ಭಾರತೀಯ ಅಮೆರಿಕನ್ನರು ಅಮೆರಿಕ ರಾಜಧಾನಿಯಲ್ಲಿ 'ಆಜಾದಿ ಕಾ ಮಹೋತ್ಸವ' ಆಚರಿಸುತ್ತಿರುವ ಸಂದರ್ಭದಲ್ಲಿ ನೀಡಿದ ತಮ್ಮ ಸಂದೇಶದಲ್ಲಿ ಪ್ರಧಾನಿ ಮೋದಿ ಭಾರತ-ಯುಎಸ್ ಅಭಿವೃದ್ಧಿ ಪಾಲುದಾರಿಕೆ ಬಗ್ಗೆ ಪ್ರಸ್ತಾಪಿಸಿದ್ದಾರೆ.
ನರೇಂದ್ರ ಮೋದಿ (ಸಂಗ್ರಹ ಚಿತ್ರ)
ನವದೆಹಲಿ: ಭಾರತದ ಬೆಳವಣಿಗೆಯಲ್ಲಿ ಅಮೆರಿಕ ನಿರ್ಣಾಯಕ ಪಾಲುದಾರ ಎಂದು ಪ್ರಧಾನಮಂತ್ರಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಯುಎಸ್ ಕ್ಯಾಪಿಟಲ್‌ನಲ್ಲಿ “ಆಜಾದಿ ಕಾ ಮಹೋತ್ಸವ” ಕಾರ್ಯಕ್ರಮದ ಮೂಲಕ 75 ವರ್ಷಗಳ ಭಾರತದ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತೀಯ ವಲಸಿಗರನ್ನು ಅವರು ಶ್ಲಾಘಿಸಿದ್ದಾರೆ.
ಭಾರತೀಯ ಅಮೆರಿಕನ್ನರು ಅಮೆರಿಕ ರಾಜಧಾನಿಯಲ್ಲಿ 'ಆಜಾದಿ ಕಾ ಮಹೋತ್ಸವ' ಆಚರಿಸುತ್ತಿರುವ ಸಂದರ್ಭದಲ್ಲಿ ನೀಡಿದ ತಮ್ಮ ಸಂದೇಶದಲ್ಲಿ ಪ್ರಧಾನಿ ಮೋದಿ ಭಾರತ-ಯುಎಸ್ ಅಭಿವೃದ್ಧಿ ಪಾಲುದಾರಿಕೆ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಮುಂದಿನ 25 ವರ್ಷಗಳಲ್ಲಿ ಭಾರತದ ಬೆಳವಣಿಗೆಯ ಪಯಣದಲ್ಲಿ ಅಮೆರಿಕ ಪ್ರಮುಖ ಪಾಲುದಾರನಾಗಲಿದೆ. ಅಮೆರಿಕ ರಾಜಧಾನಿಯಲ್ಲಿ ನಡೆಯುವ ಆಚರಣೆಯು ಭಾರತ ಮತ್ತು ಯು.ಎಸ್. ನಡುವಿನ ಸ್ನೇಹದ ನಿರ್ಣಾಯಕ ಮೈಲಿಗಲ್ಲು ಆಗಲಿದೆ ಎಂದು ಹೇಳಿದ್ದಾರೆ.
ಜಾಗತಿಕ ಭಾರತೀಯರು ಒಂದೇ ಸಮಯದಲ್ಲಿ ಹಲವಾರು ಆಯಾಮಗಳ ಮೂಲಕ ಭಾರತದೊಂದಿಗೆ ಸಂಪರ್ಕ ಸಾಧಿಸುವ ವಿಧಾನಕ್ಕೆ ಒಂದು ವಿಶಿಷ್ಟ ಉದಾಹರಣೆಯಾಗಿದ್ದಾರೆ. ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ. ಈ ಸ್ವಾತಂತ್ರ್ಯವನ್ನು ವಿಶಿಷ್ಟ ರೀತಿಯಲ್ಲಿ ಗೆದ್ದುಕೊಳ್ಳಲಾಯಿತು, ಅತ್ಯುತ್ತಮ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಲಾಯಿತು. ಆದ್ದರಿಂದ ಭಾರತವು ಶಾಂತಿ ಮತ್ತು ಸ್ವಾತಂತ್ರ್ಯದ ಆದರ್ಶಗಳನ್ನು ಪ್ರೀತಿಸುವ ಯಾರಿಗಾದರೂ ಸ್ಫೂರ್ತಿಯ ಮೂಲವಾಗಿದೆ ಎಂದು ಮೋದಿ ತಿಳಿಸಿದ್ದಾರೆ.
1947 ರ ನಂತರ ಭಾರತದ ಪ್ರಯಾಣದ ಐತಿಹಾಸಿಕ ಮೈಲಿಗಲ್ಲನ್ನು ಆಚರಿಸಲು ಸುಮಾರು 75 ಭಾರತೀಯ ಅಮೇರಿಕನ್ ಸಂಘಗಳು ಒಟ್ಟಾಗಿ ಸೇರಿಕೊಂಡಿವೆ. ಸನಾತನ ಸಂಸ್ಕೃತಿಗಾಗಿ ಸರ್ದಾರ್ ಪಟೇಲ್ ನಿಧಿ, US ಇಂಡಿಯಾ ರಿಲೇಶನ್‌ಶಿಪ್ ಕೌನ್ಸಿಲ್, ಏಕಲ್ ವಿದ್ಯಾಲಯ ಫೌಂಡೇಶನ್ ಸೇವಾ ಇಂಟರ್ನ್ಯಾಷನಲ್, , GOPIO ಸಿಲಿಕಾನ್ ವ್ಯಾಲಿ, ಹಿಂದೂ ಸ್ವಯಂಸೇವಕ ಸಂಘ, ಮತ್ತು US ಇಂಡಿಯಾ ಫ್ರೆಂಡ್‌ಶಿಪ್ ಕೌನ್ಸಿಲ್ ಇತ್ಯಾದಿ ಸಂಘಟನೆಗಳು ಸೇರಿವೆ.
Post a Comment