2020-21ರಲ್ಲಿ ಪಿಯು ತೇರ್ಗಡೆಯಾಗಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಈ ವರ್ಷವೂ ಸಿಇಟಿ ಬರೆದಿರುವ 24 ಸಾವಿರ ಅಭ್ಯರ್ಥಿಗಳ ದ್ವಿತೀಯ ಪಿಯು ಅಂಕಗಳನ್ನು ಪರಿಗಣಿಸಿ ರ್‍ಯಾಕಿಂಗ್ ಪಟ್ಟಿಯನ್ನು ಸಿದ್ಧಪಡಿಸಬೇಕೆಂಬ ಹೈಕೋರ್ಟ್ ಆದೇಶದ ವಿರುದ್ಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೇಲ್ಮನವಿ ಸಲ್ಲಿಸಿದೆ.
ಕರ್ನಾಟಕ ಹೈಕೋರ್ಟ್
ಬೆಂಗಳೂರು: 2020-21ರಲ್ಲಿ ಪಿಯು ತೇರ್ಗಡೆಯಾಗಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಈ ವರ್ಷವೂ ಸಿಇಟಿ ಬರೆದಿರುವ 24 ಸಾವಿರ ಅಭ್ಯರ್ಥಿಗಳ ದ್ವಿತೀಯ ಪಿಯು ಅಂಕಗಳನ್ನು ಪರಿಗಣಿಸಿ ರ್‍ಯಾಕಿಂಗ್ ಪಟ್ಟಿಯನ್ನು ಸಿದ್ಧಪಡಿಸಬೇಕೆಂಬ ಹೈಕೋರ್ಟ್ ಆದೇಶದ ವಿರುದ್ಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೇಲ್ಮನವಿ ಸಲ್ಲಿಸಿದೆ.
‘ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ, ‘2020-21ನೇ ಸಾಲಿನಲ್ಲಿ ದ್ವಿತೀಯ ಪಿಯು ತೇರ್ಗಡೆಯಾದ ವಿದ್ಯಾರ್ಥಿಗಳು ಗಳಿಸಿದ ಶೇ 50 ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಪಡೆದ ಶೇ 50ರಷ್ಟು ಅಂಕಗಳನ್ನು ಪರಿಗಣಿಸಿ ಹೊಸದಾಗಿ ರ‍್ಯಾಂಕ್ ಪಟ್ಟಿ ಪ್ರಕಟಿಸಬೇಕು‘ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹೈಕೋರ್ಟ್ ಆದೇಶಿಸಿತ್ತು.
ಪ್ರಾಧಿಕಾರವು ಸೋಮವಾರ ಹೈಕೋರ್ಟ್‌ನಲ್ಲಿ ತೀರ್ಪನ್ನು ಪ್ರಶ್ನಿಸಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್ ಟಿಎನ್‌ಐಇಗೆ ತಿಳಿಸಿದ್ದಾರೆ.
'ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೆಇಎ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಪರಿಶೀಲನಾ ಪ್ರಕ್ರಿಯೆಯು ಸೆಪ್ಟೆಂಬರ್ 21 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಕೌನ್ಸೆಲಿಂಗ್‌ಗೆ ಅಕ್ಟೋಬರ್ 25 ರವರೆಗೆ ಸಮಯ ನೀಡಿದೆ. ವಿದ್ಯಾರ್ಥಿಗಳಿಗೆ ಇನ್ನೂ ಒಂದು ತಿಂಗಳು ಇದೆ' ಎಂದು ಅವರು ಹೇಳಿದ್ದಾರೆ.
ಆದರೆ ವಿದ್ಯಾರ್ಥಿಗಳು ಆತಂಕದಲ್ಲಿದ್ದು, 'ಇದು ನಮಗೆ ಒತ್ತಡ ಉಂಟುಮಾಡುತ್ತಿದೆ. ಯಾವ ಕಾಲೇಜು ನಮ್ಮನ್ನು ಸ್ವೀಕರಿಸುತ್ತದೆಯೋ ಗೊತ್ತಿಲ್ಲ. ನಾವು ಓದಲು ರಾಜ್ಯದಿಂದ ಹೊರಗೆ ಹೋಗುವಂತಿಲ್ಲ. ಕೆಇಎ ಮತ್ತು ಕಾಮೆಡ್-ಕೆ ಕೌನ್ಸೆಲಿಂಗ್ ಪ್ರಕ್ರಿಯೆಗಳು ಪ್ರಾರಂಭಕ್ಕೆ ನಾವು ಕಾಯುತ್ತಿದ್ದೇವೆ' ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
ಕೆಲವು ಫ್ರೆಶರ್‌ಗಳು ಇನ್ನೂ ರ‍್ಯಾಂಕ್ ಪಟ್ಟಿ ಹಂಚಿಕೆ ಮಾಡದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, 'ಫಲಿತಾಂಶ ಪ್ರಕಟವಾಗಿದ್ದರೂ ಇನ್ನೂ ರ‍್ಯಾಂಕ್ ಪಟ್ಟಿ ಹಂಚಿಕೆಯಾಗಿಲ್ಲ. ತನ್ನ ಕೆಲವು ಎನ್‌ಆರ್‌ಐ ಗೆಳೆಯರಿಗೂ ರ‍್ಯಾಂಕ್ ನೀಡಿಲ್ಲ' ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ.
ಒಸಿಐ (ಭಾರತದ ಸಾಗರೋತ್ತರ ನಾಗರಿಕತ್ವ) ವಿದ್ಯಾರ್ಥಿಗಳನ್ನು ಸೇರಿಸದಿರುವ ಕುರಿತು ಸುಪ್ರೀಂ ಕೋರ್ಟ್ ಆದೇಶವನ್ನು ಕೆಇಎ ಅನುಸರಿಸುತ್ತಿದೆ. ಕೆಸಿಇಟಿ ಕರ್ನಾಟಕದ ನಿವಾಸಿಗಳಿಗೆ ಮಾತ್ರ ಎಂದು ರಮ್ಯಾ ತಿಳಿಸಿದ್ದಾರೆ.
ಕೆಇಎ ಯಾವುದೇ ನೆರವು ನೀಡುತ್ತಿಲ್ಲ ಮತ್ತು ಪ್ರಾಧಿಕಾರಕ್ಕೆ ಮಾಡಿರುವ ತಮ್ಮ ಮೇಲ್‌ಗಳು ಮತ್ತು ಪದೇ ಪದೆ ಮಾಡುತ್ತಿರುವ ಫೋನ್ ಕರೆಗಳಿಗೆ ಉತ್ತರಿಸಿಲ್ಲ ಎಂದು ಕೆಲವು ವಿದ್ಯಾರ್ಥಿಗಳು ದೂರಿದರು.
ಎಲ್ಲಾ ಸಂಬಂಧಿತ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ ಎಂದು ಕೆಇಎ ಹೇಳಿದೆ. ಪ್ರತಿ ಕರೆಗೆ ಉತ್ತರಿಸಲು ಕೆಇಎ ಕಾಲ್ ಸೆಂಟರ್‌ಗೆ ಭೌತಿಕವಾಗಿ ಸಾಧ್ಯವಿಲ್ಲ ಮತ್ತು ಈ ವರ್ಷ ಬಂದ ಹೆಚ್ಚಿನ ಇಮೇಲ್‌ಗಳಿಗೆ ಉತ್ತರಿಸಲಾಗಿದೆ ಎಂದು ರಮ್ಯಾ ಹೇಳಿದರು.
Post a Comment