ಕಾಂಗ್ರೆಸ್ ನ ೮ ಜನ ಶಾಸಕರ ಪಕ್ಷಾಂತರ : ಬಿ ಜೆ ಪಿ ಗೆ ಸೇರಲು ಸಿದ್ದರಾಗಿದ್ದಾರೆ

 ಗೋವಾದಲ್ಲಿ ಶಾಸಕರ ಪಕ್ಷಾಂತರ ಮುಂದುವರೆದಿದ್ದು, 8 ಮಂದಿ ಕಾಂಗ್ರೆಸ್ ನ ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ.

                         ಬಿಜೆಪಿ-ಕಾಂಗ್ರೆಸ್ ಲೋಗೋ

By : Rekha.M
Online Desk

ಪಣಜಿ: ಗೋವಾದಲ್ಲಿ ಶಾಸಕರ ಪಕ್ಷಾಂತರ ಮುಂದುವರೆದಿದ್ದು, 8 ಮಂದಿ ಕಾಂಗ್ರೆಸ್ ನ ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ. 

ಈ ಮಾಹಿತೊಯನ್ನು ಬಿಜೆಪಿಯ ರಾಜ್ಯ ಘಟಕದ ಮುಖ್ಯಸ್ಥ ಸದಾನಂದ ಶೇಠ್ ತಾನವಾಡೆ ಪಿಟಿಐ ಗೆ ತಿಳಿಸಿದ್ದಾರೆ. 

40 ಮಂದಿ ಶಾಸಕರಿರುವ ಗೋವಾ ವಿಧಾನಸಭೆಯಲ್ಲಿ 11 ಮಂದಿ ಕಾಂಗ್ರೆಸ್ ನ ಶಾಸಕರಿದ್ದು ಬಿಜೆಪಿ 20 ಶಾಸಕರನ್ನು ಹೊಂದಿದೆ.  2019 ರ ಜುಲೈ ನಲ್ಲಿ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಿದ್ದರು. 

8 ಮಂದಿ ಶಾಸಕರು ಬಿಜೆಪಿ ಸೇರುವ ಬಗೆಗಿನ ಇತ್ತೀಚಿನ ವರದಿಯ ಪ್ರಕಾರ, ಶಾಸಕರಾದ ದಿಗಂಬರ್ ಕಾಮತ್, ಮೈಕಲ್ ಲೋಬೋ, ಅವರ ಪತ್ನಿ ಡೆಲಿಲಾ ಲೋಬೋ, ರಾಜೇಶ್ ಫಲ್ದೇಸಾಯಿ, ಕೇದಾರ್ ನಾಯ್ಕ್, ಸಂಕಲ್ಪ್ ಅಮೋನ್ಕರ್, ಅಲೆಕ್ಸೊ ಸಿಕ್ವೇರಾ ಮತ್ತು ರುಡಾಲ್ಫ್ ಫೆರ್ನಾಂಡಿಸ್ ಬಿಜೆಪಿ ಸೇರುತ್ತಿರುವ ಶಾಸಕರಾಗಿದ್ದಾರೆ. 

ಇತ್ತೀಚಿನ ಮಾಹಿತಿಯ ಪ್ರಕಾರ ಈ ಶಾಸಕರು ಗೋವಾ ವಿಧಾನಸಭೆಯನ್ನು ತಲುಪಿದ್ದು, ರಾಜೀನಾಮೆ ನೀಡಲಿದ್ದಾರೆ, ಬಳಿಕ ಎಲ್ಲಾ ಶಾಸಕರು ಸಿಎಂ ಸಾವಂತ್ ಅವರನ್ನು ಭೇಟಿ ಮಾಡಲಿದ್ದಾರೆ.




    Post a Comment

    Previous Post Next Post