ಹೊನ್ನಾಳಿ : ಹಲ್ಲೆ ಪರಕರಣಕ್ಕೆ ಸಂಬAಧಿಸಿದAತೆ ಅರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಕಳೆದ ೨೦೧೮ ರಲ್ಲಿ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಕುಂದೂರು ಗ್ರಾಮದ ನಿವೃತ್ತ ಎಎಸ್‌ಐ ಎಂ.ವಿ. ಆಂಜನೇಯ ಮಡಿವಾಳ ಇವರ ಮೇಲೆ ಇವರ ಅಣ್ಣನ ಮಗ ಯೋಗೇಂದ್ರ ಮಡಿ ವಾಳ ಜಾಗದ ವಿಷಯಕ್ಕೆ ಸಂಬAಧಿ ಸಿದಂತೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಬ್ಬಿಣದ ಆಯುಧದಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದ. ಇದಕ್ಕೆ ಸಂಬAಧಿ ಸಿದಂತೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಎಂ.ವಿ. ಆಂಜನೇಯ ಮಡಿವಾಳ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಯೋಗೇಂದ್ರನ ವಿರುದ್ದ ನ್ಯಾಯಾ ಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿ ದ್ದರು. ವಿಚಾರಣೆ ನಡೆಸಿದ ಹೊನ್ನಾಳಿ ನ್ಯಾಯಾಲಯ ಆರೋಪಿ ನಡೆಸಿರುವ ಹಲ್ಲೆ ಸಾಬೀತಾಗಿದ್ದು, ಈ ಹಿನ್ನಲೆಯಲ್ಲಿ ಈತನಿಗೆ ಕಾನೂ ನಿನ ಅಡಿಯಲ್ಲಿ ಶಿಕ್ಷೆ ಜಾರಿಮಾ ಡುವಂತೆ ಆದೇಶ ಸೂಚಿಸಿದೆ.
ಆದರೆ ಈ ಸಂದರ್ಭದಲ್ಲಿ ಆರೋಪಿ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಮುಂದಿನ ದಿನದಲ್ಲಿ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ಜಿ. ಕವಿತಾ ವಾದ ಮಂಡಿಸಿದರು.
Post a Comment