ಅಶ್ವಿನ್ ಮಹೇಶ್ ಗೆ ಬಿಬಿಎಂಪಿ ಚುನಾವಣೆಗೆ ಎಎಪಿ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವ ಜವಾಬ್ದಾರಿ

 ಬಿಬಿಎಂಪಿ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಆಮ್ ಆದ್ಮಿ ಪಕ್ಷವು ನಗರವಾಸಿ ಅಶ್ವಿನ್ ಮಹೇಶ್ ಅವರಿಗೆ ನೀಡಿದೆ.

                             ಪ್ರಾತಿನಿಧಿಕ ಚಿತ್ರ

By : Rekha.M
Online Desk

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಆಮ್ ಆದ್ಮಿ ಪಕ್ಷವು ನಗರವಾಸಿ ಅಶ್ವಿನ್ ಮಹೇಶ್ ಅವರಿಗೆ ನೀಡಿದೆ. ಪ್ರಣಾಳಿಕೆಯಲ್ಲಿ ಜನರು ಕಾಳಜಿ ವಹಿಸುವ ಭರವಸೆಗಳು, ನಗರಕ್ಕೆ ಪ್ರಮುಖವಾದ ಸಮಸ್ಯೆಗಳ ಬಗ್ಗೆ ಮತ್ತು ಅಳೆಯಬಹುದಾದ ಫಲಿತಾಂಶಗಳಿಗೆ ಕಾರಣವಾಗುವಂತ ಅಂಶಗಳನ್ನು ಸೇರಿಸಲು ನಾನು ಬಯಸುತ್ತೇನೆ ಎಂದು ಮಹೇಶ್ ಹೇಳುತ್ತಾರೆ.

'ನಗರ ಮಟ್ಟದ ದಾಖಲೆ ಜತೆಗೆ ವಾರ್ಡ್ ಪ್ರಣಾಳಿಕೆಗಳು ಇರಬೇಕು. ಜನರು ತಮ್ಮ ಮನೆಗಳ ಸುತ್ತಲಿನ ಅಭಿವೃದ್ಧಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಪ್ರತಿ ಪ್ರದೇಶದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ವಿವರವಾದ 243 ವಾರ್ಡ್ ಪ್ರಣಾಳಿಕೆಗಳನ್ನು ಪ್ರಕಟಿಸಲಾಗುವುದು. ನಮ್ಮ ಊರು ಚರ್ಚೆ ಹೆಸರಿನಲ್ಲಿ ಪಕ್ಷವು ಜನರೊಂದಿಗೆ ಕನಿಷ್ಠ ಒಂದು ಲಕ್ಷ ಸಂಭಾಷಣೆಗಳನ್ನು ನಡೆಸುತ್ತದೆ. ಆದ್ದರಿಂದ ಪ್ರಣಾಳಿಕೆಯು ಜನರ ಹೃದಯದಿಂದ ಅವರ ಭರವಸೆ ಮತ್ತು ಕಾಳಜಿಗಳ ಬಗ್ಗೆ ಮಾತನಾಡುತ್ತದೆ' ಎಂದು ಅವರು ಹೇಳಿದರು.

ಎಎಪಿ ನೇತೃತ್ವದ ಕೌನ್ಸಿಲ್ ಮತ್ತು ಪ್ರತಿ ಎಎಪಿ ಕೌನ್ಸಿಲರ್‌ಗಳ ವಾರ್ಡ್‌ನಲ್ಲಿ ಏನು ಮಾಡಲಾಗುವುದು ಎಂಬುದನ್ನು ಪಟ್ಟಿಯನ್ನು ಒಳಗೊಂಡಿರುವ ಗ್ಯಾರಂಟಿ ಕಾರ್ಡ್ ಅನ್ನು ಪ್ರತಿಯೊಬ್ಬ ಮತದಾರರು ಪಡೆಯುತ್ತಾರೆ. 'ಐದು ವರ್ಷಗಳ ನಂತರ, ಪಕ್ಷವು ಭರವಸೆಗಳನ್ನು ಈಡೇರಿಸಿದೆಯೇ ಎಂದು ಜನರು ಪರಿಶೀಲಿಸಬಹುದು' ಎಂದು ಅವರು ಹೇಳಿದರು.



Post a Comment

Previous Post Next Post