ವಾಮಾಚಾರ : ವಿದ್ಯಾ ದೇಗುಲದಲ್ಲೂ ಬಿಡದ ವಾಮಾಚಾರ , ಮೈಸೂರ್ ಮುಕ್ತ ವಿ ವಿ ಕ್ಯಾಮ್ಪಸ್ ನಲ್ಲಿ ನಡೆದ ಘಟನೆ

 ದುಷ್ಕರ್ಮಿಗಳು ಕೋಳಿ ತಲೆ, ಕಾಲು ಕತ್ತರಿಸಿ ಕುಂಕುಮ, ಕೂದಲು, ಬಳೆ ಚೂರು ಜೊತೆಗೆ ಫೋಟೋ ಕತ್ತರಿಸಿ ಪತ್ರಿಕೋದ್ಯಮ‌ ವಿಭಾಗದ ಮುಖ್ಯಸ್ಥರ ಕೊಠಡಿಯಲ್ಲಿ ಹಾಕಿದ್ದಾರೆ. ಈ ಹಿಂದೆಯಿದ್ದ ಎಚ್ ಓಡಿ ತೇಜಸ್ವಿ ನವಿಲೂರು ಕಚೇರಿಯಲ್ಲಿ ಈ ಘಟನೆ ನಡೆದಿದೆ.

                         ವಾಮಾಚಾರ

By : Rekha.M
Online Desk

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದಲ್ಲಿ ವಾಮಾಚಾರ ನಡೆದಿದೆ.

ದುಷ್ಕರ್ಮಿಗಳು ಕೋಳಿ ತಲೆ, ಕಾಲು ಕತ್ತರಿಸಿ ಕುಂಕುಮ, ಕೂದಲು, ಬಳೆ ಚೂರು ಜೊತೆಗೆ ಫೋಟೋ ಕತ್ತರಿಸಿ ಪತ್ರಿಕೋದ್ಯಮ‌ ವಿಭಾಗದ ಮುಖ್ಯಸ್ಥರ ಕೊಠಡಿಯಲ್ಲಿ ಹಾಕಿದ್ದಾರೆ. ಈ ಹಿಂದೆಯಿದ್ದ ಎಚ್ ಓಡಿ ತೇಜಸ್ವಿ ನವಿಲೂರು ಕಚೇರಿಯಲ್ಲಿ ಈ ಘಟನೆ ನಡೆದಿದೆ.

ಆರು ತಿಂಗಳ ಹಿಂದೆ ತೇಜಸ್ವಿ ಎಚ್ಒಡಿ ಸ್ಥಾನದಿಂದ ಬದಲಾಗಿದ್ದರು. ಈ ನಡುವೆ ಕೊಠಡಿ ಹೊಸ ಎಚ್ ಒಡಿ ಸುಪರ್ದಿಯಲ್ಲಿತ್ತು. ಇದೀಗ ಸಹದ್ಯೋಗಿಗಳು ಹಿಂದಿನ ಎಚ್ಒಡಿ ಫೋಟೋ ಹರಿದು, ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ವಾಮಾಚಾರಕ್ಕೆ ಒಳಗಾದ ಅಧ್ಯಾಪಕ ತೇಜಸ್ವಿ ಅವರು ದೂರು ನೀಡಿದ್ದಾರೆ. ಕಳೆದ ಆರು ತಿಂಗಳ ಹಿಂದೆಯೇ ತೇಜಸ್ವಿ ಅವರು ಕೊಠಡಿ ಕೀ ನೀಡಿದ್ದು, ಆರು ತಿಂಗಳ ಬಳಿಕ ಕೊಠಡಿಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ.

ಇನ್ನು, ಮಾಟ ಮಂತ್ರ ಮಾಡಿರೋ ವಿಚಾರ ಕಾಡ್ಗಿಚ್ಚಿನ ರೀತಿ ಇಡೀ ಕಚೇರಿಗೆ ಹಬ್ಬಿದೆ. ವಿಷಯ ತಿಳಿದು ಇತರೆ ಸಿಬ್ಬಂದಿ ಭಯಭೀತ ಗಿದ್ದಾರೆ. ಅರಿಶಿನ ಕುಂಕುಮ ಕೋಳಿ ಕಾಲು ನೋಡಿ ಬೆದರಿದ್ದಾರೆ. ಗೊಂದಲಗಳಿಗೆ ಕಾರಣರಾದ ದುಷ್ಕರ್ಮಿಗಳ ಬಂಧನಕ್ಕೆ ಕೂಗು ಕೇಳಿಬಂದಿದೆ.

ಮಾಟ ಮಂತ್ರ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೂ ವಿಚಾರ ಹೋಗಿದ್ದು, ಮೊದಲೇ ವಿವಾದದ ಸುಳಿಯಲ್ಲಿರೋ ಕೆಎಸ್ಒಯು ಅಧಿಕಾರಿಗಳಿಗೆ ಈ ವಿಚಾರದಿಂದ ತೀವ್ರ ಕಸಿವಿಸಿ ಉಂಟಾಗಿದೆ.

‘ನವೀಕರಣ ಹಂತದಲ್ಲಿರುವ ಹಳೆಯ ಕಟ್ಟಡದಲ್ಲಿ ಘಟನೆ ನಡೆದಿರುವುದರಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರಲಿಲ್ಲ. ನಾನು ಪ್ರಸ್ತುತ ಬೆಂಗಳೂರಿನಲ್ಲಿದ್ದೇನೆ ಮತ್ತು ಮೈಸೂರಿಗೆ ಮರಳಿದ ನಂತರ ಈ ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತೇನೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಉಪಕುಲಪತಿ ಪ್ರೊ. ವಿದ್ಯಾಶಂಕರ ಹೇಳಿದ್ದಾರೆ. ಇಂತಹ ಘಟನೆಗಳು ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸುತ್ತವೆ ಎಂದಿದ್ದಾರೆ.





Post a Comment

Previous Post Next Post