ಸ್ವಚ್ಛತೆಯಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನ ಗಳಿಸಿದ ಪರಪ್ಪನ ಅಗ್ರಹಾರ ! ಕೈದಿಗಳಿಗೆ ಉತ್ತಮ ಆಹಾರ ಪೂರೈಕೆ

 ಕಾರಾಗೃಹದಲ್ಲಿ ಕೈದಿಗಳಿಗೆ ಉತ್ಕೃಷ್ಟಹಾಗೂ ಸ್ವಾದಿಷ್ಟವಾದ ಆಹಾರ ಪೂರೈಕೆ ಹಾಗೂ ನೈರ್ಮಲ್ಯ ಸ್ಪರ್ಧಾ ವಿಭಾಗದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅಖಿಲ ಭಾರತ ಕಾರಾಗೃಹ ಸಮ್ಮೇಳನದಲ್ಲಿ ಪ್ರಥಮ ಸ್ಥಾನ ಸಂದಿದೆ.

ಪರಪ್ಪನ ಅಗ್ರಹಾರ ಜೈಲು

By : Rekha.M
Online Desk

ಬೆಂಗಳೂರು: ಕಾರಾಗೃಹದಲ್ಲಿ ಕೈದಿಗಳಿಗೆ ಉತ್ಕೃಷ್ಟಹಾಗೂ ಸ್ವಾದಿಷ್ಟವಾದ ಆಹಾರ ಪೂರೈಕೆ ಹಾಗೂ ನೈರ್ಮಲ್ಯ ಸ್ಪರ್ಧಾ ವಿಭಾಗದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅಖಿಲ ಭಾರತ ಕಾರಾಗೃಹ ಸಮ್ಮೇಳನದಲ್ಲಿ ಪ್ರಥಮ ಸ್ಥಾನ ಸಂದಿದೆ.

ಕೇಂದ್ರ ಗೃಹ ಸಚಿವಾಲಯ ಗುಜರಾತಿನ ಅಹಮದಾಬಾದ್‌ನಲ್ಲಿ ಶುಕ್ರವಾರ ನಡೆದ 6ನೇ ಅಖಿಲ ಭಾರತ ಕಾರಾಗೃಹ ಸಮ್ಮೇಳದ ಸಮಾರೋಪ ಸಮಾರಂಭದಲ್ಲಿ ಗುಜರಾತ್‌ ರಾಜ್ಯಪಾಲರಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಮೇಶ್‌ ಪ್ರಶಸ್ತಿ ಸ್ವೀಕರಿಸಿದರು.

ಕೇಂದ್ರ ಗೃಹ ಇಲಾಖೆಯು ಸೆಪ್ಟಂಬರ್ 4 ರಿಂದ ಆಯೋಜಿಸಿದ್ದ ಮೂರು ದಿನಗಳ ಸಮ್ಮೇಳನದಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 1,319 ಕಾರಾಗೃಹಗಳು ಭಾಗವಹಿಸಿದ್ದವು.

‘ಜೈಲಿನಲ್ಲಿ ನೈರ್ಮಲ್ಯ ಹಾಗೂ ಉತ್ತಮ ಗುಣಮಟ್ಟಆಹಾರ ಸ್ಪರ್ಧೆಗೆ’ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ಪ್ರಸ್ತಾಪಿಸಿತು. ಅಂತೆಯೇ ಸಮ್ಮೇಳನದ ಸದಸ್ಯರು, ಕಾರ್ಯಕ್ರಮಕ್ಕೂ ಮುನ್ನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

ಈ ಸಮಿತಿ ವರದಿ ಆಧರಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಪ್ರಥಮ ಸ್ಥಾನ ಪಡೆದರೆ, ಆಂಧ್ರಪ್ರದೇಶದ ವಿಶಾಖ ಪಟ್ಟಣಂ ಕೇಂದ್ರ ಕಾರಾಗೃಹ ಮತ್ತು ತಮಿಳುನಾಡಿನ ಪುಳಲು ಕೇಂದ್ರ ಕಾರಾಗೃಹಗಳು ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ (ಬಿಪಿಆರ್ & ಡಿ), ನವದೆಹಲಿಯ ಸಹಾಯಕ ನಿರ್ದೇಶಕರ ನೇತೃತ್ವದ ಐವರು ಅಧಿಕಾರಿಗಳ ತಂಡವು ಆಗಸ್ಟ್ 26 ರಂದು ಜೈಲು ವೀಕ್ಷಣೆಗೆ ಪರಪ್ಪನ ಅಗ್ರಹಾರಕ್ಕೆ ಬಂದಿತ್ತು. ಅಧಿಕಾರಿಗಳು ಕೈದಿಗಳೊಂದಿಗೆ ಸಂವಹನ ನಡೆಸಿದರು. ಕೇಂದ್ರ ಕಾರಾಗೃಹದ ಅಧಿಕಾರಿಗಳು ನಿರ್ವಹಿಸಿರುವ ದಾಖಲೆಗಳನ್ನೂ ತಂಡ ಪರಿಶೀಲಿಸಿತು.

ಅವರು ಕೈದಿಗಳ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದರು ಮತ್ತು ಚಿತ್ರಗಳನ್ನು ತೆಗೆದುಕೊಂಡರು. ಉತ್ತಮ ಜೈಲು ಆಡಳಿತಕ್ಕಾಗಿ ಜೈಲು ಅಧಿಕಾರಿಗಳು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲಾಯಿತು. ಅವರು ಜೈಲು ಕೈಗಾರಿಕೆಗಳಿಗೆ ಭೇಟಿ ನೀಡಿದರು ಮತ್ತು ಜೈಲು ಅಧಿಕಾರಿಗಳ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಿದರು ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಗಳ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ್  ತಿಳಿಸಿದ್ದಾರೆ.







Post a Comment

Previous Post Next Post