ಬೆಳೆಹಾನಿಯಾಗಿದೆ. ಇಲ್ಲಿಯವರೆಗೆ ಸುಮಾರು 10 ಜನ ಮೃತಪಟ್ಟಿದ್ದಾರೆ ಎಂದರು.
Post a Comment