ಕೇಸರಿ ಪಕ್ಷ ಬಿಜೆಪಿಯನ್ನು, ಹಿಂದೂ ಧರ್ಮವನ್ನು ಹೆಚ್ಚು ಮಂದಿ ಅನುಸರಿಸುವ ಕರಾವಳಿ ಜಿಲ್ಲೆ ಮಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಂದು ಹೋಗಿ ಆಗಿದೆ. ಯಥಾಪ್ರಕಾರ ಕರಾವಳಿ ಮಂದಿ ಮೋದಿ...ಮೋದಿ..ಎಂದು ಉದ್ಘಾರ,,ಘೋಷ ಕೂಗುತ್ತಾ ಬಹಳ ಪ್ರೀತಿಯಿಂದ ಬರಮಾಡಿಕೊಂಡು ಅಕ್ಕರೆಯಿಂದ ಬೀಳ್ಕೊಟ್ಟಿದ್ದಾರೆ.
ನವದೆಹಲಿ: ಕೇಸರಿ ಪಕ್ಷ ಬಿಜೆಪಿಯನ್ನು, ಹಿಂದೂ ಧರ್ಮವನ್ನು ಹೆಚ್ಚು ಮಂದಿ ಅನುಸರಿಸುವ ಕರಾವಳಿ ಜಿಲ್ಲೆ ಮಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಂದು ಹೋಗಿ ಆಗಿದೆ. ಯಥಾಪ್ರಕಾರ ಕರಾವಳಿ ಮಂದಿ ಮೋದಿ... ಮೋದಿ.. ಎಂದು ಉದ್ಘಾರ, ಘೋಷ ಕೂಗುತ್ತಾ ಬಹಳ ಪ್ರೀತಿಯಿಂದ ಬರಮಾಡಿಕೊಂಡು ಅಕ್ಕರೆಯಿಂದ ಬೀಳ್ಕೊಟ್ಟಿದ್ದಾರೆ.
ಬರೋಬ್ಬರಿ 3,800 ಕೋಟಿ ರೂಪಾಯಿ ಮೊತ್ತದ 8 ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗರ ಪ್ರೀತಿ, ಅಕ್ಕರೆಗೆ ಮನಸೋತುಹೋಗಿದ್ದಾರೆ. ಮಂಗಳೂರು ಭೇಟಿ ಬಗ್ಗೆ ಇಂದು ಕನ್ನಡದಲ್ಲೇ ಟ್ವೀಟ್ ಮಾಡಿದ್ದಾರೆ. 'ಮಂಗಳೂರಿನ ಜನರ ಪ್ರೀತಿ, ಅಕ್ಕರೆಗೆ ವಿನಮ್ರನಾಗಿರುವೆ. ಪ್ರಮುಖ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದುದು ಸಂತಸ ತಂದಿದೆ' ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನಿನ್ನೆ ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಆಯೋಜನೆ ಮಾಡಲಾಗಿದ್ದ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ನಮೋ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ನೀಡಿದ್ದರು.
'ಮೇಕ್ ಇನ್ ಇಂಡಿಯಾ' ಸ್ವಾವಲಂಬನೆಯ ವಿಸ್ತರಣೆ ಅಗತ್ಯ ಇಂದು ದೇಶಕ್ಕೆ ಹೆಚ್ಚಾಗಿದೆ. ದೇಶದಲ್ಲಿ ಮೂಲಭೂತ ಸೌಲಭ್ಯಗಳಲ್ಲಿ ಅಭೂತಪೂರ್ವ ಕಾರ್ಯವಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಬಂದರುಗಳ ಸಾಮರ್ಥ್ಯ ದುಪ್ಪಟ್ಟಾಗಿದೆ. ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು, ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಎಂದು ಪ್ರಧಾನಿ ನಿನ್ನೆ ಭಾಷಣದಲ್ಲಿ ಹೇಳಿದ್ದರು.
Post a Comment