ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಉಂಟಾಗಿರುವ ಗಲಾಟೆ ಈ ಬಾರಿಯ ಗಣೇಶ ಹಬ್ಬದೊಂದಿಗೆ ಕೊನೆಯಾಗುವ ಸಾಧ್ಯತೆ ಕಾಣುತ್ತಿಲ್ಲ. ಈಗ ಅದೇ ಸ್ಥಳದಲ್ಲಿ ಹೋಳಿ ಹಬ್ಬಕ್ಕೆ ಹೋಳಿ ಕಾಮಣ್ಣನ ಪ್ರತಿಷ್ಠಾಪನೆಗೆ ಹಿಂದೂ ಸಂಘಟನೆಗಳು ಅನುಮತಿ ನೀಡಬೇಕೆಂದು ಒತ್ತಾಯಿಸಿವೆ.
ಹುಬ್ಬಳ್ಳಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಉಂಟಾಗಿರುವ ಗಲಾಟೆ ಈ ಬಾರಿಯ ಗಣೇಶ ಹಬ್ಬದೊಂದಿಗೆ ಕೊನೆಯಾಗುವ ಸಾಧ್ಯತೆ ಕಾಣುತ್ತಿಲ್ಲ. ಈಗ ಅದೇ ಸ್ಥಳದಲ್ಲಿ ಹೋಳಿ ಹಬ್ಬಕ್ಕೆ ಹೋಳಿ ಕಾಮಣ್ಣನ ಪ್ರತಿಷ್ಠಾಪನೆಗೆ ಹಿಂದೂ ಸಂಘಟನೆಗಳು ಅನುಮತಿ ನೀಡಬೇಕೆಂದು ಒತ್ತಾಯಿಸಿವೆ.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಕರ್ನಾಟಕ ಹೈಕೋರ್ಟ್ ಕೊನೆ ಕ್ಷಣದಲ್ಲಿ ಅನುಮತಿ ನೀಡಿತ್ತು. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಗಣೇಶ ಮಂಡಳಿಗೆ ಪ್ರತಿಮೆಯನ್ನು ಸ್ಥಾಪಿಸಲು ಅನೇಕ ಷರತ್ತುಗಳೊಂದಿಗೆ ಅನುಮತಿ ನೀಡಿತ್ತು.
ಇದರ ಪರಿಣಾಮವನ್ನು ತಿಳಿದಿದ್ದ ಸ್ಥಳೀಯ ಅಧಿಕಾರಿಗಳು ವಿಷಯ ಸೂಕ್ಷ್ಮ ಎಂಬ ಕಾರಣಕ್ಕೆ ಗಣೇಶೋತ್ಸವ ಆಚರಣೆಗೆ ಅನುಮತಿ ನಿರಾಕರಿಸಲು ಯತ್ನಿಸಿದ್ದರು. ಆದರೆ, ಹೈಕೋರ್ಟ್ ಆದೇಶದ ಬಳಿಕ ವರ್ಷಕ್ಕೆ ಎರಡು ಬಾರಿ ಮುಸ್ಲಿಮರು ಈದ್ ಪ್ರಾರ್ಥನೆಗೆ ಬಳಸುತ್ತಿದ್ದ ಐತಿಹಾಸಿಕ ಮೈದಾನಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸುತ್ತಲೂ ಭದ್ರತೆ ಹೆಚ್ಚಿಸಿದ್ದಾರೆ.
'ಹೋಳಿ ಹಬ್ಬದ ಸಂದರ್ಭದಲ್ಲಿ ಕಾಮಣ್ಣ ಮತ್ತು ರಾಟಿ ಪ್ರತಿಮೆಗಳನ್ನು ಸ್ಥಾಪಿಸಲು ಅನುಮತಿ ನೀಡಬೇಕು ಎಂದು ಗಣೇಶ ಹಬ್ಬದ ಆಯೋಜಕರು ಮತ್ತು ಇತರ ಸಂಘಟನೆಗಳ ಸದಸ್ಯರು ಎಚ್‌ಡಿಎಂಸಿಯಿಂದ ಅನುಮತಿ ಕೋರಿದ್ದಾರೆ. ಉತ್ತರ ಕರ್ನಾಟಕದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಮೂರ್ತಿ ಪ್ರತಿಷ್ಠಾಪಿಸುವುದು ವಾಡಿಕೆ' ಎಂದು ಎಚ್‌ಡಿಎಂಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
'ಕಳೆದ ವಾರ, ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಈದ್ಗಾ ಮೈದಾನದಲ್ಲಿ ಸಮುದಾಯದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ಕೋರಿದ್ದರು. ಮುಂದಿನ ಸಭೆಯಲ್ಲಿ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು’ ಎಂದು ಅಧಿಕಾರಿ ತಿಳಿಸಿದರು.
ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಹುಬ್ಬಳ್ಳಿಯ ಬಲಪಂಥೀಯ ಸಂಘಟನೆಗಳು ಈದ್ಗಾ ಮೈದಾನದ ಹೆಸರನ್ನು ರಾಣಿ ಚೆನ್ನಮ್ಮ ಮೈದಾನ ಎಂದು ಬದಲಾಯಿಸುವಂತೆ ಒತ್ತಾಯಿಸುತ್ತಿವೆ. ಈ ಪ್ರತಿಮೆಯು ಹುಬ್ಬಳ್ಳಿ ನಗರದ ಕೇಂದ್ರ ಬಿಂದುವಿನಲ್ಲಿದೆ. ಅಧಿಕಾರಿಗಳು ಮೈದಾನಕ್ಕೆ ಕಿತ್ತೂರಿನ ರಾಣಿ ಚೆನ್ನಮ್ಮ ಹೆಸರಿಡಬೇಕು ಎಂದು ಒತ್ತಾಯಿಸುತ್ತಿದ್ದೇವೆ’ ಎಂದು ಹುಬ್ಬಳ್ಳಿಯ ಬಲಪಂಥೀಯ ಸಂಘಟನೆಯ ಸದಸ್ಯರೊಬ್ಬರು ತಿಳಿಸಿದ್ದಾರೆ.
'ಈ ಮೈದಾನವು ಹಲವು ವರ್ಷಗಳಿಂದ ಈದ್ಗಾ ಮೈದಾನ ಎಂದೇ ಪ್ರಸಿದ್ಧವಾಗಿದೆ. ಚೆನ್ನಮ್ಮನ ಪ್ರತಿಮೆಯನ್ನು 1980 ರಲ್ಲಿ ಸ್ಥಾಪಿಸಲಾಯಿತು. ಯಾರೇ ಈ ಮೈದಾನದ ಹೆಸರನ್ನು ಬದಲಾಯಿಸಿದರೂ, ಅದನ್ನು ಈದ್ಗಾ ಮೈದಾನ ಎಂದೇ ಕರೆಯಲಾಗುತ್ತದೆ. ಇದು ವೋಟ್ ಬ್ಯಾಂಕ್ ರಾಜಕಾರಣವಲ್ಲದೆ ಮತ್ತೇನೂ ಅಲ್ಲ’ ಎಂದು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿರೋಧಿಸಿದ ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದರು.
Post a Comment